»   » ಕ್ಷಮೆ ಕೇಳದಿದ್ದರೆ ಪ್ರತಿಭಟನೆ ನಿಶ್ಚಿತ: ಜೀ ಕನ್ನಡಕ್ಕೆ ಪೇಜಾವರ ಮಠದ ಶ್ರೀಗಳ ಎಚ್ಚರಿಕೆ

ಕ್ಷಮೆ ಕೇಳದಿದ್ದರೆ ಪ್ರತಿಭಟನೆ ನಿಶ್ಚಿತ: ಜೀ ಕನ್ನಡಕ್ಕೆ ಪೇಜಾವರ ಮಠದ ಶ್ರೀಗಳ ಎಚ್ಚರಿಕೆ

Posted By: ಕಿರಣ್, ಮಂಗಳೂರು ಪ್ರತಿನಿಧಿ
Subscribe to Filmibeat Kannada

ಮಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಡ್ರಾಮಾ ಜೂನಿಯರ್ಸ್' ಕಾರ್ಯಕ್ರಮದಲ್ಲಿ ಬ್ರಾಹ್ಮಣರ ವೃತ್ತಿಗೆ ಅವಹೇಳನ ಮಾಡಿರುವುದರ ವಿರುದ್ಧ ಬ್ರಾಹ್ಮಣ ಸಮುದಾಯ ಬೇಸರಗೊಂಡಿದೆ. ಉಡುಪಿಯಲ್ಲಿ ಜೀ ಕನ್ನಡ ವಾಹಿನಿಯ 'ಡ್ರಾಮಾ ಜ್ಯೂನಿಯರ್ಸ್' ಕಾರ್ಯಕ್ರಮದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

'ಜೀ ಕನ್ನಡ'ದಿಂದ ದೊಡ್ಡ ಎಡವಟ್ಟು: ಕೋಪೋದ್ರೇಕದಿಂದ ಗುಟುರು ಹಾಕಿದ ಬ್ರಾಹ್ಮಣರು.!

ಉಡುಪಿಯ ಪೇಜಾವರ ಮಠದಲ್ಲಿ ಪ್ರತಿಭಟನಾ ಸಭೆ ನಡೆದು, ಯುವ ಬ್ರಾಹ್ಮಣ ಪರಿಷತ್ ನೇತೃತ್ವದಲ್ಲಿ ಖಂಡನಾ ನಿರ್ಣಯ ಕೈಗೊಳ್ಳಲಾಯಿತು. ಮುಂದಿನ ಸಂಚಿಕೆಯಲ್ಲಿ ಜೀ ಕನ್ನಡ ವಾಹಿನಿ ಕ್ಷಮೆ ಕೇಳುವಂತೆ ಒತ್ತಾಯಿಸಲಾಯಿತು.

Zee Kannada Channel should apologize says Vishwaprasanna Tirta Shree Swamiji

'ಡ್ರಾಮಾ ಜ್ಯೂನಿಯರ್ಸ್' ತೀರ್ಪುಗಾರರಿಗೆ ವೀಕ್ಷಕರೊಬ್ಬರು ಬರೆದಿರುವ ಪತ್ರ ಇದು.!

ಇದೇ ಸಂದರ್ಭದಲ್ಲಿ ಮಾತನಾಡಿದ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಶ್ರೀಗಳು, ''ಬ್ರಾಹ್ಮಣರ ವೃತ್ತಿಯನ್ನ ಅವಹೇಳನ ಮಾಡಲಾಗಿದೆ. ಇದು ನಮಗೆ ದುಃಖ ಉಂಟು ಮಾಡಿದೆ. ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಬೇಡ ಸಣ್ಣ ಮಕ್ಕಳ ಮನಸ್ಸಿನಲ್ಲಿ ವಿಷ ಬೀಜ ಬಿತ್ತುವ ಕಾರ್ಯ ಮಾಡದಿರಿ'' ಎಂದರು. ಜೊತೆಗೆ ಜೀ ಕನ್ನಡ ವಾಹಿನಿ ಈ ಕೂಡಲೇ ಕ್ಷಮೆ ಯಾಚಿಸದಿದ್ದರೆ ತೀವ್ರ ಪ್ರತಿಭಟನೆ ನಡೆಸುವುದಾಗಿ ಅವರು ಎಚ್ಚರಿಸಿದರು.

English summary
Zee kannada Channel's 'Drama Juniors' have show the Brahmin comminuty in a low level. Zee kannada must apologize says Vishwaprasanna Tirta Shree Swamiji here in Udupi by holding a meeting at Krishna Math on Aug 9th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada