For Quick Alerts
  ALLOW NOTIFICATIONS  
  For Daily Alerts

  ಮಾಜಿ ಪ್ರೇಮಿಗಳಿಬ್ಬರಿಗೂ ಅದೇ ಭಯ: ಬಾಲಿವುಡ್‌ನಲ್ಲಿ ಬಿಸಿಬಿಸಿ ಚರ್ಚೆ ಶುರು!

  |

  ಒಟಿಟಿಯಲ್ಲಿ ಪ್ರಸಾರವಾಗುತ್ತಿರುವ 'ಕಾಫಿ ವಿತ್ ಕರಣ್' ಶೋ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. ಆದರೆ ಈ ಬಾರಿ ಶೋನಲ್ಲಿ ಭಾಗವಹಿಸಲು ರಣ್‌ಬೀರ್‌ ಕಪೂರ್ ನಿರಾಕರಿಸಿದ್ದಾರೆ ಎನ್ನುವ ಗುಸುಗುಸು ಇತ್ತೀಚೆಗೆ ಕೇಳಿಬಂದಿತ್ತು. ಇದರ ಬೆನ್ನಲ್ಲೇ ಈಗ ದೀಪಿಕಾ ಪಡುಕೋಣೆ ಕೂಡ 'ಕಾಫಿ ವಿತ್ ಕರಣ್' ಶೋಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ ಅಂತ ಬಾಲಿವುಡ್‌ನಲ್ಲಿ ಗುಲ್ಲಾಗಿದೆ.

  2004ರಲ್ಲಿ ಆರಂಭವಾದ ಶೋನ 6 ಸೀಸನ್‌ಗಳು ಈಗಾಗಲೇ ಯಶಸ್ವಿಯಾಗಿದ್ದು, 7ನೇ ಸೀಸನ್ ಕೆಲ ದಿನಗಳಿಂದ ಡಿಜಿಟಲ್ ಫ್ಲಾಟ್‌ಫಾರ್ಮ್‌ನಲ್ಲಿ ಸದ್ದು ಮಾಡ್ತಿದೆ. ಸೆಲೆಬ್ರೆಟಿಗಳ ಖುಲ್ಲಾಂ ಖುಲ್ಲಾಂ ಮಾತುಗಳು, ವಿವಾದಾತ್ಮಕ ಹೇಳಿಕೆಗಳು ಸಖತ್ ವೈರಲ್ ಆಗುತ್ತಿರುತ್ತದೆ. ಬಹುತೇಕ ಬಾಲಿವುಡ್‌ನ ಸ್ಟಾರ್ ಕಲಾವಿದರೆಲ್ಲಾ ಈ ಶೋಗೆ ಹಾಜರಾಗಿದ್ದಾರೆ. ಈ ಬಾರಿ ಮತ್ತಷ್ಟು ಕಲಾವಿದರು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದು, ಶೋ ಎಲ್ಲರ ಗಮನ ಸೆಳೆದಿರುವುದು ಸುಳ್ಳಲ್ಲ. ಆದರೆ ಕೆಲವರು ಕರಣ್ ಜೊತೆ ಶೋನಲ್ಲಿ ಮಾತನಾಡಲು ಒಲ್ಲೆ ಎನ್ನುತ್ತಿದ್ದಾರಂತೆ. ಆ ಸಾಲಿಗೆ ಹೊಸ ಸೇರ್ಪಣೆ ದೀಪಿಕಾ ಪಡುಕೋಣೆ.

  ಸಂಪೂರ್ಣ ಬೆತ್ತಲಾದ ರಣ್‌ವೀರ್ ಸಿಂಗ್; ದೀಪಿಕಾ ಪಡುಕೋಣೆ ಪತಿರಾಯನ ಸಾಹಸಕ್ಕೆ ಫ್ಯಾನ್ಸ್ ಶಾಕ್!ಸಂಪೂರ್ಣ ಬೆತ್ತಲಾದ ರಣ್‌ವೀರ್ ಸಿಂಗ್; ದೀಪಿಕಾ ಪಡುಕೋಣೆ ಪತಿರಾಯನ ಸಾಹಸಕ್ಕೆ ಫ್ಯಾನ್ಸ್ ಶಾಕ್!

  ಕರಣ್‌ ಜೋಹರ್ ಟಾಕ್‌ ಶೋನಲ್ಲಿ ಭಾಗವಹಿಸುವುದು ಸೆಲೆಬ್ರೆಟಿಗಳಿಗೆ ವಿಚಿತ್ರ ಅನುಭವ. ಅಲ್ಲಿ ಕೂತು ಮಾತನಾಡುವಾಗ ಎಲ್ಲವೂ ಸರಿಯಾಗೇ ಇರುತ್ತೆ. ಆದರೆ ಮಾತನಾಡುವ ಭರದಲ್ಲಿ ಏನೇನೋ ಹೇಳಿ ಆಮೇಲೆ ಪೇಚಿಗೆ ಸಿಲುಕಿಕೊಳ್ಳುವ ಸಾಧ್ಯತೆ ಇರುತ್ತದೆ. ನಂತರ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್‌ಗೆ ಗುರಿಯಾಗಬೇಕಾಗುತ್ತದೆ. ಇದೇ ವಿಚಾರ ಕೆಲವರಿಗೆ ಆತಂಕ ಉಂಟು ಮಾಡಿದ್ದು, ಶೋನಲ್ಲಿ ಭಾಗವಹಿಸದೇ ಇರುವಂತೆ ಮಾಡುತ್ತಿದೆ. ಈ ಹಿಂದೆ ಬೇರೊಂದು ಸಂದರ್ಶನದಲ್ಲಿ ರಣ್‌ಬೀರ್ ಕಪೂರ್ ಪರೋಕ್ಷವಾಗಿ ಈ ವಿಚಾರವನ್ನು ಹೇಳಿಕೊಂಡಿದ್ದರು. ಇದೇ ಕಾರಣಕ್ಕೆ ಮಾಜಿ ಪ್ರೇಮಿಗಳಿಬ್ಬರು 'ಕಾಫಿ ವಿತ್ ಕರಣ್' ಹೊಸ ಸೀಸನ್‌ಗೆ ಹಾಜರಾಗದಿರಲು ನಿರ್ಧರಿಸಿದಂತಿದೆ. ಸ್ವತಃ ಕರಣ್‌ ಪರಿ ಪರಿಯಾಗಿ ಮನವಿ ಮಾಡಿಕೊಂಡರು ಕೂಡ ಇಬ್ಬರು ಭಾಗವಹಿಸೋಕೆ ಹಿಂದೇಟು ಹಾಕುತ್ತಿದ್ದಾರೆ ಅನ್ನುವ ಚರ್ಚೆ ಬಾಲಿವುಡ್‌ನಲ್ಲಿ ನಡೀತಿದೆ. ಅಥವಾ ಬೇರೆ ಏನಾದರೂ ಕಾರಣ ಇದೆಯಾ ಅನ್ನೋದು ಗೊತ್ತಾಗಬೇಕಿದೆ.

   ಭಾರೀ ಸದ್ದು ಮಾಡುತ್ತಿದೆ 'ಕಾಫಿ ವಿತ್ ಕರಣ್ 7'

  ಭಾರೀ ಸದ್ದು ಮಾಡುತ್ತಿದೆ 'ಕಾಫಿ ವಿತ್ ಕರಣ್ 7'

  ಒಟಿಟಿ ಪ್ರಸಾರವಾಗುತ್ತಿರುವ 'ಕಾಫಿ ವಿತ್ ಕರಣ್'- ಸೀಸನ್ 7ರಲ್ಲಿ ಪ್ರತಿವಾರ ಇಬ್ಬರು ಸೆಲೆಬ್ರೆಟಿಗಳು ಭಾಗವಹಿಸಿ ಮಾತು, ಹರಟೆ, ರ್ಯಾಪಿಡ್ ಫೈಯರ್ ರೌಂಡ್‌ಗಳಲ್ಲಿ ವೀಕ್ಷಕರಿಗೆ ಸಖತ್ ಮನರಂಜನೆ ಕೊಡುತ್ತಿದ್ದಾರೆ. ಈ ಬಾರಿ ಮೊದಲ ಎಪಿಸೋಡ್‌ನಲ್ಲಿ ರಣ್‌ವೀರ್‌ ಸಿಂಗ್- ಆಲಿಯಾ ಭಟ್ ಕಾಣಿಸಿಕೊಂಡಿದ್ದರು. ಎರಡನೇ ಎಪಿಸೋಡ್‌ನಲ್ಲಿ ಜಾನ್ವಿ ಕಪೂರ್- ಸಾರಾ ಅಲಿ ಖಾನ್, ಮೂರನೇ ಎಪಿಸೋಡ್‌ನಲ್ಲಿ ಅಕ್ಷಯ್‌ ಕುಮಾರ್‌ ಹಾಗೂ ಸಮಂತಾ ಮಿಂಚಿದ್ದರು. ನಾಗಚೈತನ್ಯಾ ಜೊತೆಗಿನ ಡೈವೋರ್ಸ್‌ ಬಗ್ಗೆ ಸಮಂತಾ ಮಾತುಗಳು ಸಖತ್ ವೈರಲ್ ಆಗಿತ್ತು. ನಾಲ್ಕನೇ ಎಪಿಸೋಡ್‌ನಲ್ಲಿ ವಿಜಯ್ ದೇವರಕೊಂಡ ಹಾಗೂ ಅನನ್ಯಾ ಪಾಂಡೆ ಭಾಗವಹಿಸ್ತಿದ್ದು, ಈಗಾಗಲೇ ಪ್ರೋಮೊ ರಿಲೀಸ್ ಆಗಿದೆ.

