»   » 'ಮಹಾಭಾರತ' ಸಿನಿಮಾ ಮಾಡಲಿದ್ದಾರಂತೆ ಯೋಗರಾಜ್ ಭಟ್

'ಮಹಾಭಾರತ' ಸಿನಿಮಾ ಮಾಡಲಿದ್ದಾರಂತೆ ಯೋಗರಾಜ್ ಭಟ್

Posted By:
Subscribe to Filmibeat Kannada

ಯೋಗರಾಜ್ ಭಟ್ ನಿರ್ದೇಶನದ 'ಮುಗುಳುನಗೆ' ಇದೇ ವಾರ ರಿಲೀಸ್ ಆಗುತ್ತಿದೆ. ಈ ನಡುವೆ ಈಗ ಯೋಗರಾಜ್ ಭಟ್ ಬಗ್ಗೆ ಒಂದು ಬಿಗ್ ಬ್ರೇಕಿಂಗ್ ನ್ಯೂಸ್ ಹೊರಬಂದಿದೆ. ಭಟ್ಟರು 'ಮಹಾಭಾರತ' ಚಿತ್ರವನ್ನು ಮಾಡುತ್ತಾರೆ ಎಂಬ ಸುದ್ದಿ ಈಗ ಎಲ್ಲೆಡೆ ಹರಿದಾಡುತ್ತಿದೆ.

ಕನ್ನಡದಲ್ಲಿ ಈಗ ಮಹಾಭಾರತದ 'ಕುರುಕ್ಷೇತ್ರ' ಸಿನಿಮಾ ತಯಾರಾಗುತ್ತಿದೆ. ಅದ್ಧೂರಿಯಾಗಿ ಸೆಟ್ಟೇರಿದ್ದ ಈ ಸಿನಿಮಾದ ಚಿತ್ರೀಕರಣ ಈಗ ನಡೆಯುತ್ತಿದೆ. ಇದೀಗ ಯೋಗರಾಜ್ ಭಟ್ ರವರ ಕಣ್ಣು ಕೂಡ 'ಮಹಾಭಾರತ'ದ ಕಡೆ ತಿರುಗಿದೆ. ಮುಂದೆ ಓದಿ...

ಏನಿದು ಸುದ್ದಿ..?

ಯೋಗರಾಜ್ ಭಟ್ ಹೆಸರು ಕೇಳಿದ ತಕ್ಷಣ ಲವ್ ಸ್ಟೋರಿ ಸಿನಿಮಾಗಳು ನೆನಪಾಗುತ್ತದೆ. ಆದರೆ ಈಗ ಪ್ರೀತಿ ಪ್ರೇಮದ ಕಥೆ ಪಕ್ಕಕ್ಕಿಟ್ಟು ಭಟ್ಟರು ಪೌರಾಣಿಕ ಸಿನಿಮಾವನ್ನು ಕೈಗೆತ್ತಿಕೊಳ್ಳಲಿದ್ದಾರಂತೆ.

ಸುದೀಪ್ ಮತ್ತು ಯೋಗರಾಜ್ ಭಟ್ ಕಾಂಬಿನೇಶನ್ ಸಿನಿಮಾ ಸುದ್ದಿ!

'ಮಹಾಭಾರತ' ಚಿತ್ರ

ಸದ್ಯ ಕೇಳಿ ಬರುತ್ತಿರುವ ಸುದ್ದಿಯ ಪ್ರಕಾರ ಭಟ್ಟರು 'ಮಹಾಭಾರತ' ಸಿನಿಮಾವನ್ನು ಮಾಡುತ್ತಾರಂತೆ. ಈಗಾಗಲೇ ಆ ಚಿತ್ರದ ಸ್ಕ್ರಿಪ್ಟ್ ಕೆಲಸಗಳು ಸಹ ಶುರುವಾಗಿದೆಯಂತೆ.

ಪರಭಾಷೆಗೆ ಭಟ್ಟರ ಎಂಟ್ರಿ

'ಮಹಾಭಾರತ' ಸಿನಿಮಾದ ನಿರ್ಮಾಪಕರು ಚಿತ್ರವನ್ನು ಬೇರೆ ಭಾಷೆಯಲ್ಲಿಯೂ ನಿರ್ಮಾಣ ಮಾಡುವ ಪ್ಲಾನ್ ಇದ್ದು, ಈ ಚಿತ್ರದ ಮೂಲಕ ಯೋಗರಾಜ್ ಭಟ್ ಇತರ ಭಾಷೆಗೂ ಪರಿಚಿತರಾಗಲಿದ್ದಾರಂತೆ.

15 ದಿನಗಳ ಶೂಟಿಂಗ್ ಮುಗಿಸಿದ 'ಕುರುಕ್ಷೇತ್ರ': ವಿಶೇಷತೆಗಳೇನು?

ನಿಜಾನಾ..?

ಯೋಗರಾಜ್ ಭಟ್ 'ಮಹಾಭಾರತ' ಸಿನಿಮಾ ಮಾಡುತ್ತಾರೆ ಎನ್ನುವ ಸುದ್ದಿ ಕೇಳಿ ಎಲ್ಲರೂ ತಲೆಯಲ್ಲಿ ಹುಳ ಬಿಟ್ಟುಕೊಂಡಿದ್ದಾರೆ. ಆದರೆ ಇದು ಈ ಸುದ್ದಿ ನಿಜವೋ ಅಥವಾ ಗಾಸಿಪ್ ಅಷ್ಟೆನೋ ಎಂಬುದಕ್ಕೆ ಅವರೇ ಉತ್ತರಿಸಬೇಕು.

Yogaraj Bhat has written a song on GST | Filmibeat Kannada

'ಕುರುಕ್ಷೇತ್ರ'

ಸ್ಯಾಂಡಲ್ ವುಡ್ ನಲ್ಲಿ ಈಗಾಗಲೇ ಮಹಾಭಾರತ ಆಧಾರಿತವಾದ 'ಕುರುಕ್ಷೇತ್ರ' ಸಿನಿಮಾ ಶುರುವಾಗಿದೆ. ನಾಗಣ್ಣ ನಿರ್ದೇಶನದ ಈ ಚಿತ್ರವನ್ನು ಮುನಿರತ್ನ ನಿರ್ಮಾಣ ಮಾಡುತ್ತಿದ್ದಾರೆ.

English summary
According to the sources, Director Yogaraj Bhat will direct the epic Mahabharata soon

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada