For Quick Alerts
  ALLOW NOTIFICATIONS  
  For Daily Alerts

  ಸೂರಿ ಕುರಿತ ಬಹುದೊಡ್ಡ ಗುಟ್ಟು ರಟ್ಟು ಮಾಡಿದ ಯೋಗರಾಜ್ ಭಟ್.!

  By Harshitha
  |

  ನಿರ್ದೇಶಕ ಯೋಗರಾಜ್ ಭಟ್ ಜೊತೆ ಐದು ನಿಮಿಷ ಮಾತನಾಡಿದ್ರೆ, ಗ್ಯಾರೆಂಟಿ ನಿಮಗೆ ತಲೆಗೆ ಹುಳ ಅಲ್ಲ ಹೆಬ್ಬಾವು ಬಿಟ್ಹಂಗೆ ಆಗುತ್ತೆ. ಯಾಕಂದ್ರೆ, ಭಟ್ರು ಹೊಗಳುತ್ತಿದ್ದಾರಾ, ಬೈಯ್ತಿದ್ದಾರಾ ಅಥವಾ ಕಾಲೆಳೆಯುತ್ತಿದ್ದಾರಾ ಅಂತ್ಲೇ ಕ್ಲಾರಿಟಿ ಸಿಗಲ್ಲ.

  ಆದರೂ, ಒಳ್ಳೆ ಸೆನ್ಸ್ ಆಫ್ ಹ್ಯೂಮರ್ ಇರುವ ಮನುಷ್ಯ ಯೋಗರಾಜ್ ಭಟ್. ಸಿನಿಮಾದ ಹಾಡುಗಳಲ್ಲಿ 'ಎಬಡ ತಬಡ..' ಸಾಹಿತ್ಯ ಬರೆಯುವಲ್ಲಿ ಖ್ಯಾತಿ ಪಡೆದಿರುವ ಯೋಗರಾಜ್ ಭಟ್ರು ನಿನ್ನೆ ನಡೆದ 'ದೊಡ್ಮನೆ ಹುಡ್ಗ' ಚಿತ್ರದ ಪತ್ರಿಕಾಗೋಷ್ಟಿಯಲ್ಲಿ ದುನಿಯಾ ಸೂರಿ ಬಗ್ಗೆ ಕಾಮೆಂಟ್ ಮಾಡಿದ್ರು. ['ದೊಡ್ಮನೆ ಹುಡ್ಗ' ಬಗ್ಗೆ ಯೋಗರಾಜ್ ಭಟ್ ಬಾಯಿಂದ ಸಿಡಿದ ನಗೆ ಬಾಂಬ್!]

  ಜಸ್ಟ್ ಕಾಮೆಂಟ್ ಆಗಿದ್ರೆ ಪರ್ವಾಗಿಲ್ಲ, ಮೂರ್ನಾಲ್ಕು ತಿಂಗಳುಗಳಿಂದ ಸೀರಿಯಸ್ ಆಗಿ ಸೂರಿ ಮಾಡುತ್ತಿದ್ದ ಕೆಲಸವೊಂದರ ಗುಟ್ಟನ್ನ ಮಾಧ್ಯಮಗಳ ಮುಂದೆ ರಟ್ಟು ಮಾಡ್ಬಿಟ್ರು ಭಟ್ರು.

  ಏನಿದು ಸೂರಿ ಯವರ ಗುಟ್ಟು-ರಟ್ಟು ಅಂತ ತಿಳಿಯುವ ಕುತೂಹಲ ನಿಮ್ಗೆ ಇದ್ದರೆ, ಕೆಳಗಿರುವ ಫೋಟೋ ಸ್ಲೈಡ್ ಗಳಲ್ಲಿ ಸಂಪೂರ್ಣ ಮಾಹಿತಿ ಓದಿರಿ...

  'ಟಗರು' ಮುಹೂರ್ತದ ವೇಳೆ ಸೂರಿ ಹೇಗಿದ್ದರು.?

  'ಟಗರು' ಮುಹೂರ್ತದ ವೇಳೆ ಸೂರಿ ಹೇಗಿದ್ದರು.?

  ಅಸಲಿ ಮ್ಯಾಟರ್ ಗೆ ಬರುವ ಮುನ್ನ, ಇತ್ತೀಚೆಗಷ್ಟೇ ನಡೆದ 'ಟಗರು' ಚಿತ್ರದ ಮುಹೂರ್ತ ಸಮಾರಂಭದಲ್ಲಿ ಸೂರಿ ಹೇಗೆ ಕಾಣ್ತಿದ್ರು ಅಂತ ಸ್ವಲ್ಪ ನೆನಪಿಸಿಕೊಳ್ಳಿ. ಕಳೆದ ವರ್ಷಕ್ಕೆ ಹೋಲಿಸಿದ್ರೆ, ಸೂರಿ ಸ್ವಲ್ಪ ತೆಳ್ಳಗೆ ಆದ ಹಾಗೆ ಕಾಣಲ್ವಾ.?

