For Quick Alerts
  ALLOW NOTIFICATIONS  
  For Daily Alerts

  ಕನ್ನಡದಲ್ಲಿ ಟ್ವೀಟ್ ಮಾಡಿ ಅಭಿಮಾನಿಗಳಲ್ಲಿ ಮನವಿ ಮಾಡಿದ 'ಯುವರತ್ನ' ಸಂಗೀತ ನಿರ್ದೇಶಕ

  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಸಿನಿಮಾದಿಂದ ಬೇಸರದ ಸುದ್ದಿಯೊಂದು ಹೊರಬಿದ್ದಿದೆ. ಯುವರತ್ನ ಸಿನಿಮಾದ ಅಪ್ ಡೇಟ್ ಗಾಗಿ ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಲ್ಲಿ ಚಿತ್ರದ ಸಂಗೀತ ನಿರ್ದೇಶಕ ಎಸ್.ತಮನ್ ಮನವಿ ಮಾಡಿಕೊಂಡಿದ್ದಾರೆ.

  ಅಪ್ಪು ಅಭಿಮಾನಿಗಳಿಗೆ ರಿಕ್ವೆಸ್ಟ್ ಮಾಡಿಕೊಂಡ ತೆಲುಗು ಸಂಗೀತ ನಿರ್ದೇಶಕ | Puneeth Rajkumar | Thaman |Yuvarathna

  ಯುವರತ್ನ ಸಿನಿಮಾದ ಹಾಡನ್ನು ರಿಲೀಸ್ ಮಾಡಲು ಸಿನಿಮಾತಂಡ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿತ್ತು. ಇನ್ನೇನು ಯುವರತ್ನ ಚಿತ್ರದ ಹಾಡು ಬರುತ್ತೆ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ನಿರಾಸೆಯ ಸುದ್ದಿ ಹೊರಬಿದ್ದಿದೆ. ಚಿತ್ರದ ಸಂಗೀತ ನಿರ್ದೇಶಕ ತೆಲುಗಿನ ಎಸ್. ತಮನ್ ಹಾಡುಗಳು ರಿಲೀಸ್ ಆಗುವುದು ತಡವಾಗಲಿದೆ ಎಂದು ಟ್ವೀಟ್ ಮಾಡಿದ್ದಾರೆ. ತಮನ್ ಟ್ವೀಟ್ ನೋಡಿ ಅಭಿಮಾನಿಗಳು ನಿರಾಸೆಯ ಜೊತೆಗೆ ಅವರ ಕನ್ನಡ ಪ್ರೇಮಕ್ಕೆ ಮನಸೋತಿದ್ದಾರೆ. ಮುಂದೆ ಓದಿ...

  'ಯುವರತ್ನ' ಸಿನಿಮಾದ ಫೋಟೋಗಳು ಲೀಕ್: ಸಂತೋಷ್ ಆನಂದ್ ರಾಮ್ ಹೇಳಿದ್ದೇನು?'ಯುವರತ್ನ' ಸಿನಿಮಾದ ಫೋಟೋಗಳು ಲೀಕ್: ಸಂತೋಷ್ ಆನಂದ್ ರಾಮ್ ಹೇಳಿದ್ದೇನು?

  ಎಸ್.ತಮನ್ ಟ್ವೀಟ್

  ಎಸ್.ತಮನ್ ಟ್ವೀಟ್

  ಕನ್ನಡದಲ್ಲಿಯೆ ಟ್ವೀಟ್ ಮಾಡಿ ಕನ್ನಡ ಮನಗೆದ್ದಿರುವ ತಮನ್ ಗೆ ನಿರಾಸೆಯ ಜೊತೆಗೆ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. "ಎಲ್ಲರಿಗು ನಮಸ್ಕಾರ. ನಾನು ಚೆನ್ನೈ ಅಲ್ಲಿ ಲಾಕ್ ಡೌನ್ ನಲ್ಲಿ ಇರುವ ಕಾರಣ ಕೆಲಸಗಳು ನೆಡೆಯುತ್ತಿಲ್ಲ, ಹಾಡುಗಾರರು ಮತ್ತು ಸಂಗೀತಗಾರರು ಈ ಇಕ್ಕಟ್ಟಿನ ಪರಿಸ್ಥಿತಿಯಲ್ಲಿರುವ ಕಾರಣ ಯುವರತ್ನ ಚಿತ್ರದ ಹಾಡುಗಳು ತಡವಾಗಲಿದೆ. ನಿಮಗೆ ಪವರ್ ಫುಲ್ ಆಲ್ಬಮ್ ಕೊಡುವ ಜವಾಬ್ದಾರಿ ನಮ್ಮದು. ದಯವಿಟ್ಟು ಅಭಿಮಾನಿಗಳು ಸಹಕರಿಸಿ" ಎಂದು ಕನ್ನಡದಲ್ಲಿಯೇ ಟ್ವೀಟ್ ಮಾಡಿದ್ದಾರೆ.

