»   » ಭಟ್ಟರ ಬ್ಯಾನರ್ ನಲ್ಲಿ 'ಸ್ನೇಕ್ ನಾಗ' ನಾದ ಯೋಗಿ

ಭಟ್ಟರ ಬ್ಯಾನರ್ ನಲ್ಲಿ 'ಸ್ನೇಕ್ ನಾಗ' ನಾದ ಯೋಗಿ

Posted By:
Subscribe to Filmibeat Kannada

ಕನ್ನಡ ಚಿತ್ರರಂಗದ ಬೇಡಿಕೆಯ ನಿರ್ದೇಶಕ ಕಮ್ ಸಾಹಿತಿ ಯೋಗರಾಜ ಭಟ್ಟರ ಸ್ವಂತ ಬ್ಯಾನರ್ ಯೋಗರಾಜ್ ಮೂವೀಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಕಾದಂಬರಿ ಆಧಾರಿತ ಚಿತ್ರದಲ್ಲಿ 'ಲೂಸ್ ಮಾದ' ಯೋಗಿ ಹೀರೊ ಆಗಿ ಕಾಣಿಸಿಕೊಳ್ಳಲಿದ್ದಾರೆ.

ಹಿರಿಯ ಪತ್ರಕರ್ತೆ ಪ್ರತಿಭಾ ನಂದ ಕುಮಾರ್ ಅವರ ನಿರ್ದೇಶನದಲ್ಲಿ ಮೊದಲ ಬಾರಿಗೆ ಯೋಗಿ ನಟಿಸುತ್ತಿದ್ದು, ಈ ಮುಂಚೆ ಈ ಚಿತ್ರಕ್ಕೆ ಬೊಲೆ ಶಂಕರ ಎಂದು ಹೆಸರಿಡಲಾಗಿತ್ತು. ಈಗ ಚಿತ್ರದ ಹೆಸರು ಬದಲಾಗಿದ್ದು, ಯೋಗಿ 'ಸ್ನೇಕ್ ನಾಗ' ನಾಗಿ ತೆರೆಯ ಮೇಲೆ ಬುಸುಗುಡಲಿದ್ದಾರೆ.

ಸಾಹಿತಿ ಉಮಾ ರಾವ್ ಅವರ 'ಹಾವಾಡಿಗ' ಕಾದಂಬರಿಯನ್ನು ಆಧಾರವಾಗಿಟ್ಟುಕೊಂಡು ಚಿತ್ರ ಕಥೆ ಹೆಣೆದಿರುವ ಪ್ರತಿಭಾ ಅವರು ಈಗಾಗಲೇ ಚಿತ್ರದ ಹಾಡುಗಳ ರೆಕಾರ್ಡಿಂಗ್ ಆರಂಭಿಸಿದ್ದಾರೆ. ವೀರ್ ಸಮರ್ಥ್ ಅವರ ಸಂಗೀತ ಸಂಯೋಜನೆಯಲ್ಲಿ ಹಾಡುಗಳು ಮೂಡಿ ಬರಲಿವೆ.

Yogaraj Movie banner yogi snake naga pratibha nandakumar

ಈ ಚಿತ್ರಕ್ಕೆ ಮೊದಲಿಗೆ ಲೂಸಿಯಾ ಖ್ಯಾತಿಯ ನೀನಾಸಂ ಸತೀಶ್ ಅವರನ್ನು ಪ್ರಮುಖ ಪಾತ್ರಕ್ಕೆ ಆಯ್ಕೆ ಮಾಡಲಾಗಿತ್ತು, ಆದರೆ, ಸ್ನೇಕ ನಾಗ ನಾಗುವ ಯೋಗ ಯೋಗಿಗೆ ಒಲಿದಿದೆ. ಚಿತ್ರದ ನಾಯಕಿ ಹಾಗೂ ಇತರೆ ಪಾತ್ರವರ್ಗದ ಬಗ್ಗೆ ಇನ್ನೂ ಸ್ಪಷ್ಟವಾಗಿ ತಿಳಿದು ಬಂದಿಲ್ಲ.

ಸಾಹಿತಿ ಪ್ರತಿಭಾ ಅವರು ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕಿಯಾಗಿ ಮೊದಲ ಬಾರಿಗೆ ಪಾತ್ರವಹಿಸಲಿದ್ದಾರೆ. ಕಾಲಿವುಡ್ ನಲ್ಲಿ ನಿರ್ದೇಶಕ ಕೆವಿ ಆನಂದ್ ಅವರ ಸಹಾಯಕಿಯಾಗಿ 'ಕೋ'.. 'ಮಾಟ್ರನ್' ಚಿತ್ರದಲ್ಲಿ ಪ್ರತಿಭಾ ಅವರು ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.

ಐದಾರು ಕವನ ಸಂಕಲನ, ಅಂಕಣಗಾರ್ತಿ, ಸಣ್ಣಕಥೆ, ಜೀವನ ಚರಿತ್ರೆಗಳನ್ನು ಬರೆದಿರುವ ಪ್ರತಿಭಾ ಅವರಿಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ಸಂದಿವೆ. ಸಾಕ್ಷ್ಯಚಿತ್ರಗಳ ನಿರ್ದೇಶಕಿಯಾಗಿದ್ದ ಪ್ರತಿಭಾ ಅವರು ಈಗ ಕನ್ನಡ ಚಿತ್ರರಂಗದ ಮಹಿಳಾ ನಿರ್ದೇಶಕಿಯರ ಸಾಲಿಗೆ ಹೊಸ ಸೇರ್ಪಡೆಯಾಗಿದ್ದಾರೆ.

English summary
Actor Yogi starrer Bole Shankara movie name changed to Snake Naga. The movie is directed by journalist Pratibha Nandakumar.'Snake Naga' is being produced by Yogaraj Bhatt under the Yogaraj Movies banner. The film is based on a novel called 'Haavadiga' written by Uma Rao.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada