For Quick Alerts
  ALLOW NOTIFICATIONS  
  For Daily Alerts

  ಕೃತಿ ಕರಬಂಧ ನಟನೆಯ '14 ಫೇರೆ' ಜುಲೈ 23ಕ್ಕೆ ಬಿಡುಗಡೆ

  |

  ಬಾಲಿವುಡ್ ನಟ ವಿಕ್ರಾಂತ್ ಮೆಸ್ಸೆ ಮತ್ತು ಕೃತಿ ಕರಬಂಧ ನಟನೆಯಲ್ಲಿ ತಯಾರಾಗಿರುವ '14 ಫೇರೆ' ಸಿನಿಮಾ ಇದೇ ತಿಂಗಳು ಪ್ರೇಕ್ಷಕರೆದುರು ಬರ್ತಿದೆ. ಜೀ5 ಒಟಿಟಿ ವೇದಿಕೆಯಲ್ಲಿ '14 ಫೇರೆ' ಸಿನಿಮಾ ಜುಲೈ 23 ರಂದು ರಿಲೀಸ್ ಆಗುತ್ತಿದೆ.

  ಗೌಹರ್ ಖಾನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದ 'ಚಿಂಟು ಕಾ ಬರ್ತಡೇ' ಸಿನಿಮಾ ನಿರ್ದೇಶಿಸಿದ್ದ ದೇವಂಶು ಸಿಂಗ್ '14 ಫೇರೆ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

  48 ಗಂಟೆಗಳು ನನ್ನ ಕುಟುಂಬಕ್ಕೆ ತೀರಾ ಸಂಕಷ್ಟದ ಸಮಯವಾಗಿತ್ತು; ಕೊರೊನಾ ತೀವ್ರತೆ ವಿವರಿಸಿದ ಕೃತಿ48 ಗಂಟೆಗಳು ನನ್ನ ಕುಟುಂಬಕ್ಕೆ ತೀರಾ ಸಂಕಷ್ಟದ ಸಮಯವಾಗಿತ್ತು; ಕೊರೊನಾ ತೀವ್ರತೆ ವಿವರಿಸಿದ ಕೃತಿ

  ಇದೊಂದು ಸಾಮಾಜಿಕ ಹಾಸ್ಯಮಯ ಕಥಾಹಂದರ ಹೊಂದಿದ್ದು, ಸಂಜಯ್ ಪಾತ್ರದಲ್ಲಿ ವಿಕ್ರಾಂತ್ ಹಾಗೂ ಅದಿತಿ ಪಾತ್ರದಲ್ಲಿ ಕೃತಿ ಕರಬಂಧ ಕಾಣಿಸಿಕೊಂಡಿದ್ದಾರೆ.

  ಜುಲೈ 23ಕ್ಕೆ ಸಿನಿಮಾ ಬಿಡುಗಡೆಯಾಗುತ್ತಿರುವ ವಿಷಯವನ್ನು ಕೃತಿ ಕರಬಂಧ ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಸಂತಸ ವ್ಯಕ್ತಪಡಿಸಿದ್ದಾರೆ. ಈಗಲೇ ದಿನಾಂಕ ಬುಕ್ ಮಾಡಿಕೊಳ್ಳಿ ಎಂದು ವಿನಂತಿಸಿದ್ದಾರೆ.

  'ಹಸೀನ್ ದಿಲ್‌ರುಬಾ' ಸಿನಿಮಾ ನಂತರ ವಿಕ್ರಾಂತ್ ಅಭಿನಯಿಸಿರುವ ಚಿತ್ರ 14 ಫೇರೆ. ಸಿನಿಮಾದ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ವಿಕ್ರಾಂತ್, ''ಭಾರತೀಯ ಸಂಸ್ಕ್ರತಿಗೆ ತಕ್ಕಂತೆ ಕಥೆ ಮಾಡಲಾಗಿದ್ದು, ಖಂಡಿತವಾಗಿಯೂ ಕುಟುಂಬ ಸಮೇತ ಪ್ರೇಕ್ಷಕರು ನೋಡಬಹುದು'' ಎಂದಿದ್ದಾರೆ.

  ವಿಕ್ರಾಂತ್ ಮೆಸ್ಸೆ, ಕೃತಿ ಕರಬಂಧ ಜೊತೆ ಗೌಹರ್ ಖಾನ್ ಮತ್ತು ಫ್ಲೋರಿಯನ್ ದಿಬಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮುಂಬೈ, ದೆಹಲಿ, ಜೈಪುರ ಮತ್ತು ಲಕ್ನೋದಲ್ಲಿ ಈ ಚಿತ್ರದ ಚಿತ್ರೀಕರಣ ನಡೆದಿದೆ.

  English summary
  Vikrant Massey and Kriti Kharbanda starrer '14 Phere' to premiere on ZEE5 on July 23.
  Tuesday, July 6, 2021, 13:52
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X