For Quick Alerts
  ALLOW NOTIFICATIONS  
  For Daily Alerts

  ಗಾಂಧಿ ಜಯಂತಿಯಂದು 'ವಾಸ್ತುಪ್ರಕಾರ'ಕ್ಕೆ ಸ್ವಾತಂತ್ರ್ಯ

  By Rajendra
  |

  ಅಂದುಕೊಂಡಂತೆ ಯೋಗರಾಜ್ ಭಟ್ಟರ 'ವಾಸ್ತುಪ್ರಕಾರ' ಚಿತ್ರ ರೆಡಿಯಾಗುತ್ತಿದೆ. ಇನ್ನೇನಿದ್ದರೂ ವಾಸ್ತುಪ್ರಕಾರ ಚಿತ್ರವನ್ನು ಬಿಡುಗಡೆ ಮಾಡುವುದೊಂದು ಬಾಕಿ ಇದ್ದು, ಕೊನೆಯ ಹಂತದಲ್ಲಿ ಅಂತಹದ್ದೇನೂ ವಾಸ್ತುದೋಷಗಳು ಆಗದಿದ್ದರೆ ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ.

  ಸ್ವಿಟ್ಜರ್ ಲ್ಯಾಂಡ್ ನಲ್ಲಿ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು ಎರಡನೇ ಹಂತದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಚಿತ್ರದ ಕೆಲವು ಮುಖ್ಯ ಸನ್ನಿವೇಶಗಳನ್ನು ಬೆಂಗಳೂರು ಅರಮನೆಯಲ್ಲಿ ಚಿತ್ರೀಕರಿಸಿಕೊಳ್ಳಲಾಗುತ್ತಿದೆ. ಜುಲೈ ಅಥವಾ ಆಗಸ್ಟ್ ಮೊದಲ ವಾರದಲ್ಲಿ ಶೂಟಿಂಗ್ ಮುಗಿಯಲಿದೆ ಎನ್ನುತ್ತವೆ ಮೂಲಗಳು. ['ವಾಸ್ತುಪ್ರಕಾರ' ಬೇಸ್ತು ಬಿದ್ದು ಸುಸ್ತಾದ ಭಟ್ಟರು]

  ಯೋಗರಾಜ್ ಭಟ್ ನಿರ್ದೇಶಿಸುತ್ತಿರುವ ಚಿತ್ರದಲ್ಲಿ ನಾಯಕನಾಗಿ ಉಳಿದವರು ಕಂಡಂತೆ ಖ್ಯಾತಿಯ ರಕ್ಷಿತ್ ಶೆಟ್ಟಿ ಇದ್ದಾರೆ, ಮಂಗಳೂರಿನ ಐಶಾನಿ ಶೆಟ್ಟಿ ನಾಯಕಿಯಾಗಿದ್ದಾರೆ ಉಳಿದಂತೆ ಜಗ್ಗೇಶ್ ಮತ್ತು ಪರುಲ್ ಯಾದವ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

  ಅಕ್ಷಯ ತದಿಗೆ ದಿನ ಸೆಟ್ಟೇರಿದ ಚಿತ್ರ ಇದೀಗ ಅಕ್ಟೋಬರ್ 2ರ ರಾಷ್ಟ್ರಪಿತ ಗಾಂಧೀಜಿ ಅವರ ಹುಟ್ಟುಹಬ್ಬದಂದು ಬಿಡುಗಡೆಯಾಗುತ್ತಿದೆ. ಹಾಗಾಗಿ ವಾಸ್ತುಪ್ರಕಾರ ಚಿತ್ರಕ್ಕೆ ಅಕ್ಟೋಬರ್ 2 ರಂದು ಸ್ವಾತಂತ್ಯ್ರ ಸಿಗುವುದು ಗ್ಯಾರಂಟಿಯಾಗಿದೆ.

  ಈ ಬಾರಿ ಭಟ್ರ ಸಿನಿಮಾದಲ್ಲಿ ರಾಜಕೀಯವೂ ಮುಖ್ಯ ಸಬ್ಜೆಕ್ಟ್ ಆಗಿರುತ್ತಾ ಎಂಬುದನ್ನು ಕಾದುನೋಡಬೇಕು. ಚಿತ್ರಕ್ಕೆ ನವರಸ ನಾಯಕ ಜಗ್ಗೇಶ್ ಅವರನ್ನು ಅಯ್ಕೆ ಮಾಡಿಕೊಂಡಿದ್ದಾರೆ. ಅಂದ್ರೆ ಭಟ್ರು ಸೀರಿಯಸ್ ಸಬ್ಜೆಕ್ಟ್ ಒಂದನ್ನ ಕಾಮಿಡಿಯಾಗಿ ತರ್ಬಹುದು ಎನ್ನುತ್ತಾರೆ ಸ್ಯಾಂಡಲ್ ವುಡ್ ವಾಸ್ತು ತಜ್ಞರು. (ಏಜೆನ್ಸೀಸ್)

  English summary
  Sandalwood star director Yograj Bhat's upcoming movie Vaastu Prakara is planning to release the film on the 02nd of October. The movie starring current sensational Simple Star Rakshit Shetty, Jaggesh and Parul Yadav and Aishani Shetty.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X