ಬಹುಕೋಟಿ ಮೊತ್ತದ ದೊಡ್ಡ ಒಪ್ಪಂದಕ್ಕೆ ಸಹಿ ಮಾಡಲಿದ್ದಾರೆ ನಟ ಅಮೀರ್ ಖಾನ್

ಬಾಲಿವುಡ್‌ನ ಖ್ಯಾತ ನಟ ಅಮೀರ್ ಖಾನ್ ಭಾರಿ ದೊಡ್ಡ ಮೊತ್ತದ ಒಪ್ಪಂದವೊಂದಕ್ಕೆ ಸಹಿ ಹಾಕಲಿದ್ದಾರೆ.

ಮನೊರಂಜನಾ ವಿಭಾಗದಲ್ಲಿ ಭಾರಿ ದೊಡ್ಡ ಬದಲಾವಣೆಯನ್ನು ತರುತ್ತಿರುವ ನೆಟ್‌ಫ್ಲಿಕ್ಸ್‌ ಜೊತೆ ಅಮೀರ್ ಖಾನ್ ಭಾರಿ ದೊಡ್ಡ ಮೊತ್ತದ ಒಪ್ಪಂದವನ್ನು ಸಹಿ ಮಾಡಲಿದ್ದಾರೆ.

ಈಗಾಗಲೇ ಬಾಲಿವುಡ್‌ನ ಬಿಗ್ ಬಜೆಟ್‌ ಸಿನಿಮಾಗಳನ್ನು ಕೊಂಡುಕೊಂಡು ಬಿಡುಗಡೆ ಮಾಡುತ್ತಿರುವ ನೆಟ್‌ಫ್ಲಿಕ್ಸ್, ಬಾಲಿವುಡ್‌ ಬಾಕ್ಸ್‌ ಆಫೀಸ್‌ನ ಲೆಕ್ಕಾಚಾರವನ್ನೇ ತಲೆಕೆಳಗು ಮಾಡಿಬಿಟ್ಟಿದೆ. ಕೇವಲ ಏಳು ಸಿನಿಮಾಕ್ಕೆ 570 ಕೋಟಿ ಹಣ ಹೂಡಿಕೆ ಮಾಡಿದೆ ನೆಟ್‌ಫ್ಲಿಕ್ಸ್‌. ಇಂಥಹಾ ನೆಟ್‌ಫ್ಲಿಕ್ಸ್‌ ಭಾರಿ ದೊಡ್ಡ ಮೊತ್ತದ ಡೀಲ್ ಒಂದನ್ನು ಅಮೀರ್ ಖಾನ್ ಮುಂದಿಟ್ಟಿದೆ.

ಅಮೀರ್ ಖಾನ್ ಜೊತೆ ನೆಟ್‌ಫ್ಲಿಕ್ಸ್ ಒಪ್ಪಂದ

ಅಮೀರ್ ಖಾನ್ ಜೊತೆ ನೆಟ್‌ಫ್ಲಿಕ್ಸ್ ಒಪ್ಪಂದ

ಅಮೀರ್ ಖಾನ್ ಜೊತೆ ವೆಬ್‌ ಸೀರೀಸ್ ಮತ್ತು ಸಿನಿಮಾದ ಒಪ್ಪಂದವನ್ನು ನೆಟ್‌ಫ್ಲಿಕ್ಸ್‌ ಮಾಡಿಕೊಳ್ಳಲಿದೆ. ಈ ಬಗ್ಗೆ ಕಳೆದ ಕೆಲ ತಿಂಗಳಿನಿಂದಲೂ ಮಾತುಕತೆ ನಡೆದಿದೆ ಎನ್ನಲಾಗುತ್ತಿದೆ. ಇದೀಗ ಒಪ್ಪಂದವು ಅಂತಿಮ ಹಂತ ತಲುಪಿದ್ದು, ಕೆಲವೇ ದಿನಗಳಲ್ಲಿ ಅಂತಿಮಗೊಳ್ಳಲಿದೆ ಎನ್ನಲಾಗುತ್ತಿದೆ.

