»   » ಯೋಗರಾಜ್ ಭಟ್ಟರ 'ಡ್ರಾಮಾ'ಗೆ ಸೆನ್ಸಾರ್ ತಥಾಸ್ತು

ಯೋಗರಾಜ್ ಭಟ್ಟರ 'ಡ್ರಾಮಾ'ಗೆ ಸೆನ್ಸಾರ್ ತಥಾಸ್ತು

Posted By:
Subscribe to Filmibeat Kannada
ಭರವಸೆಯ ನಿರ್ದೇಶಕ ಯೋಗರಾಜ್ ಭಟ್ ಅವರ 'ಡ್ರಾಮಾ' ಚಿತ್ರ ಸೆನ್ಸಾರ್ ನಲ್ಲಿ ಫಸ್ಟ್ ಕ್ಲಾಸಲ್ಲಿ ಪಾಸಾಗಿದೆ. ಯಶ್, ರಾಧಿಕಾ ಪಂಡಿತ್ ಜೋಡಿಯ ಈ ಚಿತ್ರಕ್ಕೆ ಸೆನ್ಸಾರ್ 'ಯು' ಸರ್ಟಿಫಿಕೇಟ್ ನೀಡಿದೆ. ಚಿತ್ರಕ್ಕೆ ಯಾವುದೇ ಕತ್ತರಿ ಪ್ರಯೋಗ ಮಾಡದೆ ಸೆನ್ಸಾರ್ 'ಯು' ಸರ್ಟಿಫಿಕೇಟ್ ನೀಡಿರುವುದು ವಿಶೇಷ.

ಡ್ರಾಮಾ ಚಿತ್ರ ಇದೇ ನವೆಂಬರ್ 23ರಂದು ತೆರೆಗೆ ಅಪ್ಪಳಿಸುತ್ತಿದೆ. ಯೋಗರಾಜ್ ಭಟ್ಟರು ಏನೋ ವಿಭಿನ್ನವಾದದ್ದನ್ನು ಕೊಡುತ್ತಾರೆ ಎಂಬ ನಿರೀಕ್ಷೆಯಲ್ಲಿ ಪ್ರೇಕ್ಷಕರು ಕಾಯುತ್ತಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಹಾಗೂ ಪ್ರತಿಭಾನ್ವಿತ ತಾರೆ ರಾಧಿಕಾ ಪಂಡಿತ್ ಅಭಿನಯಿಸಿರುವ ಡ್ರಾಮಾ ಸೆಟ್ಟೇರಿದಾಗಿನಿಂದಲೂ ಸುದ್ದಿ ಮಾಡುತ್ತಲೇ ಇದೆ.

ಗಾಂಧಿನಗರದ ಹಾಂಕಾಂಗ್ ಬಜಾರ್ ಸೇರಿದಂತೆ ಶಿವಾಜಿನಗರ ಪ್ರದೇಶದ ಜನನಿಬಿಡ ಪ್ರದೇಶಗಳಲ್ಲಿ ಡ್ರಾಮಾ ಚಿತ್ರೀಕರಿಸಿರುವುದು ಇನ್ನೊಂದು ವಿಶೇಷ.

ವಿ ಹರಿಕೃಷ್ಣ ಸಂಗೀತ ನಿರ್ದೇಶನದ 'ಡ್ರಾಮಾ' ಚಿತ್ರವನ್ನು ಯೋಗರಾಜ್ ಮೂವೀಸ್, ಜಯಣ್ಣ ಕಂಬೈನ್ಸ್ ಬ್ಯಾನರಿನಡಿ ಜಯಣ್ಣ, ಭೋಗೇಂದ್ರ ನಿರ್ಮಿಸಿದ್ದಾರೆ. 'ಡ್ರಾಮಾ' ಚಿತ್ರದ ಒಂದು ಹಾಡನ್ನು ಸೋನು ನಿಗಮ್ ಹಾಡಿದ್ದಾರೆ. ಈ ಹಾಡು ಚಿತ್ರದಲ್ಲಿ ಹೈಲೈಟ್ ಆಗಿ ಉಳಿಯಲಿದೆ ಎನ್ನುತ್ತದೆ ಚಿತ್ರತಂಡ.

ಡ್ರಾಮಾ ಚಿತ್ರದಲ್ಲಿ ಒಂದಷ್ಟು ಸೆಂಟಿಮೆಂಟಿ ಇನ್ನೊಂದಿಷ್ಟು ಪೆಪ್ಪರ್ ಮೆಂಟು ಇದೆ ಎನ್ನಲಾಗಿದೆ. ಈ ಸಿನಿಮಾದಲ್ಲಿ ಹೆಣ್ ಮಕ್ಳು ಕಣ್ಣೀರ್ ಹರಿಸಿರೋದನ್ನ ತುಂಬ್ಸಿ ಇಟ್ಟುಕೊಂಡಿದ್ರೆ ಒಂದ್ ಒಳ್ಲೆ ಪಸಲು ತೆಗೀಬೋದಿತ್ತಪ್ಪ...ಎಂದು ಈಗಾಗಲೆ ಜಾಹೀರಾತು ಕೂಡ ನೀಡಲಾಗಿದೆ. (ಏಜೆನ್ಸೀಸ್)

English summary
Kannada films hopeful director Yograj Bhat's much awaited film Drama starring Yash and Radhika Pandit clears censor with a U certificate. The film all set to release on 23rd November.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada