For Quick Alerts
  ALLOW NOTIFICATIONS  
  For Daily Alerts

  Ajith: OTTಯಲ್ಲಿ ದಾಖಲೆ ಬರೆದ 'ವಲಿಮೈ', 'ಭೀಮ್ಲಾ ನಾಯಕ್'

  |

  ತಮಿಳಿನಲ್ಲಿ ಇತ್ತೀಚೆಗೆ ಬಂದ 'ವಲಿಮೈ' ಸಿನಿಮಾ ಚಿತ್ರಮಂದಿರದಲ್ಲಿ ಉತ್ತಮ ಪ್ರದರ್ಶನ ಕಂಡು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದೆ. ಈಗ ಚಿತ್ರ ಒಟಿಟಿಯಲ್ಲಿ ತೆರೆಕಂಡಿದೆ. ಒಟಿಟಿಯಲ್ಲಿ ರಿಲೀಸ್ ಆಗಿರುವ 'ವಲಿಮೈ' ಚಿತ್ರ ಸದ್ಯ ದಾಖಲೆ ಬರೆಯುತ್ತಿದೆ. ಯಾವ ಸಿನಿಮಾ ಮಾಡಿರದ ದಾಖಲೆಯನ್ನೂ ಈ ಚಿತ್ರ ಒಟಿಟಿಯಲ್ಲಿ ಮಾಡಿದೆ.

  ಅಜಿತ್ ಕುಮಾರ್ ಅಭಿನಯದ ಈ ಚಿತ್ರಕ್ಕೆ ನಿರ್ದೇಶಕ ಹೆಚ್.ವಿನೋದ್ ನಿರ್ದೇಶನ ಇದೆ. ZEE 5 ಒಟಿಟಿಯಲ್ಲಿ ಚಿತ್ರ ತೆರೆಕಂಡಿದೆ. ರಿಲೀಸ್ ಆದ ಕೆಲವೇ ನಿಮಿಷಗಳಲ್ಲಿ ಎಲ್ಲಾ ದಾಖಲೆಗಳನ್ನು ಪುಡಿ, ಪುಡಿ ಮಾಡಿದೆ. ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ 100 ಮಿಲಿಯನ್ ಸ್ಟ್ರೀಮಿಂಗ್ ನಿಮಿಷಗಳನ್ನು ಪಡೆದುಕೊಂಡಿದೆ. ಈ ಮೂಲಕ ಉತ್ತಮ ಓಪನಿಂಗ್ ಪಡೆದುಕೊಂಡಿದೆ ಸಿನಿಮಾ.

  'ವಲಿಮೈ' ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಸೇರಿ ಒಟ್ಟು ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಎಲ್ಲಾ ಭಾಷೆಗಳಲ್ಲೂ ಈ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿದ್ದು, ಹೆಚ್ಚಿನ ವೀಕ್ಷಣೆ ಪಡೆದು ದಾಖಲೆ ಬರೆಯುತ್ತಿದೆ.

  2022ರಲ್ಲಿ ಬಂದ ಬಹು ನಿರೀಕ್ಷಿತ ಚಲನಚಿತ್ರಗಳಲ್ಲಿ 'ವಲಿಮೈ' ಕೂಡ ಒಂದು. ಈ ಚಿತ್ರದಲ್ಲಿ ಅಜಿತ್ ಕುಮಾರ್ IPS ಅಧಿಕಾರಿ ಅರ್ಜುನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ನಟ ಅಜಿತ್ ಮಸ್ತ್ ಆ್ಯಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಜಿತ್ ಆ್ಯಕ್ಷನ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಚಿತ್ರ ರಿಲೀಸ್ ಆದಾಗ ಎಲ್ಲಕ್ಕಿಂತಾ ಹೆಚ್ಚಾಗಿ ಸಿನಿಮಾದಲ್ಲಿ ಇರುವ ಆ್ಯಕ್ಷನ್ ದೃಶ್ಯಗಳೇ ಹೆಚ್ಚಾಗಿ ಸದ್ದು ಮಾಡಿದ್ದವು.

  ಚಿತ್ರಮಂದಿರದಲ್ಲಿ ತೆರೆಕಂಡು ಸಕ್ಸಸ್ ಆದ 'ವಲಿಮೈ' ಬಾಕ್ಸಾಫೀಸ್‌ನಲ್ಲಿ ಕೋಟಿ ಕೋಟಿ ಬಾಚಿತು. ಚಿತ್ರ ಒಟ್ಟಾರೆ 200 ಕೋಟಿಯ ಗಡಿ ದಾಟಿ ದಾಖಲೆ ಮಾಡಿದೆ. ವರದಿಯ ಪ್ರಕಾರ ಚಿತ್ರ ಒಟ್ಟು 202 ಕೋಟಿ ಗಳಿಕೆ ಮಾಡಿದೆ. ಈಗ ಒಟಿಟಿಯಲ್ಲಿ ಸಿನಿಮಾ 100 ಮಿಲಿಯನ್ ಸ್ಟ್ರೀಮಿಂಗ್ ಮಿನಿಟ್ಸ್ ಮೂಲಕ ದಾಖಲೆ ಮಾಡಿದೆ.

  English summary
  Actor Ajith Valimai Pawan Kalyan Bheemla Nayak Set New Record In Ott, It Breaks All The Record,
  Tuesday, March 29, 2022, 17:53
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X