'ನನ್ನ ಹೆಸರೇ ಅನುರಾಗಿ' ಅನ್ನುತ್ತಿದ್ದಾರೆ ಯೋಗರಾಜ್ ಭಟ್ರು
ಖ್ಯಾತ ನಿರ್ದೇಶಕರಾದ ಯೋಗರಾಜ ಭಟ್ಟರು ಲವ್ ಸಿನಿಮಾಗಳತ್ತ ಹೊರಳಿದ್ದಾರೆ ಎಂದು ನಾವು ನಿಮಗೆ ಇದೇ ಫಿಲ್ಮಿಬೀಟಲ್ಲಿ ಹೇಳಿದ್ವಿ ತಾನೆ. ಇದೀಗ ಆ ಹೊಸ ಪ್ರಾಜೆಕ್ಟ್ ಗೆ 'ನನ್ನ ಹೆಸರೇ ಅನುರಾಗಿ' ಎಂದು ಟೈಟಲ್ ಕೂಡ ಫಿಕ್ಸ್ ಮಾಡಲಾಗಿದೆ.
ಯೋಗರಾಜ್ ಭಟ್ಟರ 'ದನ ಕಾಯೋನು' ಸಿನಿಮಾ ಈಗಾಗಲೇ ಕುಂಬಳಕಾಯಿ ಒಡೆದಿದ್ದು, ಇದೀಗ 'ನನ್ನ ಹೆಸರೇ ಅನುರಾಗಿ' ಎಂಬ ಹೊಸ ಲವ್ ಸ್ಟೋರಿಯನ್ನು ಸಿನಿರಸಿಕರಿಗೆ ಹೊತ್ತು ತಂದಿದ್ದಾರೆ.[ಯೋಗರಾಜ್ ಭಟ್ರಿಗೆ ಮತ್ತೆ ಲವ್ ಆಯ್ತಂತೆ..!]
ದೂರದ ಅಮೇರಿಕದಲ್ಲಿ ನಟನೆ ಕಲಿತು ಬಂದಿರುವ ಚಾಕಲೇಟು ಹೀರೋ, ಹ್ಯಾಂಡ್ಸಮ್ ಹುಡುಗ ಆಕಾಶ್ ನಾಗ್ಪಾಲ್ ಅವರು ಭಟ್ಟರ ಲವ್ ಸ್ಟೋರಿಗೆ ಸಾಥ್ ನೀಡಲಿದ್ದು, ನಾಯಕನಾಗಿ ಆಯ್ಕೆ ಆಗಿದ್ದಾರೆ. ಈ ಮೂಲಕ ನಿರ್ದೇಶಕರು ಮತ್ತೊಂದು ಹೊಸ ಪ್ರತಿಭೆಯನ್ನು ಸ್ಯಾಂಡಲ್ ವುಡ್ ಕ್ಷೇತ್ರಕ್ಕೆ ಪರಿಚಯಿಸುತ್ತಿದ್ದಾರೆ.
ರಾಗಿ ಕಾಳುಗಳ ರಾಶಿಯ ಮೇಲೆ 'ನನ್ನ ಹೆಸರೇ ಅನುರಾಗಿ' ಎಂದು ಬರೆದಿರುವುದನ್ನು ಕಂಡರೆ ಭಟ್ರು ಏನೋ ಕಿತಾಪತಿ ಮಾಡೋಕೆ ಹೊರಟಿದ್ದಾರೆ ಅನ್ನೋದು ಮಾತ್ರ ಸ್ಪಷ್ಟವಾಗುತ್ತದೆ.[ಚಿತ್ರಗಳು: ಭರ್ಜರಿಯಾಗಿ ದನ ಕಾಯುತ್ತಿರುವ ವಿಜಿ ಮತ್ತು ಪ್ರಿಯಾಮಣಿ..!]
ಅಂದಹಾಗೆ 'ಅನುರಾಗಿ'ಯ ನಿರ್ಮಾಣದ ಜವಾಬ್ದಾರಿಯನ್ನು ನಾಯಕನ ತಂದೆ ಸುರೇಶ್ ನಾಗ್ಪಾಲ್ ಅವರು ಹೊತ್ತುಕೊಂಡಿದ್ದು, ವಿ.ಹರಿಕೃಷ್ಣ ಅವರು ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರೆ.
ಕಥೆ-ಚಿತ್ರಕಥೆ-ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿರುವ ಭಟ್ರು ಅಂತೂ ಹೊಸ ಪ್ರತಿಭೆಯನ್ನು ಸ್ಯಾಂಡಲ್ ವುಡ್ ಕ್ಷೇತ್ರಕ್ಕೆ ಪರಿಚಯಿಸೋ ಕೆಲಸವನ್ನು ಬಹಳ ಹುಮ್ಮಸ್ಸಿನಿಂದ ಮಾಡುತ್ತಿದ್ದಾರೆ.


Click it and Unblock the Notifications