  ದೀಪಿಕಾ ಪಡುಕೋಣೆಯನ್ನೇ ಹೋಲುವ ಈ ಯುವತಿ ಯಾರು? ಎಲ್ಲಿಯವಳು?ದೀಪಿಕಾ ಪಡುಕೋಣೆಯನ್ನೇ ಹೋಲುವ ಈ ಯುವತಿ ಯಾರು? ಎಲ್ಲಿಯವಳು?

   'ಕಾಫಿ ವಿತ್ ಕರಣ್' ಶೋ ವಿವಾದ

  'ಕಾಫಿ ವಿತ್ ಕರಣ್' ಶೋ ವಿವಾದ

  ಬಾಲಿವುಡ್ ಸೆಲೆಬ್ರೆಟಿಗಳು ಸಿಕ್ಕಾಪಟ್ಟೆ ಬೋಲ್ಡ್ ಆಗಿ ಮಾತನಾಡುತ್ತಾರೆ. ಇನ್ನು 'ಕಾಫಿ ವಿತ್ ಕರಣ್' ಶೋನಲ್ಲೂ ಇಂತದ್ದೇ ಬೋಲ್ಡ್ ಪ್ರಶ್ನೆಗಳು ಎದುರಾಗುತ್ತವೆ. ಆ ಪ್ರಶ್ನೆಗಳಿಗೆ ಉತ್ತರಿಸುವ ಭರದಿಂದ ಕೆಲವೊಮ್ಮೆ ಗೊಂದಲಕ್ಕೆ ಸಿಲುಕುವಂತಾಗುತ್ತದೆ. ಈ ಶೋನಲ್ಲಿ ಒಮ್ಮೆ ರಣ್‌ಬೀರ್ ಕಪೂರ್ ಬಗ್ಗೆ ದೀಪಿಕಾ ಪಡುಕೋಣೆ ಮಾಡಿದ್ದ ಕಾಮೆಂಟ್ ಭಾರೀ ಚರ್ಚೆ ಹುಟ್ಟಾಕ್ಕಿತ್ತು. 'ಯಾವ ಪ್ರಾಡಕ್ಟ್‌ ಅನ್ನು ರಣ್‌ಬೀರ್ ಕಪೂರ್ ಎಂಡಾರ್ಸ್ ಮಾಡಬೇಕು' ಅಂತ ಕೇಳಿದಾಗ, ಹಿಂದು ಮುಂದು ನೋಡದೇ ದೀಪಿಕಾ 'ಕಾಂಡೋಮ್ಸ್' ಎಂದುಬಿಟ್ಟಿದ್ದರು. ಈ ಎಪಿಸೋಡ್ ವೀಕ್ಷಿಸಿ ಡಿಪ್ಪಿ ಮೇಲೆ ನೀತೂ ಕಪೂರ್ ಮತ್ತು ಕುಟುಂಬ ಮುನಿಸಿಕೊಂಡಿದ್ದರು.

   ಪ್ರೀತಿಸಿ ದೂರಾಗಿದ್ದ ರಣ್‌ಬೀರ್- ದೀಪಿಕಾ!

  ಪ್ರೀತಿಸಿ ದೂರಾಗಿದ್ದ ರಣ್‌ಬೀರ್- ದೀಪಿಕಾ!

  2008ರಲ್ಲಿ 'ಬಚನಾ ಏ ಹಸೀನೋ' ಚಿತ್ರದಲ್ಲಿ ರಣ್‌ಬೀರ್ ಕಪೂರ್ ಹಾಗೂ ದೀಪಿಕಾ ಪಡುಕೋಣೆ ಒಟ್ಟಿಗೆ ನಟಿಸಿದ್ದರು. ಒಂದೇ ಸಮಯದಲ್ಲಿ ಬಾಲಿವುಡ್ ಪ್ರವೇಶಿಸಿದ ಜೋಡಿ ನಡುವೆ ಸ್ನೇಹ ಶುರುವಾಗಿ ನಂತರ ಅದು ಪ್ರೀತಿಗೆ ತಿರುಗಿತ್ತು. ಕೆಲವೇ ವರ್ಷಗಳ ನಂತ್ರ ಭಿನ್ನಾಭಿಪ್ರಾಯಗಳಿಂದ ಲವ್ ಬ್ರೇಕಪ್‌ ಆಯಿತು. ಪ್ರೀತಿ ಮುರಿದುಬಿದ್ದ ನಂತರ ಕೂಡ 'ಯೇ ಜವಾನಿ ಹೈ ದಿವಾನಿ' ಹಾಗೂ 'ತಮಾಷಾ' ಸಿನಿಮಾಗಳಲ್ಲಿ ಜೋಡಿ ಒಟ್ಟಾಗಿ ನಟಿಸಿತ್ತು. ಮುಂದೆ ರಣ್‌ವೀರ್‌ ಸಿಂಗ್‌ನ ಪ್ರೀತಿಸಿ ದೀಪಿಕಾ ಮದುವೆ ಆದರೆ, ಆಲಿಯಾ ಭಟ್‌ನ ಜೊತೆ ರಣ್‌ಬೀರ್ ಹಸೆಮಣೆ ಏರಿದರು.

  ಶಾರುಖ್, ಸಲ್ಮಾನ್ ಫ್ಲ್ಯಾಟ್ ಮಧ್ಯೆ ₹119 ಕೋಟಿ ಬಂಗಲೆ ಖರೀದಿಸಿದ ದೀಪಿಕಾ-ರಣ್‌ವೀರ್: ಹೈಲೈಟ್ ಏನು?ಶಾರುಖ್, ಸಲ್ಮಾನ್ ಫ್ಲ್ಯಾಟ್ ಮಧ್ಯೆ ₹119 ಕೋಟಿ ಬಂಗಲೆ ಖರೀದಿಸಿದ ದೀಪಿಕಾ-ರಣ್‌ವೀರ್: ಹೈಲೈಟ್ ಏನು?

   ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿದ 'ಶಂಷೇರಾ'

  ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿದ 'ಶಂಷೇರಾ'

  ಸಿನಿಮಾಗಳ ವಿಚಾರವಾಗಿ ಮಾತನಾಡುವುದಾದರೆ ರಣ್‌ಬೀರ್ ಕಪೂರ್ ನಟನೆಯ 'ಶಂಷೇರಾ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿದೆ. ಕಳೆದ ಶುಕ್ರವಾರ ತೆರೆಕಂಡ ಸಿನಿಮಾ ಹೇಳ ಹೆಸರಿಲ್ಲದಂತೆ ನೆಲ ಕಚ್ಚಿದೆ. ಇನ್ನು ರಣ್‌ಬೀರ್ ಕಪೂರ್ ಹಾಗೂ ಆಲಿಯಾ ಭಟ್ ಜೋಡಿಯ 'ಬ್ರಹ್ಮಾಸ್ತ್ರ' ಚಿತ್ರದ ಮೊದಲ ಭಾಗ ಸೆಪ್ಟೆಂಬರ್ 9ಕ್ಕೆ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ರಿಲೀಸ್ ಆಗಲಿದೆ.

  'ಪಠಾಣ್' ಚಿತ್ರದಲ್ಲಿ ಗನ್ ಹಿಡಿದ ದೀಪಿಕಾ ಪಡುಕೋಣೆ

  ಯಶ್ ರಾಜ್ ಫಿಲ್ಮ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ 'ಪಠಾಣ್' ಚಿತ್ರದಲ್ಲಿ ಶಾರೂಖ್ ಖಾನ್ ಜೊತೆ ದೀಪಿಕಾ ಪಡುಕೋಣೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಸೋಮವಾರ ಮೋಷನ್ ಪೋಸ್ಟರ್‌ ರಿಲೀಸ್ ಆಗಿದ್ದು ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಪಾತ್ರವನ್ನು ಪರಿಚಯ ಮಾಡಿಕೊಟ್ಟಿದ್ದಾರೆ. ಪೋಸ್ಟರ್‌ನಲ್ಲಿ ದೀಪಿಕಾ ಗನ್ ಹಿಡಿದು ಶೂಟ್ ಮಾಡುತ್ತಿದ್ದು, ಅಭಿಮಾನಿಗಳು ಹಿಂದೆಂದೂ ನೋಡಿರದ ಅವತಾರದಲ್ಲಿ ದೀಪಿಕಾಳನ್ನು ಈ ಚಿತ್ರದಲ್ಲಿ ನೋಡಬಹುದು.

  Recommended Video

  ಹೆಂಡತಿ ಕೈ ಹಿಡಿದು ಬರಮಾಡಿಕೊಂಡ ಸುದೀಪ್ | Vikrant Rona | Kiccha Sudeep | Priya Sudeep | *Press Meet
  English summary
  After Ranbir Kapoor Deepika Padukone Also Says No To Koffee With Karan Season 7. Know More.
  Wednesday, July 27, 2022, 10:09
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X