For Quick Alerts
  ALLOW NOTIFICATIONS  
  For Daily Alerts

  ಎರಡು ಮೊಬೈಲ್ ಬಳಸಿ 'ದಶರಥ ಮಾಂಜೀ' ಕಿರು ಚಿತ್ರ ಸಿದ್ಧಪಡಿಸಿದ ಚಿತ್ರದುರ್ಗದ ಯುವಕರು

  By ಚಿದಾನಂದ ಮಸ್ಕಲ್
  |

  'ಬೆಟ್ಟದ ಮನುಷ್ಯ' ಎಂದೇ ಖ್ಯಾತರಾಗಿದ್ದ ಬಿಹಾರದ ದಶರಥ ಮಾಂಜಿ ತಮ್ಮ ಮಹಾನ್ ಪ್ರೇಮದ ಮೂಲಕ ಹೆಸರಾದವರು. ಅವರ ಜೀವನಗಾಥೆಯನ್ನು ಆಧರಿಸಿದ 'ಮಾಂಜಿ' ಚಿತ್ರವನ್ನು ಹಿಂದಿಯಲ್ಲಿ ತಯಾರಿಸಲಾಗಿತ್ತು. ಅದಕ್ಕೂ ಮುನ್ನ ಕನ್ನಡದಲ್ಲಿ ಜಯತೀರ್ಥ ನಿರ್ದೇಶನದ 'ಒಲವೇ ಮಂದಾರ' ಚಿತ್ರ ಈ ಕಥೆಯನ್ನು ಮನಮುಟ್ಟುವಂತೆ ಹೇಳಿತ್ತು. ಈಗ ಚಿತ್ರದುರ್ಗದ ಯುವಕರ ತಂಡವೊಂದು ಮಾಂಜಿ ಕುರಿತಾದ ಚಿತ್ರವೊಂದನ್ನು ತಯಾರಿಸಿದೆ. ಅದೂ ಕೇವಲ ಸೆಲ್ ಫೋನ್‌ಗಳನ್ನು ಬಳಸಿ.

  ಇಂದಿನ HD ಕ್ಯಾಮೆರಾ, ಡ್ರೋನ್ ಕ್ಯಾಮೆರಾ ಬಳಸಿಕೊಂಡು ಶೂಟಿಂಗ್ ಮಾಡುವುದು ಕಷ್ಟ. ಇಂತಹ ಸಂದರ್ಭದಲ್ಲಿ ನಾಲ್ಕು ಜನರ ಯುವಕರ ತಂಡವೊಂದು ಕೇವಲ ಮೊಬೈಲ್ ಪೋನ್ ಬಳಸಿ ''ದಶರಥ ಮಾಂಜಿ" ಎಂಬ ಕಿರು ಚಿತ್ರವನ್ನು ತಯಾರಿಸಿ ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿದ್ದಾರೆ.

  ಚಿತ್ರದುರ್ಗದ ಯುವಕರ ತಂಡ

  ಚಿತ್ರದುರ್ಗದ ಯುವಕರ ತಂಡ

  ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಅಮ್ಮನಹಟ್ಟಿ ಗ್ರಾಮದ ಕುರಿಗಾಹಿಯ ಮಗ ಪಾರ್ಥ ಮೀಸೆ ಎಂಬ ಯುವಕ ಈ ಕಿರುಚಿತ್ರದಲ್ಲಿ ನಟಿಸಿದ್ದು, ತರುಣ್ ಎಂಬ ಯುವಕ ನಿರ್ದೇಶನ ಮಾಡಿದ್ದಾರೆ. ರಮೇಶ್, ಪ್ರದೀಪ್ ಪೂಜಾರಿ ಸಹಕಾರ ನೀಡಿದ್ದಾರೆ.

  ಮೊಬೈಲ್‌ನಲ್ಲಿ ಚಿತ್ರೀಕರಣ

  ಮೊಬೈಲ್‌ನಲ್ಲಿ ಚಿತ್ರೀಕರಣ

  VIVO 17 ಮತ್ತು Lenevo ಮೊಬೈಲ್ ಬಳಸಿಕೊಂಡು ಎರಡು ದಿನ ಮೊಬೈಲ್ ಮೂಲಕ ಶೂಟಿಂಗ್ ಮಾಡಿ, ಒಂದು ರಾತ್ರಿ ಎಡಿಟ್ ಮಾಡಿದ್ದಾರೆ. 'ಒಲವೇ ಮಂದಾರ' ಚಿತ್ರದ "ಕಾಯ ವಾಚ ಮನಸ ಪ್ರೀತಿಸಿದೆ ಕನಸ ಬಾಡಿ ಹೋಗದಿರಲಿ ನಮ್ಮ ಪ್ರೀತಿ, ಮಲ್ಲಿಗೆ ರೀತಿ" ಎಂಬ ಒಂದು ಹಾಡು ಮತ್ತು ಅದರ ಕೆಲವು ಸನ್ನಿವೇಶಗಳನ್ನು ಸಹ ಇದರಲ್ಲಿ ಅಡಕ ಮಾಡಲಾಗಿದೆ.

