»   » ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರಕ್ಕೆ ನಾಯಕಿಯರು ಬೇಕಾಗಿದ್ದಾರೆ?

ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರಕ್ಕೆ ನಾಯಕಿಯರು ಬೇಕಾಗಿದ್ದಾರೆ?

Posted By:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಿರ್ದೇಶಕ ಯೋಗರಾಜ್ ಭಟ್ ಕಾಂಬಿನೇಷನ್ ನಲ್ಲಿ ಸಿನಿಮಾ ಬರುತ್ತಿರುವುದು ನಿಮ್ಗೆಲ್ಲಾ ಗೊತ್ತೆ ಇದೆ. ಸದ್ಯ, ಈ ಚಿತ್ರದ ಸ್ಕ್ರಿಪ್ಟ್ ವರ್ಕ್ ಕಂಪ್ಲೀಟ್ ಆಗಿದ್ದು, ಆದಷ್ಟೂ ಬೇಗ ಶೂಟಿಂಗ್ ಶುರು ಮಾಡುವ ತಯಾರಿಯಲ್ಲಿದೆ ಚಿತ್ರತಂಡ.

ಗಣೇಶ್ ಹಾಗೂ ಭಟ್ಟರ ಜುಗಲ್ ಬಂದಿಯಲ್ಲಿ ಮೂಡಲಿರುವ ಮೂರನೇ ಸಿನಿಮಾ ಇದಾಗಿದ್ದು, ರೊಮ್ಯಾಂಟಿಕ್ ಲವ್ ಸ್ಟೋರಿಯಾಗಿದೆ.[ಗಣೇಶ್ ಮತ್ತು ಯೋಗರಾಜ್ ಭಟ್ ಅಡ್ಡದಿಂದ ಇದೀಗ ಬಂದ ಸುದ್ದಿ]

ಇನ್ನೂ ಈ ಚಿತ್ರದ ವಿಶೇಷ ಅಂದ್ರೆ, ಚಿತ್ರದಲ್ಲಿ ನಾಲ್ಕು ಜನ ಹೀರೋಯಿನ್ಸ್ ಗಣೇಶ್ ಜೊತೆ ಡುಯೆಟ್ ಹಾಡಲಿದ್ದು, ಹೊಸಬರಿಗೆ ಅವಕಾಶ ನೀಡಲಾಗುತ್ತೆ ಅಂತ ಹೇಳಲಾಗ್ತಿತ್ತು. ಈಗ ಚಿತ್ರತಂಡದಿಂದ ಬಂಫರ್ ಆಫರ್ ಒದಗಿ ಬಂದಿದ್ದು, ನೀವು ಈ ಚಿತ್ರಕ್ಕೆ ನಾಯಕಿಯಾಗಬಹುದು. ಮುಂದೆ ಓದಿ...

ಗಣೇಶ್-ಭಟ್ ಸಿನಿಮಾಗೆ ನಾಯಕಿಯರು ಬೇಕಾಗಿದ್ದಾರೆ

ಸ್ಟಾರ್ ಡೈರೆಕ್ಟರ್ ಯೋಗರಾಜ್ ಭಟ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಜೋಡಿಯ ಹ್ಯಾಟ್ರಿಕ್ ಸಿನಿಮಾಗೆ ನಾಯಕ ನಟಿಯರು ಬೇಕಾಗಿದ್ದಾರೆ ಎಂದು, ಸ್ವತಃ ಚಿತ್ರತಂಡವೇ ಪ್ರಕಟಣೆ ನೀಡಿದೆ.[ಪುನೀತ್ ಗೆ 'ಜಾಮೂನು' ತಿನ್ನಿಸಿದ್ದ ಭಟ್ಟರು, ಗಣೇಶ್ ಗೂ 'ಜಾಮೂನು' ಕೊಟ್ಟರು!]

ಅರ್ಹತೆ ಏನು?

ನೋಡುವುದಕ್ಕೆ ಸುಂದರವಾಗಿರಬೇಕು. ವಯಸ್ಸು 19 ರಿಂದ 24 ದಾಟಿರಬಾರದು. ಅಭಿನಯದ ಬಗ್ಗೆ ಆಸಕ್ತಿ ಇರಬೇಕು. ಇಷ್ಟಿದ್ದಾರೆ ಸಾಕು, ನೀವು ಆಡಿಷನ್ ನಲ್ಲಿ ಭಾಗಿಯಾಗಬಹುದು.

ಆಡಿಷನ್ ಯಾವಾಗ?

ಇದೇ ತಿಂಗಳು 28 ಹಾಗೂ 29 ರಂದು, ಗೋಲ್ಡನ್ ಸ್ಟಾರ್ ಚಿತ್ರಕ್ಕಾಗಿ ಆಡಿಷನ್ ನಡೆಯಲಿದೆಯಂತೆ.

ನಾಲ್ವರು ಹೀರೋಯಿನ್ಸ್

ಗಣಿ-ಭಟ್ ಹ್ಯಾಟ್ರಿಕ್ ಕಾಂಬಿನೇಷನ್ ನ ಈ ಚಿತ್ರದಲ್ಲಿ ನಾಲ್ವರು ನಾಯಕಿಯರ ಜೊತೆ ಗಣೇಶ್ ರೊಮ್ಯಾನ್ಸ್ ಮಾಡಲಿದ್ದಾರಂತೆ. ನಾಲ್ವರು ಹೀರೋಯಿನ್ ಗಳ ಪೈಕಿ ಸದ್ಯ ಸ್ಯಾಂಡಲ್ ವುಡ್ ನಲ್ಲಿ ಲೀಡಿಂಗ್ ಇರುವ ನಟಿ ಜೊತೆ ಹೊಸಬರಿಗೂ ಚಾನ್ಸ್ ಸಿಗಲಿದೆ.[ಗೋಲ್ಡನ್ ಸ್ಟಾರ್ ಗಣೇಶ್, ಭಟ್ ಹ್ಯಾಟ್ರಿಕ್ ಕಾಂಬಿನೇಷನ್ ಚಿತ್ರ]

ಇಬ್ಬರು ಆಯ್ಕೆಯಾಗಿದ್ದಾರೆ !

ಈಗಾಗಲೇ ಚಿತ್ರಕ್ಕೆ ಇಬ್ಬರು ನಾಯಕಿಯರು ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಮೂಲಗಳ ಪ್ರಕಾರ, 'ಕಿರಿಕ್ ಪಾರ್ಟಿ' ಚಿತ್ರದ ನಾಯಕಿ ರಶ್ಮಿಕಾ, ಹಾಗೂ ನಭಾ ನಟೇಶ್ ಹೆಸರು ಈ ಚಿತ್ರದ ನಾಯಕಿಯರ ಪಟ್ಟಿಯಲ್ಲಿ ಕೇಳಿಬರುತ್ತಿದ್ದು, ಇದನ್ನ ಚಿತ್ರತಂಡವೇ ಸ್ವಷ್ಟಪಡಿಸಬೇಕಿದೆ.

English summary
According to the sources, Director Yogaraj Bhat and Kannada Actor Ganesh's Hattrick Combination Movie is titled as 'Jaamunu'. now they are searching for heroines.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada