For Quick Alerts
  ALLOW NOTIFICATIONS  
  For Daily Alerts

  ಉಂಗುರ ಬದಲಾಯಿಸಿಕೊಂಡ ಯುವರಾಜ್ ಕುಮಾರ್-ಶ್ರೀದೇವಿ

  By Pavithra
  |
  ಹೇಗೆ ನಡೀತು ನೋಡಿ ಯುವ ರಾಜ್‌ಕುಮಾರ್ -ಶ್ರೀದೇವಿ ನಿಶ್ಚಿತಾರ್ಥ...! | Filmibeat Kannada

  ರಾಘವೇಂದ್ರ ರಾಜ್ ಕುಮಾರ್ ಅವರ ಎರಡನೇ ಮಗ ಯುವರಾಜ್ ಕುಮಾರ್ ಹಾಗೂ ಶ್ರೀದೇವಿ ಭೈರಪ್ಪ ಅವರ ನಿಶ್ಚಿತಾರ್ಥ ಇಂದು ಮೈಸೂರಿನಲ್ಲಿ ನಡೆದಿದೆ. ಸಾಂಸ್ಕೃತಿಕ ನಗರದ ಮಗಳನ್ನು ದೊಡ್ಮನೆಗೆ ಸೊಸೆಯಾಗಿ ಮಾಡಿಕೊಳ್ಳುತ್ತಿದ್ದು. ಎರಡು ಮನೆ ಸಂಬಂಧಿಕರು ಹಾಗೂ ಗಣ್ಯರ ಮುಂದೆ ಪರಸ್ಪರ ಉಂಗುರ ಬದಲಾಯಿಸಿಕೊಳ್ಳುವ ಮೂಲಕ ಅಧಿಕೃತವಾಗಿ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡಲು ಮುಂದಾಗಿರುವುದನ್ನು ತಿಳಿಸಿದ್ದಾರೆ.

  ಯುವರಾಜ್ ಕುಮಾರ್ ನಿಶ್ಚಿತಾರ್ಥದಲ್ಲಿ ಸಾಕಷ್ಟು ಗಣ್ಯರು ಭಾಗಿ ಆಗಿದ್ದು ಡಾ ರಾಜ್ ಕುಟುಂಬದ ಪ್ರತಿಯೊಬ್ಬರು ಸಂಭ್ರಮದಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಶಿವರಾಜ್ ಕುಮಾರ್ , ಪುನೀತ್ ರಾಜ್ ಕುಮಾರ್ ಸೇರಿದಂತೆ ಡಾ ರಾಜ್ ಅವರ ಮಕ್ಕಳು ಹಾಗೂ ಮೊಮ್ಮಕ್ಕಳು ಯುವ ರಾಜ್ ಕುಮಾರ್ ಹಾಗೂ ಶ್ರೀದೇವಿ ಅವರ ನಿಶ್ಚಿತಾರ್ಥಕ್ಕೆ ಸಾಕ್ಷಿ ಆಗಿದ್ದಾರೆ.

  ಸಾಂಸ್ಕೃತಿಕ ನಗರಿಯಲ್ಲಿ ಅಣ್ಣಾವ್ರ ಮೊಮ್ಮಗನ ನಿಶ್ಚಿತಾರ್ಥಸಾಂಸ್ಕೃತಿಕ ನಗರಿಯಲ್ಲಿ ಅಣ್ಣಾವ್ರ ಮೊಮ್ಮಗನ ನಿಶ್ಚಿತಾರ್ಥ

  ಮೈಸೂರಿನ ಪ್ರತಿಷ್ಠಿತ ಖಾಸಗಿ ಹೋಟೆಲ್ ನಲ್ಲಿ ನೆರೆವೇರಿದ್ದು ಇದೇ ವರ್ಷದಲ್ಲಿ ಯುವರಾಜ್ ಕುಮಾರ್ ಹಾಗೂ ಶ್ರೀದೇವಿ ಭೈರಪ್ಪ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರಂತೆ.

  ಮದುವೆಯ ನಂತರ ಯುವರಾಜ್ ಕುಮಾರ್ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡಲಿದ್ದು ಈಗಾಗಲೇ ಮುಂಬೈ ನಲ್ಲಿ ಯುವ ರಾಜ್ ಕುಮಾರ್ ಚಿತ್ರರಂಗಕ್ಕೆ ಬರುವ ಮುನ್ನ ಬೇಕಿರುವ ತಯಾರಿಗಳನ್ನೂ ಮಾಡಿಕೊಳ್ಳುತ್ತಿದ್ದಾರೆ.

  English summary
  Raghavendra Rajkumar's son Yuvraj Kumar engaged in mysore today. Yuva Rajkumar is engaged with Sridevi Bhairappa

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X