»   » ಪವನ್, ಯೋಗರಾಜ್ ಭಟ್ ಒಂದಾದ ಗುರು ಶಿಷ್ಯರು

ಪವನ್, ಯೋಗರಾಜ್ ಭಟ್ ಒಂದಾದ ಗುರು ಶಿಷ್ಯರು

Posted By:
Subscribe to Filmibeat Kannada
ಗುರು ಶಿಷ್ಯರು ಒಂದಾಗಿದ್ದಾರೆ. ಇಷ್ಟು ದಿನ ಇಬ್ಬರೂ ದೂರವಾಗಿಯೇನು ಇರಲಿಲ್ಲ. ಅವರ ಕೆಲಸದಲ್ಲಿ ಇವರು, ಇವರ ಕೆಲಸದಲ್ಲಿ ಅವರು ಮೂಗುತೂರಿಸುತ್ತಿರಲಲ್ಲ ಅಷ್ಟ್ಟೇ. ಈಗ ಶಿಷ್ಯ ಕಾಮಿಡಿ ಚಿತ್ರ ಮಾಡಿ ಗೆದ್ದಿದ್ದಾನೆ. ಆದರೆ ಗುರುಗಳ ಚಿತ್ರಗಳು ಯಾಕೋ ಏನೋ ಗಾಂಧಿನಗರದಲ್ಲಿ ಭರವಸೆ ಮೂಡಿಸುತ್ತಿಲ್ಲ.

ಇಲ್ಲಿ ಶಿಷ್ಯ ಅಂದ್ರೆ ಪವನ್ ಒಡೆಯರ್, ಇವರ ಗುರುಗಳೇ ಯೋಗರಾಜ್ ಭಟ್. ಪವನ್ ಒಡೆಯರ್ ನಿರ್ದೇಶನದ ಚೊಚ್ಚಲ 'ಗೋವಿಂದಾಯ ನಮಃ' ಚಿತ್ರ ಅರ್ಧ ಸೆಂಚುರಿ ಬಾರಿಸಿ ಮುನ್ನುಗ್ಗುತ್ತಿದೆ. ಈ ಚಿತ್ರಕ್ಕೆ ಎಲ್ಲಡೆಯಿಂದಲೂ ಮೆಚ್ಚುಗೆ ವ್ಯಕ್ತವಾಗಿತ್ತು.

ಸದ್ಯಕ್ಕೆ 'ಡ್ರಾಮಾ'ದಲ್ಲಿ ಯೋಗರಾಜ್ ಭಟ್ಟರು ಬಿಜಿಯಾಗಿದ್ದಾರೆ. ಆ ಚಿತ್ರ ಮುಗಿದ ಕೂಡಲೆ ತಮ್ಮ ಶಿಷ್ಯ ಪವನ್ ಜೊತೆ ಕೈಜೋಡಿಸಿ ಒಂದು ಚಿತ್ರವನ್ನು ನಿರ್ಮಿಸಲು ಮುಂದಾಗಿದ್ದಾರೆ. ಈ ಬಾರಿಯೂ ಪವನ್ ತಮ್ಮ ಗುರುಗಳಿಗಾಗಿ ಕಾಮಿಡಿ ಚಿತ್ರವನ್ನು ನಿರ್ದೇಶಿಸಲಿದ್ದಾರಂತೆ.

ಇಬ್ಬರೂ ಕೂತು ಆಯ್ಕೆ ಮಾಡಿಕೊಂಡಿರುವ ನಟ ಲೂಸ್ ಮಾದ ಅಲಿಯಾಸ್ ಯೋಗೇಶ್. ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಚಿತ್ರ ನಿರ್ಮಾಣದ ಜೊತೆಗೆ ಸಾಹಿತ್ಯವನ್ನೂ ಭಟ್‌ರು ಬರೆಯಲಿದ್ದಾರೆ. ಉಳಿದದ್ದೆಲ್ಲಾ ಶಿಷ್ಯನಿಗೆ ಬಿಟ್ಟಿದ್ದಾರೆ. ಹೆಚ್ಚಿನ ವಿವರಗಳು 'ಡ್ರಾಮಾ' ನಂತರ ನಿರೀಕ್ಷಿಸಬಹುದು. (ಒನ್‌ಇಂಡಿಯಾ ಕನ್ನಡ)

English summary
Yograj Bhat teams up with Govindaya Namaha director Pawan Wadeyar. Sources state that Yogish will play the male lead. Besides producing, Yogaraj will be penning the lyrics for the songs as well. The other details are awaited.
Please Wait while comments are loading...