»   » ಯೋಗರಾಜ್ ಭಟ್ರು ಇನ್ಮುಂದೆ ಆಕ್ಟ್ ಮಾಡಲ್ಲ

ಯೋಗರಾಜ್ ಭಟ್ರು ಇನ್ಮುಂದೆ ಆಕ್ಟ್ ಮಾಡಲ್ಲ

By: ಜೀವನರಸಿಕ
Subscribe to Filmibeat Kannada

ಜೋಗಿ ಪ್ರೇಮ್ ಗೆ ನಿರ್ದೇಶನಕ್ಕಿಂತಲೂ ಆಕ್ಟಿಂಗ್ ಇಷ್ಟವಾಗ್ತಿದೆ. ಆದರೆ ಕನ್ನಡದ ಮತ್ತೊಬ್ಬ ಸ್ಟಾರ್ ನಿರ್ದೇಶಕ ಯೋಗರಾಜ್ ಭಟ್ ಗೆ ಒಂದೇ ಸಿನಿಮಾಗೆ ಆಕ್ಟಿಂಗ್ ಸಾಕು ಅನ್ನಿಸಿದೆ. ಇತ್ತೀಚೆಗೆ ಭಟ್ರು ಪತ್ರಕರ್ತರ ಜೊತೆ ಮಾತನಾಡೋವಾಗ ಈ ಸಿನಿಮಾನೆ ನಾನು ಅಭಿನಯದ ಕೊನೆಯದು ಅಂದಿದ್ರು.

ಭಟ್ರು ಬಣ್ಣ ಹಚ್ಚಿರುವ 'ದ್ಯಾವ್ರೇ' ಸಿನಿಮಾ ಇದೇ ಡಿಸೆಂಬರ್ 6ಕ್ಕೆ ತೆರೆಗೆ ಬರುತ್ತಿದೆ. ಈ ಸಿನಿಮಾದಲ್ಲಿ ಭಟ್ರ ನಟನೆಗೆ ಈಗಾಗ್ಲೇ ಟ್ರೇಲರ್ ನೋಡೀನೇ ಭರ್ಜರಿ ಪ್ರಶಂಸೆ ವ್ಯಕ್ತವಾಗಿದೆ. ಇಲ್ಲಿ ಜೈಲರ್ ಪಾತ್ರ ಮಾಡಿರೋ ಭಟ್ರು ಹೇಳೋ ಒಂದೊಂದು ಡೈಲಾಗ್ ಅವರ ಲಿರಿಕ್ಸ್ ಗಳ ಹಾಗೇ ಥ್ರಿಲ್ಲಿಂಗ್ ಮತ್ತು ಪಂಚಿಂಗ್ ಆಗಿರ್ತವಂತೆ. [ಬರ್ತ್ ಡೇ ದಿನ ಮಲ್ಲಿಗೆ ಇಡ್ಲಿ ಕಟ್ ಮಾಡಿದ ಭಟ್ಟರು]


ಸದ್ಯ ಬಾಲಿವುಡ್ ನಲ್ಲಿ ಚಿತ್ರ ನಿರ್ದೇಶನಕ್ಕೆ ಹೊರಳ್ತಿರೋ ಭಟ್ರು ಕನ್ನಡದಲ್ಲಿ ಆಕ್ಟಿಂಗ್ ಸಾಕು ಅಂದಿದ್ದಾರೆ. ಹಾಗಂತ ಭಟ್ರಿಗೆ ಆಕ್ಟಿಂಗ್ ಕಷ್ಟವೇನಲ್ಲ. ಆದರೆ ನಿರ್ದೇಶಕನೊಬ್ಬನಿಗೆ ಸಾಕಷ್ಟು ಸಿನಿಮಾ ಮಾಡೋ ಆಸೆ ಇರುತ್ತೆ. ಸಿನಿಮಾ ಮೇಕರ್ ಆಗ್ಬೇಕಾದವನು ಆಕ್ಟರ್ ಆದ್ರೆ ಅದೆಷ್ಟೋ ಪ್ರತಿಭೆಗಳನ್ನ ಪೋಷಿಸೋಕೆ, ಗುರುತಿಸೋಕೆ ಆಗಲ್ಲವಲ್ಲ.

ಅದ್ರ ಜೊತೆಗೆ ಸಿನಿಮಾಗಳನ್ನು ಇಷ್ಟಪಡುವವರಿಗೆ ಒಳ್ಳೆಯ ಸಿನಿಮಾ ಕೊಡೋಕೆ ಆಗಲ್ಲವಲ್ಲ ಅನ್ನೋ ಯೋಚನೆ ಭಟ್ಟರದ್ದು. ಎನಿವೇ ಭಟ್ರು ಆಕ್ಟರ್ ಆಗಿ ಬ್ಯುಸಿಯಾಗೋದು ಸಿನಿ ಪ್ರೇಮಿಗಳಿಗು ಇಷ್ಟವಿಲ್ಲ ಬಿಡಿ.

ಅಂದಹಾಗೆ ದ್ಯಾವ್ರೇ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ಗಡ್ಡ ವಿಜಿ. ಭಟ್ ಅವರದು ಪೊಲೀಸ್ ಇನ್ಸ್ ಪೆಕ್ಟರ್ ಪಾತ್ರ. ಗಡ್ಡ ವಿಜಿ ಅವರಿಗೆ ಇದು ಚೊಚ್ಚಲ ಚಿತ್ರ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯ ಜವಾಬ್ದಾರಿಗಳನ್ನು ಅವರೇ ಹೊತ್ತಿದ್ದಾರೆ.

ದುನಿಯಾ ಸೂರಿ ಅವರ ಗರಡಿಯಲ್ಲಿ ಬೆಳೆದವರು. ಇದು ಜೈಲಿಗೆ ಸಂಬಂಧಿಸಿದ ಕಥೆ. ಅಲ್ಲಲ್ಲಿ ನಡೆದ, ಕಣ್ಣಿಗೆ ಕಂಡ ಕೆಲವು ನೈಜ ಘಟನೆಗಳೇ ಚಿತ್ರದ ಕಥಾವಸ್ತು ಎನ್ನುತ್ತಾರೆ ನಿರ್ದೇಶಕರು. ದ್ಯಾವ್ರೇ ಚಿತ್ರಕ್ಕೆ ವೀರ್ ಸಮರ್ಥ್ ಅವರ ಸಂಗೀತ, ಮುರಳಿ ಅವರ ನೃತ್ಯ ನಿರ್ದೇಶನವಿದೆ. ಪಾತ್ರವರ್ಗದಲ್ಲಿ ನೀನಾಸಂ ಸತೀಶ್, ಸೋನು ಗೌಡ, ಸೋನಿಯಾ ಗೌಡ, ಶ್ರುತಿ ಹರಿಹರನ್, ಗಂಧರ್ವ ಚೇತನ್, ರಾಜೇಶ್ ನಟರಾಜನ್ ಮುಂತಾದವರಿದ್ದಾರೆ.

English summary
Multi-faceted director, lyricist, producer and screenwriter, Yogaraj Bhat's debut in a lead role in Kannada Dyavre all set to release on 6th December, 2013. Bhat not interested in acting, he will decided henceforth not acting in movies.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada