For Quick Alerts
  ALLOW NOTIFICATIONS  
  For Daily Alerts

  ಪುನೀತ್, ಯಶ್, ಸುದೀಪ್ ಮನೆಗೆ ಭೇಟಿಕೊಟ್ಟ ಮಾಜಿ ಸಚಿವ ಜಮೀರ್ ಅಹ್ಮದ್

  |

  ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಅವರು ನಟ ಪುನೀತ್ ರಾಜ್‌ಕುಮಾರ್ ಮನೆಗೆ ಇಂದು ಭೇಟಿ ನೀಡಿದ್ದರು.

  ಜಮೀರ್ ಅಹ್ಮದ್ ಪುತ್ರಿಯ ವಿವಾಹ ಇದೇ ತಿಂಗಳು ನಡೆಯಲಿದ್ದು, ಮದುವೆಗೆ ಆಮಂತ್ರಣ ಪತ್ರಿಕೆ ನೀಡಲು ಜಮೀರ್ ಅಹ್ಮದ್ ಅವರು ತಮ್ಮ ಪುತ್ರನನ್ನೂ ಜೊತೆ ಮಾಡಿಕೊಂಡು ಪುನೀತ್ ರಾಜ್‌ಕುಮಾರ್ ಸೇರಿ ಹಲವು ಸಿನಿ ತಾರೆಗಳ ನಿವಾಸಕ್ಕೆ ಭೇಟಿ ನೀಡಿದ್ದರು.

  ಜಮೀರ್ ಅವರು ಪುತ್ರಿಯ ವಿವಾಹಕ್ಕೆ ಜಮೀರ್ ಅನ್ನು ಆಹ್ವಾನಿಸಿದ್ದು, ಪುನೀತ್ ಜೊತೆಯಲ್ಲಿ ಕೆಲ ಕಾಲ ಕಳೆದು ಉಭಯ ಕುಶಲೋಪರಿಯನ್ನು ಸಹ ಮಾಡಿದ್ದಾರೆ. ಪುನೀತ್ ಅವರನ್ನು ಜಮೀರ್ ಮಗಳ ಮದುವೆಗೆ ಆಹ್ವಾನಿಸುತ್ತಿರುವ ಚಿತ್ರಗಳನ್ನು ಜಮೀರ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ಯಶ್, ಸುದೀಪ್, ರಾಘಣ್ಣನ ಮನೆಗೆ ಭೇಟಿ

  ಯಶ್, ಸುದೀಪ್, ರಾಘಣ್ಣನ ಮನೆಗೆ ಭೇಟಿ

  ಪುನೀತ್ ಮನೆಗೆ ಭೇಟಿ ಕೊಟ್ಟ ಬಳಿಕ ನಟರಾದ ಸುದೀಪ್, ಯಶ್ ನಿವಾಸಗಳಿಗೂ ಭೇಟಿ ಕೊಟ್ಟ ಜಮೀರ್ ಹಾಗೂ ಅವರ ಪುತ್ರ ಮದುವೆ ಆಮಂತ್ರಣ ಪತ್ರಿಕೆ ನೀಡಿದ್ದಾರೆ. ನಟ ರಾಘವೇಂದ್ರ ರಾಜ್‌ಕುಮಾರ್ ನಿವಾಸಕ್ಕೂ ಜಮೀರ್ ಭೇಟಿ ನೀಡಿದ್ದಾರೆ. ಕೆಲವು ದಿನಗಳ ಹಿಂದೆ, ಶಿವರಾಜ್ ಕುಮಾರ್, ದುನಿಯಾ ವಿಜಯ್ ಅವರಿಗೂ ಆಹ್ವಾನ ನೀಡಿದ್ದಾರೆ ಜಮೀರ್.

  ಯಡಿಯೂರಪ್ಪ, ಸಿದ್ದರಾಮಯ್ಯ ಅವರಿಗೂ ಆಹ್ವಾನ

  ಯಡಿಯೂರಪ್ಪ, ಸಿದ್ದರಾಮಯ್ಯ ಅವರಿಗೂ ಆಹ್ವಾನ

  ಜಮೀರ್ ಅವರು ತಮ್ಮ ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡುತ್ತಿದ್ದು, ಹಲವಾರು ರಾಜಕೀಯ ಮುಖಂಡರನ್ನು, ಸಿನಿಮಾ ಸೆಲೆಬ್ರಿಟಿಗಳನ್ನು ಮದುವೆಗೆ ಆಹ್ವಾನಿಸಿದ್ದಾರೆ. ಸಿಎಂ ಯಡಿಯೂರಪ್ಪ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರನ್ನೂ ಸಹ ಜಮೀರ್ ಅವರು ಮಗಳ ಮದುವೆಗೆ ಆಹ್ವಾನಿಸಿದ್ದಾರೆ. ರಾಜ್ಯಪಾಲ ವಜುಭಾಯಿ ವಾಲಾ ಅವರನ್ನೂ ಮದುವೆಗೆ ಆಹ್ವಾನಿಸಿದ್ದಾರೆ ಜಮೀರ್.

  ಬಾಲಿವುಡ್‌ನಿಂದ ಅತಿಥಿಗಳು ಆಗಮಿಸುವ ನಿರೀಕ್ಷೆ

  ಬಾಲಿವುಡ್‌ನಿಂದ ಅತಿಥಿಗಳು ಆಗಮಿಸುವ ನಿರೀಕ್ಷೆ

  ಬಾಲಿವುಡ್‌ನಲ್ಲಿಯೂ ಸಾಕಷ್ಟು ಪರಿಚಯ ಜಮೀರ್ ಅವರಿಗಿದ್ದು, ಬಾಲಿವುಡ್ ಸೆಲೆಬ್ರಿಟಿಗಳು ಸಹ ಜಮೀರ್ ಪುತ್ರಿಯ ಮದುವೆಗೆ ಆಗಮಿಸುವ ಸಂಭವ ಇದೆ. ಈ ಹಿಂದೆ ಜಮೀರ್ ಹುಟ್ಟುಹಬ್ಬಕ್ಕೆ ಸಂಜಯ್ ದತ್, ಸೋಹೆಲ್ ಖಾನ್, ಅರ್ಬಾಜ್ ಖಾನ್ ಅವರುಗಳು ಹಾಜರಾಗಿದ್ದರು.

  ಜನವರಿ 21 ರಂದು ಮದುವೆ

  ಜನವರಿ 21 ರಂದು ಮದುವೆ

  ಜಮೀರ್ ಅಹ್ಮದ್ ಪುತ್ರಿಯ ವಿವಾಹವು ಜನವರಿ 21 ರಂದು ಭಾರಿ ಅದ್ಧೂರಿಯಾಗಿ ಅರಮನೆ ಮೈದಾನದಲ್ಲಿ ನಡೆಯಲಿದೆ. ರಾಜಕೀಯ ನಾಯಕರ, ಸಿನಿಮಾ ಸೆಲೆಬ್ರಿಟಿಗಳ ದಂಡೇ ಅಂದು ಅರಮನೆ ಮೈದಾನದಲ್ಲಿ ನೆರೆಯಲಿದೆ ಎನ್ನಲಾಗುತ್ತಿದೆ.

  English summary
  Politician Zameer Ahmad Khan invites movie stars Puneeth Rajkumar, Yash, Sudeep to his daughter's wedding which is on January 21.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X