For Quick Alerts
  ALLOW NOTIFICATIONS  
  For Daily Alerts

  ಅಭಿಮಾನಿ ಕಣ್ಣಲ್ಲಿ 'ಯುವ': ಜಬರ್ದಸ್ತ್ ಪೋಸ್ಟರ್ ವೈರಲ್

  |

  ಯುವ ರಾಜ್‌ಕುಮಾರ್ ಚೊಚ್ಚಲ ಚಿತ್ರದ ಬಗ್ಗೆ ಸ್ಯಾಂಡಲ್‌ವುಡ್‌ನಲ್ಲಿ ಭಾರೀ ನಿರೀಕ್ಷೆ ಇದೆ. ಹೊಂಬಾಳೆ ಸಂಸ್ಥೆ ಆ ಚಿತ್ರದ ಜವಾಬ್ದಾರಿ ವಹಿಸಿಕೊಂಡಿದ್ದು, ಸಂತೋಷ್ ಆನಂದ್‌ ರಾಮ್ ಆಕ್ಷನ್ ಕಟ್ ಹೇಳಲಿದ್ದಾರೆ.

  ದೊಡ್ಮನೆಯ 3ನೇ ತಲೆಮಾರಿನ ಕುಡಿ ಯುವ ರಾಜ್‌ಕುಮಾರ್ ಸಿನಿಎಂಟ್ರಿ ಬಗ್ಗೆ ಬಹಳ ದಿನಗಳಿಂದ ಚರ್ಚೆ ನಡೀತಿದೆ. ಈಗಾಗಲೇ ಅಣ್ಣಾವ್ರ ಮೊಮ್ಮಕ್ಕಳಾದ ವಿನಯ್, ಧೀರೇನ್, ಧನ್ಯಾ ರಾಮ್‌ಕುಮಾರ್ ಬಣ್ಣ ಹಚ್ಚಿ ನಟಿಸಿದ್ದಾರೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ 'ಯುವ ರಣಧೀರ ಕಂಠೀರವ' ಚಿತ್ರದಲ್ಲಿ ನಟಿಸಬೇಕಿತ್ತು. ಆದರೆ ಕಾರಣಾಂತರಗಳಿಂದ ಆ ಸಿನಿಮಾ ನಿಂತು ಹೋಗಿತ್ತು. ಇದೀಗ ಅಂತೂ ಇಂತೂ ಯುವ ಕ್ಯಾಮರಾ ಮುಂದೆ ನಿಲ್ಲುವ ಸಮಯ ಹತ್ತಿರ ಬರ್ತಿದೆ.

  ರಶ್ಮಿಕಾ ಹೇಳಿಕೆಗೆ ರೊಚ್ಚಿಗೆದ್ದ ಚಿತ್ರರಂಗ 'ಪುಷ್ಪ 2', 'ವಾರಿಸು' ಬ್ಯಾನ್ ಮಾಡುತ್ತಾ? ಚೇಂಬರ್ ಅಧ್ಯಕ್ಷರ ಹೇಳಿದ್ದೇನು?ರಶ್ಮಿಕಾ ಹೇಳಿಕೆಗೆ ರೊಚ್ಚಿಗೆದ್ದ ಚಿತ್ರರಂಗ 'ಪುಷ್ಪ 2', 'ವಾರಿಸು' ಬ್ಯಾನ್ ಮಾಡುತ್ತಾ? ಚೇಂಬರ್ ಅಧ್ಯಕ್ಷರ ಹೇಳಿದ್ದೇನು?

  ಪುನೀತ್ ರಾಜ್‌ಕುಮಾರ್ ಅಗಲಿಕೆಯ ನಂತರ ಕೆಲವರು ಯುವರಾಜ್‌ಕುಮಾರ್ ಅವರಲ್ಲೇ ಅಪ್ಪುನ ನೋಡುತ್ತಿದ್ದಾರೆ. ಜ್ಯೂನಿಯರ್ ಪವರ್ ಸ್ಟಾರ್ ಎಂದೂ ಕೆಲವರು ಕಲಿಯುತ್ತಿದ್ದಾರೆ. ಹಾಗಾಗಿ ಯುವ ಚೊಚ್ಚಲ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಾಗುತ್ತಿದೆ.

  'ಯುವ' ಪ್ಯಾನ್ ಮೇಡ್ ಪೋಸ್ಟರ್

  'ಯುವ' ಪ್ಯಾನ್ ಮೇಡ್ ಪೋಸ್ಟರ್

  ಸಂತೋಷ್ ಆನಂದ್‌ರಾಮ್ ನಿರ್ದೇಶನದಲ್ಲಿ ಶೀಘ್ರವೇ ಯುವ ರಾಜ್‌ಕುಮಾರ್ ನಟನೆಯ ಸಿನಿಮಾ ಶುರುವಾಗಲಿದೆ. ಅಭಿಮಾನಿಯೊಬ್ಬರು ಜಬರ್ದಸ್ತ್‌ ಪೋಸ್ಟರ್ ಡಿಸೈನ್ ಮಾಡಿದ್ದಾರೆ. ಅಪ್ಪು- ಯುವ ಇಬ್ಬರನ್ನು ಸೇರಿಸಿ ಪೋಸ್ಟರ್ ತೇಲಿ ಬಿಟ್ಟಿದ್ದಾರೆ. ಇನ್ನು ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿಲ್ಲ. ಆದರೆ ಅಭಿಮಾನಿ ಡಿಸೈನ್ ಮಾಡಿರೋ ಪೋಸ್ಟರ್‌ನಲ್ಲಿ 'ಯುವ' ಅನ್ನುವ ಟೈಟಲ್ ಹಾಕಿದ್ದಾರೆ.

