For Quick Alerts
  ALLOW NOTIFICATIONS  
  For Daily Alerts

  'ನನ್ನ ಹುಟ್ದಬ್ಬ, ಎಷ್ಟು ಕತ್ತೆ ವಯಸ್ಸಾಯ್ತೋ ಗೊತ್ತಿಲ್ಲ....', ಎಲ್ರಿಗೂ ಧನ್ಯವಾದ

  |

  ವಿಕಟಕವಿ ಯೋಗರಾಜ್ ಭಟ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ತಮ್ಮ ಜನುಮದಿನಕ್ಕೆ ಶುಭಕೋರಿದ ಅಭಿಮಾನಿಗಳಿಗೆ ಭಟ್ಟರು ವಿಶೇಷವಾಗಿ ಧನ್ಯವಾದ ಹೇಳಿದ್ದಾರೆ.

  ತಮ್ಮ ಸ್ಟೈಲ್‌ನಲ್ಲಿ ಟ್ವೀಟ್ ಮಾಡಿರುವ ನಿರ್ದೇಶಕರು ''ನನ್ನ ಹಟ್ದಬ್ಬ...ಎಷ್ಟು ಕತ್ತೆ ವಯಸ್ಸಾಯ್ತೋ ಗೊತ್ತಿಲ್ಲ...ಸಂತಸ, ಧಾವಂತ, ಗಡಿಬಿಡಿ...ವಿಪರೀತ ಕೆಲಸ, ಏನೋ ನೆಮ್ಮದಿ...ಎಲ್ರಿಗೂ ನಮನ + ಧನ್ಯವಾದ'' ಎಂದು ಬರೆದುಕೊಂಡಿದ್ದಾರೆ.

  'ಪರಮಾತ್ಮ'ನನ್ನು ಸ್ಮರಿಸಿದ ಯೋಗರಾಜ್ ಭಟ್-ಜಯಣ್ಣ ಫಿಲಂಸ್'ಪರಮಾತ್ಮ'ನನ್ನು ಸ್ಮರಿಸಿದ ಯೋಗರಾಜ್ ಭಟ್-ಜಯಣ್ಣ ಫಿಲಂಸ್

  ಭಟ್ಟರು ಹುಟ್ಟುಹಬ್ಬಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಶುಭಕೋರಿದ್ದು ''ತಮ್ಮ ತಲೆಕೆಡಿಸುವ ತರಲೆ ಬರಹಗಳ ಮೂಲಕ ಜೀವನದ ಗಂಭೀರ ತತ್ವಗಳನ್ನು ಮಜವಾಗಿ ಹೇಳುವ ಪ್ರೀತಿಯ ಭಟ್ರಿಗೆ ಹುದ್ದಿಟ ಹಬ್ಬದ ಶುಶಾಭಯ ಅಲ್ಲಲ್ಲ ಹುಟ್ಟಿದ ಹಬ್ಬದ ಶುಭಾಶಯ'' ಎಂದಿದ್ದಾರೆ.

  ರಕ್ಷಿತ್ ಶೆಟ್ಟಿ ಸಹ ವಿಶ್ ಮಾಡಿದ್ದು ''ಪ್ರೀತಿಯ ಯೋಗರಾಜ್ ಭಟ್ ಸರ್ ರವರಿಗೆ ಜನ್ಮ ದಿನದ ಶುಭಾಶಯಗಳು'' ಎಂದು ಟ್ವೀಟ್ ಮಾಡಿದ್ದಾರೆ.

  ಇನ್ನು ಯೋಗರಾಜ್ ಭಟ್ ಸದ್ಯ ಗಾಳಿಪಟ-2 ಚಿತ್ರದ ಮಾಡುತ್ತಿದ್ದಾರೆ. ಗಣೇಶ್, ಲೂಸಿಯಾ ಖ್ಯಾತಿಯ ಪವನ್ ಕುಮಾರ್, ದಿಗಂತ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ.

  Yogaraj Bhat Thanks Fans and Family for the Birthday Wishes in Funny Post
  ಅಲೆಗಳನ್ನು ಯಾರು ತಡೆಯಲು ಆಗುವುದಿಲ್ಲ ಎಂದು Yash | Filmibeat Kannada

  ಯೋಗರಾಜ್ ಭಟ್ ಇದುವರೆಗೂ ಮಣಿ, ರಂಗ ಎಸ್‌ಎಸ್‌ಎಲ್‌ಸಿ, ಮುಂಗಾರುಮಳೆ, ಗಾಳಿಪಟ, ಮನಸಾರೆ, ಪಂಚರಂಗಿ, ಪರಮಾತ್ಮ, ಡ್ರಾಮಾ, ವಾಸ್ತು ಪ್ರಕಾರ, ದನಕಾಯೋನು, ಮುಗುಳುನಗೆ, ಪಂಚತಂತ್ರ ಅಂತಹ ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ.

  English summary
  Director Yogaraj Bhat thanks fans and family for the Birthday Wishes in Funny Post.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X