ಪೊಲೀಸ್ ಗೆಟಪ್ ನಲ್ಲಿ ಯೋಗರಾಜ್ ಭಟ್ ಎಂಟ್ರಿ
ಕನ್ನಡ ಬೆಳ್ಳಿಪರದೆಗೆ ಪೊಲೀಸ್ ಗೆಟಪ್ ನಲ್ಲಿ ನಿರ್ದೇಶಕ ಯೋಗರಾಜ್ ಭಟ್ ಎಂಟ್ರಿ ಕೊಡುತ್ತಿದ್ದಾರೆ. ಅವರು ಅಭಿನಯಿಸುತ್ತಿರುವ ಚಿತ್ರದಲ್ಲಿ ಯಾವ ರೀತಿಯ ಪಾತ್ರ ಪೊಷಿಸಲಿದ್ದಾರೆ ಎಂಬ ಸಣ್ಣ ಕುತೂಹಲಕ್ಕೆ ತೆರೆಬಿದ್ದಿದೆ.
ಗಡ್ಡ ವಿಜಿ ಆಕ್ಷನ್ ಕಟ್ ಹೇಳುತ್ತಿರುವ 'ದ್ಯಾವ್ರೇ' ಚಿತ್ರದಲ್ಲಿ ಅವರದು ಪೊಲೀಸ್ ಇನ್ಸ್ ಪೆಕ್ಟರ್ ಪಾತ್ರ. ಚಿತ್ರತಂಡ ಈಗಾಗಲೆ ಸೆಕೆಂಡ್ ಲುಕ್ ನ ವಿಡಿಯೋ ಬಿಡುಗಡೆ ಮಾಡಿದ್ದು ಯೂಟ್ಯೂಬ್ ನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಈ ವಿಡಿಯೋದಲ್ಲಿ ಕಥೆಯಿಲ್ಲ ಮಾತಿಲ್ಲ. ಕೇವಲ ಇಂಪಾದ ಹಿನ್ನೆಲೆ ಸಂಗೀತದ ಮೂಲಕ ಗಮನಸೆಳೆಯುತ್ತದೆ. [ವಿಡಿಯೋ ನೋಡಿ]

ದ್ಯಾವ್ರೇ ಚಿತ್ರಕ್ಕೆ ವೀರ್ ಸಮರ್ಥ್ ಅವರ ಸಂಗೀತ, ಮುರಳಿ ಅವರ ನೃತ್ಯ ನಿರ್ದೇಶನವಿದೆ. ಪಾತ್ರವರ್ಗದಲ್ಲಿ ನೀನಾಸಂ ಸತೀಶ್, ಸೋನು ಗೌಡ, ಸೋನಿಯಾ ಗೌಡ, ಶ್ರುತಿ ಹರಿಹರನ್, ಗಂಧರ್ವ ಚೇತನ್, ರಾಜೇಶ್ ನಟರಾಜನ್ ಮುಂತಾದವರಿದ್ದಾರೆ. (ಒನ್ಇಂಡಿಯಾ ಕನ್ನಡ)
More from Filmibeat
English summary
Director Yograj Bhat role in 'Dyavre' finally revealed in the second look of the film trailer. Bhat plays a police inspector role in the movie. The film being directed by Vijay Gadda. It starring Sathish Neenasam, Sonu Gowda, Sonia Gowda, Sruthi Hariharan add music by Veer Samarth.


Click it and Unblock the Notifications