  'ಯುವರತ್ನ' ಚಿತ್ರೀಕರಣ ಮುಗಿಯುವ ಮುನ್ನವೇ ಸಿಹಿ ಸುದ್ದಿ ಕೊಟ್ರಾ ನಟಿ ಸಯ್ಯೇಶಾ?'ಯುವರತ್ನ' ಚಿತ್ರೀಕರಣ ಮುಗಿಯುವ ಮುನ್ನವೇ ಸಿಹಿ ಸುದ್ದಿ ಕೊಟ್ರಾ ನಟಿ ಸಯ್ಯೇಶಾ?

  ಅಭಿಮಾನಿಗಳೆ ಸಹಕರಿಸಿ- ಸಂತೋಷ್ ಆನಂದ್ ರಾಮ್

  ಅಭಿಮಾನಿಗಳೆ ಸಹಕರಿಸಿ- ಸಂತೋಷ್ ಆನಂದ್ ರಾಮ್

  ಕೊರೊನಾ ಹಾವಳಿಯಿಂದ ಸಿನಿಮಾದ ಕೆಲಸಗಳು ಮತ್ತೆ ಮುಂದಕ್ಕೆ ಹೋಗಿದ್ದು, ಯುವರತ್ನ ಹಾಡುಗಳು ಮತ್ತಷ್ಟ ತಡವಾಗುವ ಸಾಧ್ಯತೆ ಇದೆ. ಇನ್ನೂ ಈ ಬಗ್ಗೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಟ್ವೀಟ್ ಮಾಡಿ ಅಭಿಮಾನಿಗಳು ಸಹಕರಿಸಬೇಕೆಂದು ಕೇಳಿಕೊಂಡಿದ್ದಾರೆ.

  ಕೆಲಸಗಳು ನಡೆಯುತ್ತಿಲ್ಲ, ತಡವಾಗಲಿದೆ ಹಾಡುಗಳು

  ಕೆಲಸಗಳು ನಡೆಯುತ್ತಿಲ್ಲ, ತಡವಾಗಲಿದೆ ಹಾಡುಗಳು

  "ಚೆನ್ನೈ, ಹೈದರಾಬಾದ್ ಹಾಗು ಮುಂಬೈ ನಲ್ಲಿ ಕೆಲಸಗಳು ನೆಡೆಯುತ್ತಿಲ್ಲ. ಚೆನ್ನೈ, ಮುಂಬೈ ಲಾಕ್ ಡೌನ್ ನಲ್ಲಿವೆ. ಪರಿಸ್ಥಿತಿ ಹದವಾಗುವ ವರೆಗೂ ಯುವರತ್ನ ಹಾಡುಗಳು ಬರುವುದು ಕಷ್ಟ. ಸಂಗೀತ ನಿರ್ದೇಶಕ ತಮನ್ ಅವರು ಚೆನ್ನೈ ಅಲ್ಲಿ ಲಾಕ್ ಡೌನ್ ನಲ್ಲಿದ್ದಾರೆ ದಯವಿಟ್ಟು ಸಹಕರಿಸಿ" ಎಂದು ಕೇಳಿಕೊಂಡಿದ್ದಾರೆ.

  'ಯುವರತ್ನ' ಪೋಸ್ಟರ್: 'ಪವರ್ ಆಫ್ ಯೂತ್' ಪುನೀತ್ ರಾಜ್ ಕುಮಾರ್ ಸ್ಟೈಲಿಶ್ ಲುಕ್'ಯುವರತ್ನ' ಪೋಸ್ಟರ್: 'ಪವರ್ ಆಫ್ ಯೂತ್' ಪುನೀತ್ ರಾಜ್ ಕುಮಾರ್ ಸ್ಟೈಲಿಶ್ ಲುಕ್

  ಫೋಟೋಗಳು ಲೀಕ್ ಆಗಿದ್ದವು

  ಫೋಟೋಗಳು ಲೀಕ್ ಆಗಿದ್ದವು

  ಕಿಡಿಗೇಡಿಗಳು ಇತ್ತೀಚಿಗೆ ಯುವರತ್ನ ಸಿನಿಮಾದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಲೀಕ್ ಮಾಡಿದ್ದರು. ಈ ಕುರಿತು ನಿರ್ದೇಶಕ ಸಂತೋಷ್ ಆನಂದ್ ರಾಮ್ ಅಭಿಮಾನಿಗಳಲ್ಲಿ ಮನವಿ ಮಾಡಿ, ಯಾರು ಫೋಟೋಗಳನ್ನು ಹಂಚಿಕೊಳ್ಳದ್ದಂತೆ ಕೇಳಿಕೊಂಡಿದ್ದರು.

  English summary
  Yuvarathnaa movie Music Director S.Thaman request to fans for coorporate.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X