»   » ಭಟ್ರು ಶುರು ಮಾಡಿದ್ರು ವಾಸ್ತುಪ್ರಕಾರ ಪ್ರೊಮೋಷನ್

ಭಟ್ರು ಶುರು ಮಾಡಿದ್ರು ವಾಸ್ತುಪ್ರಕಾರ ಪ್ರೊಮೋಷನ್

By: ಜೀವನರಸಿಕ
Subscribe to Filmibeat Kannada

ಯೋಗರಾಜ್ ಭಟ್ಟರ ಮುಂದಿನ ಸಿನಿಮಾ 'ವಾಸ್ತುಪ್ರಕಾರ' ಅಂತ. ಈ ಸಿನಿಮಾ ಏಪ್ರಿಲ್ ನಲ್ಲಿ ಶುರುವಾಗುತ್ತೆ ಅನ್ನೋದು ನಿಮಗೆಲ್ಲಾ ಗೊತ್ತೇ ಇದೆ. ಆದರೆ ಯೋಗರಾಜ ಭಟ್ರು ಚುನಾವಣೆ ಟೈಮಲ್ಲಿ ತಮ್ಮ ಟಿಪಿಕಲ್ ಲಿರಿಕ್ಸ್ ಮೂಲಕ ತಮ್ಮ ಸಿನಿಮಾ ಪ್ರಚಾರವನ್ನ ಭರ್ಜರಿಯಾಗೇ ಶುರುಮಾಡಿದ್ದಾರೆ.

'ವಾಸ್ತುಪ್ರಕಾರ' ಅನ್ನೋ ಟೈಟಲ್ ಸಾಂಗ್ ಬರೆದಿರೋ ಭಟ್ರು ಮಾಧ್ಯಮಗಳಿಗೆ ವಾಸ್ತುಪ್ರಕಾರ ಪ್ರೊಮೋಷನ್ ಸಾಂಗ್ ತಲುಪಿಸಿದ್ದಾರೆ. ಹಾಡಿನಲ್ಲಿ ನಾವು ನೀವು ತಲೆಕೆರೆದುಕೊಳ್ಳುವಂತಹಾ ಸಾಲುಗಳಿದ್ದು, ಸಂಸ್ಕೃತ ಕನ್ನಡದ ಮಿಕ್ಸ್ ಮಸಾಲಾ ನಿಮ್ಮ ತಲೆಗೆ ಕಿಕ್ ಕೊಡುತ್ತೆ. ಅರ್ಧ ಭಟ್ರು ಇನ್ನರ್ಧ ಹಾಡು ಹರಿಕೃಷ್ಣ ದನಿಯಲ್ಲಿದ್ದು ಇವತ್ತಿನ ರಾಜಕಾರಣಕ್ಕೆ ಹೇಳಿ ಮಾಡಿಸಿದ ಹಾಡು ಅನ್ನಿಸ್ತಿದೆ. [ಗಡ್ಡ ವಿಜಿ ನಿರ್ದೇಶನದ 'ದ್ಯಾವ್ರೇ' ಚಿತ್ರ ವಿಮರ್ಶೆ]

Yograj Bhat

ಇವತ್ತಿನ ಚುನಾವಣೆ ರಾಜಕೀಯ ಪಕ್ಷಗಳನ್ನ ಅಣಕು ಮಾಡಿರೋ ಹಾಡಲ್ಲಿ ಸಖತ್ ಥ್ರಿಲ್ ಕೊಡೋ ಸಾಲುಗಳಿವೆ. ಕುಟುಂಬ ರಾಜಕಾರಣ, ಓಟಿಗಾಗಿ ನೋಟು, ಅದೂ ಇದು ಎಲ್ಲವನ್ನ ಹೇಳಿರೋ ಭಟ್ರು ಕೊನೆಗೆ ದೇಶವನ್ನ ವಾಸ್ತುಪ್ರಕಾರ ನೋಡ್ಕೊಳ್ಳಿ ಅಂತಾರೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಈ ಬಾರಿ ಭಟ್ರ ಸಿನಿಮಾದಲ್ಲಿ ರಾಜಕೀಯವೂ ಮುಖ್ಯ ಸಬ್ಜೆಕ್ಟ್ ಆಗಿರುತ್ತಾ ಎಂಬುದನ್ನು ಕಾದುನೋಡಬೇಕು. ಚಿತ್ರಕ್ಕೆ ನವರಸ ನಾಯಕ ಜಗ್ಗೇಶ್ ಅವರನ್ನು ಅಯ್ಕೆ ಮಾಡಿಕೊಂಡಿದ್ದಾರೆ. ಅಂದ್ರೆ ಭಟ್ರು ಸೀರಿಯಸ್ ಸಬ್ಜೆಕ್ಟ್ ಒಂದನ್ನ ಕಾಮಿಡಿಯಾಗಿ ತರ್ಬಹುದು ಅನ್ನಿಸ್ತಿದೆ.

English summary
Sandalwood successful director Yograj Bhat is all set to launching his new Kannada film 'Vaastu Prakara' in the first week of April. Navarasa Nyaka Jaggesh selected for lead role and this is a completely different movie by Yograj Bhat.
Please Wait while comments are loading...