For Quick Alerts
  ALLOW NOTIFICATIONS  
  For Daily Alerts

  ಅಕ್ಷಯ್ ಕುಮಾರ್ 'ಬೆಲ್ ಬಾಟಂ'ಗಾಗಿ OTT ನಡುವೆ ಭಾರಿ ಪೈಪೋಟಿ

  |

  ದೇಶದಲ್ಲಿ ಕೊರೊನಾ ವೈರಸ್ ಎರಡನೇ ಅಲೆ ಭೀಕರವಾಗಿದೆ. ದೇಶದ ಜನ ಆಸ್ಪತ್ರೆ, ಬೆಸ್, ಆಕ್ಸಿಜನ್ ಗಾಗಿ ಪರದಾಡುತ್ತಿದ್ದಾರೆ. ಸೋವಿರಾರು ಜನರನ್ನು ಕೊರೊನಾ ಬಲಿ ಪಡೆಯುತ್ತಿದೆ. ಕೊರೊನಾದಿಂದ ಕೊಂಚ ಚೇತರಿಸಿಕೊಳ್ಳುತ್ತಿದ್ದೇವೆ ಎನ್ನುವಷ್ಟೊತ್ತಿಗೆಯೇ ಎರಡನೇ ಅಲೆ ಮತ್ತಷ್ಟು ಭೀಕರವಾಗಿ ಕಾಡುತ್ತಿದೆ.

  ಕೊರೊನಾದಿಂದ ಚಿತ್ರರಂಗ ಕೂಡ ಸ್ತಬ್ಧವಾಗಿದೆ. ರಿಲೀಸ್ ಗೆ ರೆಡಿಯಾಗಿದ್ದ ಸಾಲು ಸಾಲು ಸಿನಿಮಾಗಳು ಮತ್ತೆ ಮುಂದಕ್ಕೆ ಹೋಗಿವೆ. ನಿರ್ಮಾಪಕರು ಮತ್ತೆ ಒಟಿಟಿ ಕಡೆ ಮುಖಮಾಡುತ್ತಿದ್ದಾರೆ.

  ಬಾಲಿವುಡ್ ನಟ ಅಕ್ಷಯ್ ಕುಮಾರ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ವರ್ಷ ಅನೇಕ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿದ್ದವು. ಆದರೀಗ ಕೊರೊನಾ ಎರಡನೇ ಅಲೆ ಸಿನಿಮಾ ಲೆಕ್ಕಾಚಾರವನ್ನು ತಲೆಕೆಳಗಾಗಿಸಿ.

  100 ಆಮ್ಲಜನಕ ಸಾಂದ್ರಕ ದಾನ ಮಾಡಿದ ಅಕ್ಷಯ್ ಕುಮಾರ್ ದಂಪತಿ100 ಆಮ್ಲಜನಕ ಸಾಂದ್ರಕ ದಾನ ಮಾಡಿದ ಅಕ್ಷಯ್ ಕುಮಾರ್ ದಂಪತಿ

  ಅಕ್ಷಯ್ ಕುಮಾರ್ ನಟನೆಯ ಬೆಲ್ ಬಾಟಂ ಸಿನಿಮಾ ಆನ್ ಲೈನ್ ನಲ್ಲಿ ಬಿಡುಗಡೆ ಮಾಡಲು ಸಿನಿಮಾತಂಡ ಪ್ಲಾನ್ ಮಾಡಿದೆ. ಇತ್ತೀಚಿಗಷ್ಟೆ ಸಲ್ಮಾನ್ ಖಾನ್ ನಟನೆಯ ರಾಧೆ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಮಾಡುವುದಾಗಿ ಅನೌನ್ಸ್ ಮಾಡಿದೆ. ಇದರ ಬೆನ್ನಲ್ಲೇ ಈಗ ಬೆಲ್ ಬಾಟಂ ಕೂಡ ಒಟಿಟಿಯಲ್ಲಿ ಬಿಡುಗಡೆ ಮಾಡಲು ಮಾತುಕತೆ ನಡೆಯುತ್ತಿದೆ.

  ಅಂದುಕೊಂಡಂತೆ ಆದರೆ ಸಿನಿಮಾ ಮೇ 28ರಲ್ಲಿ ತೆರೆಗೆ ಬರಬೇಕಿತ್ತು. ಆದರೀಗ ಆನ್ ಲೈನ್ ನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದು, ಸಿನಿಮಾಗಾಗಿ ಅಮೆಜಾನ್ ಪ್ರೈಂ ಮತ್ತು ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ನಡುವೆ ಪೈಪೋಟಿ ನಡೆಯುತ್ತಿದೆಯಂತೆ. ಅಮೆಜಾನ್ ಪ್ರೈಂ 125 ಕೋಟಿಗೆ ಬೇಡಿಕೆ ಇಟ್ಟಿದೆಯಂತೆ. ಆದರೆ ತಯಾರಕರು 150 ಕೋಟಿಗೆ ಹಾಟ್ ಸ್ಟಾರ್ ಜೊತೆ ಮಾತುಕತೆ ನಡೆಸುತ್ತಿದ್ದಾರಂತೆ. ಫೈನಲಿ ಬೆಲ್ ಬಾಟಂ ಯಾವುದಕ್ಕೆ ಸೇಲ್ ಆಗಲಿದೆ ಎನ್ನುವುದು ಕುತೂಹಲ ಮೂಡಿಸಿದೆ.

  ಕಳೆದ ವರ್ಷ ಕೂಡ ಅಕ್ಷಯ್ ಕುಮಾರ್ ಸಿನಿಮಾ ಒಟಿಟಿಯಲ್ಲಿ ತೆರೆಗೆ ಬಂದಿತ್ತು. ಇದೀಗ ಬೆಲ್ ಬಾಟಂ ಮೂಲಕ ಎರಡನೇ ಬಾರಿ ಆನ್ ಲೈನ್ ನಲ್ಲಿ ಮಿಂಚಲು ಸಜ್ಜಾಗುತ್ತಿದ್ದಾರೆ. ಆದರೆ ಯಾವಾಗ, ಯಾವ ಒಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಬಿಡುಗಡೆಯಾಗಲಿದೆ ಎನ್ನುವುದನ್ನು ಕಾದುನೋಡಬೇಕು.

  English summary
  Bollywood Actor Akshay Kumar starrer Bell Bottom movie likely to release on OTT.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X