  ಸೂರಿ ಡಯೆಟ್ ಮಾಡ್ತಿದ್ದಾರಾ.?

  ಸೂರಿ ಡಯೆಟ್ ಮಾಡ್ತಿದ್ದಾರಾ.?

  ಸೂರಿಯ ಹೊಸ ಮೇಕ್ ಓವರ್ ನೋಡಿ, ''ಅವರು ಏನಾದ್ರೂ ಡಯೆಟ್ ಮಾಡ್ತಿದ್ದಾರಾ?'' ಅಂತ ಎಲ್ಲರೂ ಮಾತನಾಡಿಕೊಳ್ಳುವಾಗಲೇ ಸೂರಿಯ ಹೊಸ ಲುಕ್ ಬಗೆಗಿನ ಗುಟ್ಟು ಬಿಟ್ಟುಕೊಟ್ಟರು ಯೋಗರಾಜ್ ಭಟ್. ಆ ಗುಟ್ಟು ಏನು ಅಂತ ತಿಳಿಯಲು ಮುಂದಿನ ಸ್ಲೈಡ್ ಕ್ಲಿಕ್ ಮಾಡಿ....

  ರಟ್ಟಾದ 'ಆ' ಗುಟ್ಟು ಇದೇ.!

  ರಟ್ಟಾದ 'ಆ' ಗುಟ್ಟು ಇದೇ.!

  'ದೊಡ್ಮನೆ ಹುಡ್ಗ' ಪತ್ರಿಕಾಗೋಷ್ಟಿ ನಡೆಯುತ್ತಿರುವ ಗ್ಯಾಪ್ ನಲ್ಲಿ ಮೈಕ್ ಹಿಡಿದ ಯೋಗರಾಜ್ ಭಟ್ರು ''ಸೂರಿ ಸಿಕ್ಸ್ ಪ್ಯಾಕ್ ಮಾಡ್ತಿದ್ದಾನೆ'' ಎಂಬ ಗುಟ್ಟು ರಟ್ಟು ಮಾಡಿದರು.

  ಎಲ್ರೂ ನಕ್ಬಿಟ್ರು!

  ಎಲ್ರೂ ನಕ್ಬಿಟ್ರು!

  ''ದಯವಿಟ್ಟು ನಗಬೇಡಿ. ತುಂಬಾ ಸೀರಿಯಸ್ ಆಗಿ ಮಾಡ್ತಿದ್ದಾನೆ. ಮೂರ್ನಾಲ್ಕು ತಿಂಗಳಿನಿಂದ ತುಂಬಾ ಹತ್ತಿರದಿಂದ ನೋಡಿದ್ದೇವೆ'' ಅಂತ ಮತ್ತೊಮ್ಮೆ ಸ್ಪಷ್ಟವಾಗಿ ಹೇಳಿದರು ಯೋಗರಾಜ್ ಭಟ್

  ಸದ್ಯಕ್ಕೆ ಮೂರೇ ಪ್ಯಾಕ್

  ಸದ್ಯಕ್ಕೆ ಮೂರೇ ಪ್ಯಾಕ್

  ''ಸಿಕ್ಸ್ ಪ್ಯಾಕ್ ನಲ್ಲಿ ಆರು ಪ್ಯಾಕ್ ಇರುತ್ತೆ. ಮೂರು ಮೂಡಿದೆ. ಇನ್ನೂ ಮೂರು ಮೂಡುವ ಹಂತದಲ್ಲಿ ಇದೆ'' - ಯೋಗರಾಜ್ ಭಟ್

  ಮೂರು ಪ್ಯಾಕ್ ಗೆ ಮೂರು ಹಾಡುಗಳು

  ಮೂರು ಪ್ಯಾಕ್ ಗೆ ಮೂರು ಹಾಡುಗಳು

  ''ದೊಡ್ಮನೆ ಹುಡ್ಗ' ಚಿತ್ರಕ್ಕೆ ನಾನು ಬರೆದ ಮೂರು ಹಾಡುಗಳನ್ನ, ಸೂರಿ ಮಾಡಿರುವ ಮೂರು ಪ್ಯಾಕ್ ಗೆ ಅರ್ಪಿಸಲು ಇಷ್ಟ ಪಡುತ್ತೇನೆ'' - ಯೋಗರಾಜ್ ಭಟ್

  English summary
  Kannada Director Duniya Soori is sporting a six pack. This news was revealed by Director Yogaraj Bhat during the First Press meet of 'Doddmane Hudga' held at Hotel Citadel on August 25th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X