For Quick Alerts
  ALLOW NOTIFICATIONS  
  For Daily Alerts

  ಯುವರತ್ನ ಕ್ರೇಜ್: 'ಇದು ಜಸ್ಟ್ ಬಿಗಿನಿಂಗ್, ಮುಂದೆ ನೀವೇ ನೋಡ್ತಿರಲ್ಲ'

  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಯುವರತ್ನ ಸಿನಿಮಾ ಏಪ್ರಿಲ್ 1 ರಂದು ಬಿಡುಗಡೆಯಾಗುತ್ತಿದೆ. ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡಿರುವ ಈ ಚಿತ್ರ ಕನ್ನಡ ಮತ್ತು ತೆಲುಗಿನಲ್ಲಿ ರಿಲೀಸ್ ಆಗುತ್ತಿದೆ.

  ಯುವರತ್ನನ ಎಂಟ್ರಿಗೆ ನಾಲ್ಕು ವಾರ ಮಾತ್ರ ಬಾಕಿಯಿದ್ದು, ಅಪ್ಪು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಹಾಡುಗಳ ಮೂಲಕ ಸದ್ದು ಮಾಡುತ್ತಿರುವ ಯುವರತ್ನ ಸದ್ಯದಲ್ಲೇ ಪ್ರಿ-ರಿಲೀಸ್ ಕಾರ್ಯಕ್ರಮ ಆಯೋಜನೆಯಾಗುತ್ತಿದೆ.

  ಶಿರಡಿ ಸಾಯಿಬಾಬಾ ಮತ್ತು ಕೊಲ್ಲಾಪುರ ಮಹಾಲಕ್ಷ್ಮೀ ದರ್ಶನ ಪಡೆದ ಪುನೀತ್

  ರಿಲೀಸ್‌ಗೆ ಒಂದು ತಿಂಗಳ ಮುಂಚೆಯೇ ಅಭಿಮಾನಿಗಳು ಜಾತ್ರೆ ಮಾಡ್ತಿದ್ದಾರೆ. ಅಪ್ಪು ಅವರ ಕಟೌಟ್‌ಗೆ ದುಡ್ಡಿನ ಮಾಲೆ ಹಾಕಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಪೋಸ್ಟರ್‌ಗೆ ಸಂತೋಷ್ ಆನಂದ್ ರಾಮ್ ಸಹ ಖುಷಿ ವ್ಯಕ್ತಪಡಿಸಿದ್ದಾರೆ.

  ಯುವರತ್ನ ಸಿನಿಮಾದ ಕನ್ನಡ ಹಾಗೂ ತೆಲುಗು ವರ್ಷನ್ ವಿತರಣೆ ಹಕ್ಕು ಈಗಾಗಲೇ ಮಾರಾಟವಾಗಿದೆ. ಆಂಧ್ರ-ತೆಲಂಗಾಣ, ಕರ್ನಾಟಕ, ಭಾರತದ ಇತರೆ ರಾಜ್ಯಗಳು ಹಾಗೂ ವಿದೇಶದಲ್ಲೂ ಯುವರತ್ನ ಸಿನಿಮಾ ರಿಲೀಸ್ ಮಾಡಲಾಗುತ್ತಿದೆ.

  ತೆಲುಗಿನ ಖ್ಯಾತ ನಿರ್ಮಾಪಕರ ಪಾಲಾಯ್ತು ಯುವರತ್ನ ವಿತರಣೆ ಹಕ್ಕು

  ಹೊಂಬಾಳೆ ಫಿಲಂಸ್ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗಿದ್ದು, ಎಸ್ ತಮನ್ ಸಂಗೀತ ನೀಡಿದ್ದಾರೆ. ಪುನೀತ್ ಜೊತೆ ಧನಂಜಯ್, ವಸಿಷ್ಠ ಸಿಂಹ, ಸಯೇಶಾ ಸೈಗಲ್, ಶರತ್ ಕುಮಾರ್ ಸೇರಿದಂತೆ ಹಲವರು ನಟಿಸಿದ್ದಾರೆ.

  ರಿಲೀಸ್ ಗೂ ಮೊದಲೇ ಮೈಸೂರಿನಲ್ಲಿ ಅಬ್ಬರಿಸಲಿದ್ದಾನೆ ಯುವರತ್ನ | Yuvaratna | Puneeth Rajkumar|Filmibeat Kannada
  English summary
  Yuvaratna Craze: Puneeth rajkumar fans get ready to welcome their boss movie on april 1st.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X