»   » ಕ್ಯಾಲಿಫೋರ್ನಿಯಾದಲ್ಲಿ ಡ್ರಾಮಾ ಸ್ಪೆಷಲ್ ಶೋ

ಕ್ಯಾಲಿಫೋರ್ನಿಯಾದಲ್ಲಿ ಡ್ರಾಮಾ ಸ್ಪೆಷಲ್ ಶೋ

Posted By:
Subscribe to Filmibeat Kannada
ಎಲ್ಲಾ ತುಂಡ್ ಹೈಕ್ಲ ಸಾವಾಸ...ಯೋಗರಾಜ್ ಭಟ್ ನಿರ್ದೇಶನದ 'ಡ್ರಾಮಾ' ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದು ಅರ್ಧ ಸೆಂಚುರಿ ಬಾರಿಸಲು ಸಿದ್ಧವಾಗಿದೆ. ಇದೇ ಸುಸಂದರ್ಭದಲ್ಲಿ 'ಡ್ರಾಮಾ' ಚಿತ್ರದ ವಿಶೇಷ ಪ್ರದರ್ಶನವನ್ನು ಕ್ಯಾಲಿಫೋರ್ನಿಯಾದಲ್ಲಿ ಆಯೋಜಿಸಲಾಗಿದೆ.

ಇದೇ ಜನವರಿ 4ರಂದು ಕ್ಯಾಲಿಫೋರ್ನಿಯಾ ಕಾಲಮಾನದ ಪ್ರಕಾರ ರಾತ್ರಿ 8ಕ್ಕೆ ಅಲ್ಲಿನ ಶೆರ ಚಿತ್ರಮಂದಿರದಲ್ಲಿ ಸ್ಪೆಷಲ್ ಶೋ ಆಯೋಜಿಸಲಾಗಿದೆ. ಜನವರಿ ಐದು ಹಾಗೂ ಆರು ಶನಿವಾರ, ಭಾನುವಾರ ಮಧ್ಯಾಹ್ನ 2.30 ಮತ್ತು ಸಂಜೆ 5.30ಕ್ಕೆ ಇದೇ ಚಿತ್ರಮಂದರದಲ್ಲಿ 'ಡ್ರಾಮ' ಪ್ರದರ್ಶನಗೊಳ್ಳಲಿದೆ. ಅಟ್ಲಾಂಟ ನಾಗೇಂದ್ರ ಅವರು ಈ ಪ್ರದರ್ಶನದ ಜವಾಬ್ದಾರಿ ಹೊತ್ತಿದ್ದಾರೆ.

ರಾಜ್ಯದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಈ ಚಿತ್ರದ ಪ್ರದರ್ಶನವನ್ನು ಮುಂದಿನ ದಿನಗಳಲ್ಲಿ ಲಾಸ್‍ ಏಂಜಲಿಸ್, ಆಸ್ಟಿನ್, ನ್ಯೂಯಾರ್ಕ್ ಮುಂತಾದ ನಗರಗಳಲ್ಲಿ ಆಯೋಜಿಸಲಾಗುವುದು ಎಂದು ಅಟ್ಲಾಂಟ ನಾಗೇಂದ್ರ ತಿಳಿಸಿದ್ದಾರೆ.

ಯೋಗರಾಜಭಟ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ನೀಡಿದ್ದಾರೆ. ಕೃಷ್ಣರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಸನತ್ ಸುರೇಶ್ ಸಂಕಲನ ಹಾಗೂ ರವಿವರ್ಮರ ಸಾಹಸ ನಿರ್ದೇಶನವಿದೆ. ಯೋಗರಾಜಭಟ್ ಹಾಗೂ ಜಯಂತ ಕಾಯ್ಕಿಣಿ ಬರೆದಿರುವ ಹಾಡುಗಳಿಗೆ ಹರ್ಷ, ಚಿನ್ನಿ ಪ್ರಕಾಶ್, ಮುರಳಿ ನೃತ್ಯನಿರ್ದೇಶನ ಮಾಡಿದ್ದಾರೆ.

ಯಶ್, ರಾಧಿಕಾ ಪಂಡಿತ್, ನೀನಾಸಂ ಸತೀಶ್, ಸಿಂಧು ಲೋಕನಾಥ್, ಸಂಪತ್, ಅಚ್ಯುತ ಕುಮಾರ್, ಲೋಹಿತಾಶ್ವ, ಹೊನ್ನವಳ್ಳಿಕೃಷ್ಣ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಡ್ರಾಮಾ ಚಿತ್ರ ವಿಮರ್ಶೆ ಓದಿ. (ಒನ್ಇಂಡಿಯಾ ಕನ್ನಡ)

English summary
Yograj Bhat directed Kannada romantic-thriller film Drama special show arranged in California at Shera theater. It stars Yash, Radhika Pandit, Satish Neenasam and Sindhu Lokanath in leading roles. 
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada