For Quick Alerts
  ALLOW NOTIFICATIONS  
  For Daily Alerts

  ಕಂಗನಾರ ವಿವಾದ ಪ್ರಿಯತೆಯನ್ನು ಬಂಡವಾಳ ಮಾಡಿಕೊಂಡ ಏಕ್ತಾ ಕಪೂರ್!

  |

  ನಟಿ ಕಂಗನಾ ರನೌತ್ ಬಾಲಿವುಡ್‌ನ ಪ್ರತಿಭಾವಂತ ನಟಿ ಆದರೆ ಅವರು ತಮ್ಮ ನಟನೆಗಿಂತಲೂ ಹೆಚ್ಚಾಗಿ ವಿವಾದಗಳು, ಟ್ವೀಟ್‌ಗಳಿಂದಲೇ ಸುದ್ದಿಯಲ್ಲಿರುತ್ತಾರೆ.

  Recommended Video

  ಈ ತರ ಹೇಳಿಕೆ ಕೊಡೋದ್ರಲ್ಲಿ ಕಂಗನಾ ಫೇಮಸ್

  ಬಿಜೆಪಿಯ ಅನಧಿಕೃತ ವಕ್ತಾರೆ, ಧರ್ಮ ಅಸಹಿಷ್ಣು ಎಂದೆಲ್ಲಾ ನೆಟ್ಟಿಗರಿಂದ ಕರೆಯಲ್ಪಡುವ ಕಂಗನಾರ ಟ್ವೀಟ್‌ಗಳು, ಮಾತುಗಳು ವಿವಾದಕ್ಕೆ ಈಡಾಗುವುದು ಸರ್ವೆ ಸಾಮಾನ್ಯ ಎಂಬಂತಾಗಿದೆ.

  ಇದೀಗ ಕಂಗನಾರ ಈ ವಾಚಾಳಿತನ, ವಿವಾದ ಎಬ್ಬಿಸುವವಲ್ಲಿನ ಹಪಹಪಿಯನ್ನೇ ಬಂಡವಾಳವಾಗಿಸಿಕೊಂಡು ಹೊಸ ರಿಯಾಲಿಟಿ ಶೋ ಒಂದನ್ನು ನಿರ್ಮಾಣ ಮಾಡಲಾಗುತ್ತಿದೆ. ರಿಯಾಲಿಟಿ ಶೋ ಅನ್ನು ಕಂಗನಾ ಅವರೇ ನಿರೂಪಣೆ ಮಾಡಲಿದ್ದಾರೆ.

  ಬಾಲಿವುಡ್‌ನ ಜನಪ್ರಿಯ ನಿರ್ಮಾಪಕಿ ಆಗಿರುವ ಏಕ್ತಾ ಕಪೂರ್ ನಿರ್ಮಾಣದ ಹೊಸ ಡೇಟಿಂಗ್ ರಿಯಾಲಿಟಿ ಶೋ ಅನ್ನು ಕಂಗನಾ ರನೌತ್ ನಿರೂಪಣೆ ಮಾಡಲಿದ್ದಾರೆ. ಈ ಬಗ್ಗೆ ಸ್ವತಃ ಕಂಗನಾ ರನೌತ್ ಪೋಸ್ಟರ್ ಒಂದನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ''ಮೊದಲ ಬಾರಿಗೆ ರಿಯಾಲಿಟಿ ಶೋ ನಿರೂಪಣೆ ಮಾಡಲಿದ್ದೇನು. ಅದೂ ಬಾಸ್ ಲೇಡಿ ಏಕ್ತಾ ಕಪೂರ್‌ಗಾಗಿ'' ಎಂದಿದ್ದರು. ಆದರೆ ಬಳಿಕ ಆ ಪೋಸ್ಟ್ ಅನ್ನು ಡಿಲೀಟ್ ಮಾಡಿದರು.

  ಅದಕ್ಕೆ ಕೆಲ ದಿನಗಳ ಹಿಂದಷ್ಟೆ ಏಕ್ತಾ ಕಪೂರ್ ಒಡೆತನದ ಆಲ್ಟ್ ಬಾಲಾಜಿ ಒಟಿಟಿಯು ಹೊಸದಾದ ಡೇಟಿಂಗ್ ರಿಯಾಲಿಟಿ ಶೋಗೆ ರೆಡಿಯಾಗಿ. ಈ ಡೇಟಿಂಗ್ ರಿಯಾಲಿಟಿ ಶೋ ಈವರೆಗೆ ಅತ್ಯಂತ ನಿರ್ಭೀತ, ಸತ್ಯವಂತ ರಿಯಾಲಿಟಿ ಶೋ ಆಗಿರಲಿದೆ. ದೊಡ್ಡ ಧಮಾಕಾಗೆ ಸಿದ್ಧವಾಗಿ' ಎಂದು ಜಾಹೀರಾತು ನೀಡಿತ್ತು. ಈಗ ಅದೇ ಶೋ ಅನ್ನು ಕಂಗನಾ ರನೌತ್ ನಿರೂಪಣೆ ಮಾಡಲಿದ್ದಾರೆ ಎನ್ನಲಾಗುತ್ತಿದೆ.

  ಏಕ್ತಾ ಕಪೂರ್ ನಿರ್ಮಾಣ ಮಾಡಲು ಹೊರಟಿರುವ ರಿಯಾಲಿಟಿ ಶೋ ಭಾರತದಲ್ಲೇ ಅತಿ ದೊಡ್ಡ ರಿಯಾಲಿಟಿ ಶೋ ಎನಿಸಿಕೊಳ್ಳಲಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. ಭಾರಿ ಸಂಖ್ಯೆಯ ಸ್ಪರ್ಧಿಗಳು, ವೀಕ್ಷಕರು, ದೊಡ್ಡ ಮಟ್ಟದ ಸೆಟ್‌ ಎಲ್ಲವೂ ಈ ರಿಯಾಲಿಟಿ ಶೋನಲ್ಲಿ ಇರಲಿದೆ ಎಂದು ಹೇಳಲಾಗಿದೆ.

  ನಟಿ ಏಕ್ತಾ ಕಪೂರ್ ಬಾಲಿವುಡ್‌ನ ದೊಡ್ಡ ನಿರ್ಮಾಪಕರಿಯರಲ್ಲಿ ಒಬ್ಬರಾಗಿದ್ದ ಹಲವು ದೊಡ್ಡ ಬಜೆಟ್‌ನ ಟಿವಿ ಧಾರಾವಾಹಿಗಳು, ಸಿನಿಮಾಗಳನ್ನು ಈಗಾಗಲೇ ನಿರ್ಮಾಣ ಮಾಡಿದ್ದಾರೆ. ಭಾರತೀಯ ಟಿವಿ ಕಂಟೆಂಟ್ ಅನ್ನು ಬದಲು ಮಾಡಿದ ಶ್ರೇಯ ಏಕ್ತಾ ಕಪೂರ್‌ಗೆ ಸಲ್ಲುತ್ತದೆ. ಇದೀಗ ಆಲ್ಟ್ ಬಾಲಾಜಿ ಹೆಸರಿನ ಒಟಿಟಿ ಪ್ರಾರಂಭಿಸಿರುವ ಏಕ್ತಾ ಕಪೂರ್ ಒಟಿಟಿಗಾಗಿ ಹಲವು ಭಿನ್ನ ರೀತಿಯ ಕಂಟೆಂಟ್ ಅನ್ನು ನಿರ್ಮಾಣ ಮಾಡುತ್ತಿದ್ದಾರೆ.

  ಇನ್ನು ನಟಿ ಕಂಗನಾ ರನೌತ್ ಸಿನಿಮಾಗಳಲ್ಲಿ ಈಗಾಗಲೇ ಬಹಳ ಬ್ಯುಸಿಯಾಗಿದ್ದಾರೆ. ಕಂಗನಾ ನಟಿಸಿರುವ 'ಟೀಕು ವೆಡ್ಸ್ ಶೇರು' ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದೆ. ಅದರ ಜೊತೆಗೆ 'ಸೀತಾ', ಹಾಗೂ 'ತೇಜಸ್' ಸಿನಿಮಾಗಳ ಚಿತ್ರೀಕರಣ ಸಹ ಚಾಲ್ತಿಯಲ್ಲಿದೆ. 'ಧಾಖಡ್' ಆಕ್ಷನ್ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. 'ಇಮ್ಲಿ' ಸಿನಿಮಾ ಸೆಟ್ಟೇರಬೇಕಿದೆ. ಇದರ ಜೊತೆಗೆ ತಾವೇ ಒಂದು ಹೊಸ ಸಿನಿಮಾ ನಿರ್ಮಾಣ ಮಾಡುವುದಾಗಿಯೂ ಕಂಗನಾ ಘೋಷಿಸಿದ್ದಾರೆ.

  English summary
  Actress Kangana Ranaut hosting her first ever reality show. This reality show will be produced by producer Ekta Kapoor.
  Wednesday, February 2, 2022, 10:17
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X