ಅಮೀರ್ ಖಾನ್ ಪ್ರೊಡಕ್ಷನ್ ಮೂಲಕ ಸಿನಿಮಾ

ಅಮೀರ್ ಖಾನ್ ಪ್ರೊಡಕ್ಷನ್ ಮೂಲಕ ಸಿನಿಮಾ

ಅಮೀರ್ ಖಾನ್ ಅವರ ನಿರ್ಮಾಣ ಸಂಸ್ಥೆ 'ಅಮೀರ್ ಖಾನ್ ಪ್ರೊಡಕ್ಷನ್ಸ್' ಮುಂದಿನ ವರ್ಷಗಳಲ್ಲಿ ವೆಬ್ ಸೀರೀಸ್ ಮತ್ತು ಸಿನಿಮಾವನ್ನು ನೆಟ್‌ಫ್ಲಿಕ್ಸ್‌ ಗಾಗಿ ಮಾತ್ರವೇ ನಿರ್ಮಿಸಿಕೊಡಲಿದೆ. ಇದೇ ಆ ಒಪ್ಪಂದ. ಅಮೀರ್ ಖಾನ್ ನಿರ್ಮಿಸುವ ಸರಕು 'ನೆಟ್‌ಫ್ಲಿಕ್ಸ್ ಒರಿಜಿನಲ್' ಆಗಿರಲಿದೆ.

ಶಾರುಖ್ ಖಾನ್ ವೆಬ್ ಸರಣಿ ನಿರ್ಮಿಸಿದ್ದಾರೆ

ಶಾರುಖ್ ಖಾನ್ ವೆಬ್ ಸರಣಿ ನಿರ್ಮಿಸಿದ್ದಾರೆ

ಈಗಾಗಲೇ ಶಾರುಖ್ ಖಾನ್ ಒಂದು ವೆಬ್ ಸರಣಿಯನ್ನು ನೆಟ್‌ಫ್ಲಿಕ್ಸ್‌ಗಾಗಿ ನಿರ್ಮಿಸಿದ್ದಾರೆ. ಬೇತಾಳ್ ಹೆಸರಿನ ಈ ವೆಬ್ ಸೀರೀಸ್ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗಲಿದೆ. ನಟಿ ಅನುಷ್ಕಾ ಶರ್ಮಾ 'ಪಾತಾಲ್ ಲೋಕ್' ವೆಬ್ ಸರಣಿಯನ್ನು ಅಮೆಜಾನ್ ಪ್ರೈಂಗಾಗಿ ನಿರ್ಮಿಸಿದ್ದರು.

ಕರಣ್ ಜೋಹರ್ ಜೊತೆ ಒಪ್ಪಂದ ಮಾಡಿಕೊಂಡಿದೆ

ಕರಣ್ ಜೋಹರ್ ಜೊತೆ ಒಪ್ಪಂದ ಮಾಡಿಕೊಂಡಿದೆ

ನೆಟ್‌ಫ್ಲಿಕ್ಸ್‌ ಈಗಾಗಲೇ ಕರಣ್ ಜೋಹರ್ ಹಾಗೂ ವಯೋಕಾಮ್ 18 ಜೊತೆ ಒಪ್ಪಂದ ಮಾಡಿಕೊಂಡಿದೆ. ಮುಂದಿನ ದಿನಗಳಲ್ಲಿ ಕರಣ್ ಜೋಹರ್ ನೆಟ್‌ಫ್ಲಿಕ್ಸ್‌ಗಾಗಿ ಮನೊರಂಜನಾ ಸರಕನ್ನು ನಿರ್ಮಿಸಿ ನೀಡಲಿದ್ದಾರೆ.

More from Filmibeat

English summary
Bollywood star Aamir Khan sighning a very big deal with OTT netflix.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X