  ಮಾಂಜಿಯ ಮಾದರಿ ಪ್ರೇಮ

  ಮಾಂಜಿಯ ಮಾದರಿ ಪ್ರೇಮ

  ದಶರಥ ಮಾಂಜಿ ಪ್ರೀತಿಯ ಪತ್ನಿಯನ್ನು ಬೃಹತ್ತಾದ ಬೆಟ್ಟ ಬಲಿ ತೆಗೆದುಕೊಂಡಿರುತ್ತದೆ. ಮಾಂಜಿಯ ಗರ್ಭಿಣಿ ಪತ್ನಿ ಕಾಲು ಜಾರಿ ಬಿದ್ದು ಸಾಯುತ್ತಾಳೆ. ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ಅಲ್ಲಿ ದಾರಿಯೂ ಇರಲಿಲ್ಲ. ಬೆಟ್ಟ ಹತ್ತಿಯೇ ಸಾಗಬೇಕಿತ್ತು. ಪತ್ನಿಯನ್ನು ಕಳೆದುಕೊಂಡು ಅವಳಿಲ್ಲದೆ ಒಂಟಿಯಾದ ಮಾಂಜಿ ತನ್ನ ಪತ್ನಿಯ ಸಾವಿಗೆ ಕಾರಣವಾದ ಬೆಟ್ಟ ಇನ್ಯಾರ ಸಾವಿಗೂ ಕಾರಣವಾಗಬಾರದು ಎಂದು ಬೆಟ್ಟ ಕಡಿದು ದಾರಿ ಮಾಡಲು ಆರಂಭಿಸುತ್ತಾನೆ. ಹೀಗೆ ಸತತ 22 ವರ್ಷ ಕಡಿದು ಅಲ್ಲೊಂದು ದಾರಿ ಮಾಡುತ್ತಾನೆ.

  ಮಾಂಜಿಯ ನೆನಪಿಗೆ ಮರುಜನ್ಮ

  ಮಾಂಜಿಯ ನೆನಪಿಗೆ ಮರುಜನ್ಮ

  ಮಾಂಜಿಯ ಹಠದಿಂದಾಗಿ ಬುಡಕಟ್ಟು ಜನಾಂಗದ ಬಿಹಾರ ರಾಜ್ಯದ ಗೆಹಲೊರ್ ಘಾಟ್ ಮತ್ತು ನಗರ ಪ್ರದೇಶದ ಬಜಿರ್ ಗಂಜ್ ನಡುವೆ ಇದ್ದ 75 ಕಿ.ಮೀ. ಅಂತರ ಕೇವಲ 1 ಕಿ.ಮೀಗೆ ತಗ್ಗುತ್ತದೆ. 350 ಅಡಿ ಉದ್ದ, 25 ಅಡಿ ಎತ್ತರ, 30 ಅಡಿ ಅಗಲ ಈ ದಾರಿಯನ್ನು ಮಾಡಲು 1960-1982 ವರೆಗೆ ಶ್ರಮಿಸುತ್ತಾನೆ. ಬಿಹಾರ ರಾಜ್ಯದಲ್ಲಿರುವ ಮಾಂಜಿ ಪತ್ನಿಯ ಸಮಾಧಿಯನ್ನು ತಾಜ್‌ಮಹಲ್ ನಂತೆ 'ಅಮರ ಪ್ರೀತಿಯ ಸಂಕೇತ'ವಾಗಿ ಉಳಿಸಲಿ ಎಂಬುದು ಕಿರು ಚಿತ್ರದ ಸಂದೇಶ. ಈಗಾಗಲೇ ಈ ದೃಶ್ಯವನ್ನು ಒಲವೇ ಮಂದಾರ ಚಿತ್ರದಲ್ಲಿ ತೋರಿಸಲಾಗಿದೆ. ನಾವು ಕಿರು ಚಿತ್ರದ ಮೂಲಕ ಮರುಜನ್ಮ ನೀಡಿದ್ದೇವೆ ಎನ್ನುತ್ತಾರೆ ಚಿತ್ರದ ನಾಯಕ ಪಾರ್ಥ ಮೀಸೆ.

  English summary
  Youths from Chitradurga's Hiriyur village has done 'Dasharath Manjhi' short film using only two mobile phones.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more
  X