  30 ಕೋಟಿ ವೀವ್ಸ್ ಸಾಧಿಸಿ ಹೊಸ ದಾಖಲೆ ಬರೆದ 'ಖರಾಬು' ಸಾಂಗ್30 ಕೋಟಿ ವೀವ್ಸ್ ಸಾಧಿಸಿ ಹೊಸ ದಾಖಲೆ ಬರೆದ 'ಖರಾಬು' ಸಾಂಗ್

  ಯುವ ಚಿತ್ರಕ್ಕಾಗಿ ಆಡಿಷನ್

  ಯುವ ಚಿತ್ರಕ್ಕಾಗಿ ಆಡಿಷನ್

  ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ದೊಡ್ಡದಾಗಿ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಚಿತ್ರತಂಡ ಸಹ ಕಲಾವಿದರ ಆಯ್ಕೆಗಾಗಿ ಆಡಿಷನ್ ಕರೆದಿದೆ. ಇನ್ನು 16 ರಿಂದ 25 ವರ್ಷದೊಳಗಿನವರು ಆಡಿಷನ್‌ನಲ್ಲಿ ಭಾಗವಹಿಸಬಹುದು ಎಂದು ಚಿತ್ರತಂಡ ಹೇಳಿದೆ. ಮಂಗಳೂರು ನಗರದ ಕೂಟಕ್ಕಳ ಆಡಿಟೋರಿಯಂನಲ್ಲಿ ನವೆಂಬರ್ 26ರಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಆಡಿಷನ್ ನಡೆಯಲಿದೆ.

  ಸಿನಿಮಾ ಕಥೆಯೇನು?

  ಸಿನಿಮಾ ಕಥೆಯೇನು?

  'KGF', 'ಕಾಂತಾರ' ರೀತಿಯ ದೊಡ್ಡದೊಡ್ಡ ಸಿನಿಮಾಗಳನ್ನು ನಿರ್ಮಿಸಿದ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ. 'ಯುವರತ್ನ' ಅದೇ ಕಾಂಬಿನೇಷನ್‌ನಲ್ಲಿ ಪುನೀತ್ ರಾಜ್‌ಕುಮಾರ್ ಮತ್ತೊಂದು ಸಿನಿಮಾದಲ್ಲಿ ನಟಿಸಬೇಕಿತ್ತು. ಅದೇ ಕಥೆಯಲ್ಲಿ ಈಗ ಯುವ ರಾಜ್‌ಕುಮಾರ್ ನಟಿಸುತ್ತಾರಾ ಎನ್ನುವ ಅನುಮಾನವೂ ಇದೆ.

  PRK ಬ್ಯಾನರ್‌ನಲ್ಲೂ ಯುವ ನಟನೆ

  PRK ಬ್ಯಾನರ್‌ನಲ್ಲೂ ಯುವ ನಟನೆ

  ಅಪ್ಪು ಅಗಲಿಕೆ ನಂತರ PRK ಪ್ರೊಡಕ್ಷನ್ಸ್ ಜವಾಬ್ದಾರಿಯನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ವಹಿಸಿಕೊಂಡಿದ್ದಾರೆ. ಅವರ ಬ್ಯಾನರ್‌ಲ್ಲಿ ಈಗಾಗಲೇ ಎರಡ್ಮೂರು ಸಿನಿಮಾಗಳ ಚಿತ್ರೀಕರಣ ನಡೀತಿದೆ. ಹೊಸ ಪ್ರತಿಭೆಗಳಿಗೆ ತಮ್ಮ ಸಂಸ್ಥೆಯಲ್ಲಿ ಅವಕಾಶ ಕೊಡುತ್ತಿದ್ದಾರೆ. ಯುವ ರಾಜ್‌ಕುಮಾರ್ ಕೂಡ ಮುಂದಿನ ದಿನಗಳಲ್ಲಿ PRK ಬ್ಯಾನರ್‌ನಲ್ಲಿ ನಟಿಸುವ ಸಾಧ್ಯತೆಯಿದೆ.

  English summary
  Yuva Rajkumar's Debut Movie Fan Made Poster Goes Viral. The yet-to-be titled film will be helmed by director Santhosh Anandram. Know more.
  Friday, November 25, 2022, 15:58
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X