For Quick Alerts
  ALLOW NOTIFICATIONS  
  For Daily Alerts

  ಯೋಗಿ ಅಣ್ಣ ಮಹೇಶ್ ಭಾಗ್ಯರಾಜ್ ಆಗಿ ಎಂಟ್ರಿ

  |
  ಲೂಸ್ ಮಾದ ಯೋಗೀಶ್ ಈಗಾಗಲೇ ಬೆಳ್ಳಿತೆರೆಯಲ್ಲಿ ಮಿಂಚುತ್ತಿದ್ದಾರೆ. ಈಗ ಅವರ ಅಣ್ಣನ ಸರದಿ, ಹೌದು ಕೆಲವು ಚಿತ್ರಗಳಲ್ಲಿ ಚಿಕ್ಕಪುಟ್ಟ ಪಾತ್ರಗಳಿಗೆ ಬಣ್ಣಹಚ್ಚಿದ್ದ ಯೋಗಿ ಸಹೋದರ ಮಹೇಶ್ ಪರಿಪೂರ್ಣ ನಾಯಕರಾಗಿ ಭಾಗ್ಯರಾಜ್ ಚಿತ್ರದ ಮೂಲಕ ತೆರೆಯ ಮೇಲೆ ಬರಲು ಸಿದ್ಧರಾಗಿದ್ದಾರೆ.

  ಟಿ.ಸಿದ್ಧರಾಜು ಭಾಗ್ಯರಾಜ್ ಸಿನಿಮಾದ ನಿರ್ಮಾಣದ ಜವಾಬ್ದಾರಿ ಜೊತೆಗೆ ಮತ್ತೊಬ್ಬ ಮಗನನ್ನು ಬೆಳ್ಳಿ ತೆರೆಗೆ ತರುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಮಹೇಶ್ ನಾಯಕನಾಗಿರುವ ಭಾಗ್ಯರಾಜ್, ಜೂನ್ ತಿಂಗಳಿನಲ್ಲಿ ಸೆಟ್ಟೇರಲಿದೆ. ಯೋಗೇಶ್ ಈಗಾಗಲೇ ಚಿತ್ರರಸಿಕರ ಮನ ಗೆದ್ದಿದ್ದಾರೆ. ಸದ್ಯ ಅವರ ಅಣ್ಣ ಮಹೇಶ್ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

  ಭಾಗ್ಯರಾಜ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವುದು ದೀಪಕ್ ಮಧುವನಹಳ್ಳಿ. ಉಪೇಂದ್ರ ಸೇರಿದಂತೆ ಅನೇಕ ನಿರ್ದೇಶಕರ ಜೊತೆ ಸಹಾಯಕರಾಗಿ ಕೆಲಸ ಮಾಡಿರುವ ದೀಪಕ್ ಭಾಗ್ಯಾರಾಜ್ ಮೂಲಕ ನಿರ್ದೇಶಕರ ಪಟ್ಟ ಅಲಂಕರಿಸುತ್ತಿದ್ದಾರೆ. ಕಥೆ ಮತ್ತು ಚಿತ್ರಕಥೆ ಬರೆಯುವ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.

  ನಕಲು ಮಾಡಬೇಡಿ ಎಂಬುದು ಭಾಗ್ಯರಾಜ್ ಚಿತ್ರದ ಟ್ಯಾಗ್ ಲೈನ್. ಚಿತ್ರದ ಕಥೆ ಏನೆಂಬುದು ಸದ್ಯಕ್ಕೆ ಗೌಪ್ಯ. ಅನೂಪ್ ಸೀಳಿನ್ ಸಂಗೀತ, ಮಹೇಂದ್ರ ಸಿಂಹ ಛಾಯಾಗ್ರಹಣ ಚಿತ್ರಕ್ಕಿದೆ. ಉಳಿದ ತಂತ್ರಜ್ಞಾರು ಯಾರು ಎಂಬುದು ತಿಳಿದು ಬಂದಿಲ್ಲ.

  ಭಾಗ್ಯರಾಜ್ ಚಿತ್ರಕ್ಕೆ ಜಾಹ್ನವಿ ಕಾಮತ್ ನಾಯಕಿ. ಈಗಾಗಲೇ ಜಾಹ್ನವಿ ನಟಿಸಿರುವ ಪರಾರಿ ಚಿತ್ರ ಪರದೆಗೆ ಬರಲು ತಯಾರಾಗಿದೆ. ಅಷ್ಟರಲ್ಲೇ ಮತ್ತೊಂದು ಚಿತ್ರಕ್ಕೆ ಜಾಹ್ನವಿ ಆಯ್ಕೆಯಾಗಿದ್ದಾಳೆ. ಭಾಗ್ಯರಾಜ್ ಚಿತ್ರವನ್ನು ಯಕ್ಷ ನಂತರ ಟಿ.ಸಿದ್ಧರಾಜು ತಮ್ಮ ಹೋಂ ಬ್ಯಾನರ್ ಮೂಲಕ ನಿರ್ಮಿಸುತ್ತಿದ್ದಾರೆ ಎಂಬುದು ವಿಶೇಷ.

  ಯಕ್ಷ ಸೇರಿದಂತೆ ಅನೇಕ ಯೋಗಿಯ ಅನೇಕ ಚಿತ್ರಗಳಲ್ಲಿ ಮಹೇಶ್ ಮುಖದರ್ಶನ ಮಾಡಿಸಿದ್ದಾರೆ. ಆದರೆ ಪರಿಪೂರ್ಣ ನಾಯಕನಾಗಿ ತೆರೆ ಮೇಲೆ ಬರುತ್ತಿರುವುದು ಇದೇ ಮೊದಲು. ಚಿತ್ರದ ಫೋಟೋ ಶೂಟ್ ಭರ್ಜರಿಯಾಗಿಯೇ ಮುಕ್ತಾಯಗೊಂಡಿದೆ.

  ಮೇ ನಲ್ಲಿ ಮಹೇಶ್ ವಿವಾಹವಾಗಲಿದ್ದಾರೆ. ಮದುವೆಯ ಶುಭಾಶಯಗೊಳೊಂದಿಗೆ ಹೊಸ ಚಿತ್ರಕ್ಕೂ ಆಲ್ ದಿ ಬೆಸ್ಟ್ ಹೇಳಿ. ಹೊಸಬರ ಪ್ರಯತ್ನಕ್ಕೆ ನೀವು ಶುಭ ಹಾರೈಸಿ.

  English summary
  Actor Loose Mada Yogesh brother Mahesh entering as hero from Bagyaraj f movie. Mahesh father T.Siddaraju producer of the new film Bagyaraj. In June film shooting begins. new face Deepak will directed Bagyaraj. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X