For Quick Alerts
  ALLOW NOTIFICATIONS  
  For Daily Alerts

  ಕೆಜಿಎಫ್ ಚಾಪ್ಟರ್ 2 ಡಿಜಿಟಲ್ ಹಕ್ಕಿಗೆ ಭಾರಿ ಮೊತ್ತದ ಆಫರ್ ಕೊಟ್ಟ ಅಮೆಜಾನ್?

  |

  ಪ್ರಶಾಂತ್ ನೀಲ್ ನಿರ್ದೇಶನದ, ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್' ಭಾರತೀಯ ಸಿನಿಮಾ ರಸಿಕರನ್ನು ಕನ್ನಡ ಚಿತ್ರರಂಗದತ್ತ ಬೆರಗಿನಿಂದ ನೋಡುವಂತೆ ಮಾಡಿತ್ತು. ಹಾಗೆಯೇ 'ಕೆಜಿಎಫ್ ಚಾಪ್ಟರ್ 2' ಬಗ್ಗೆ ವಿಪರೀತ ಕಾತರ ಮೂಡಿದೆ. ಅಕ್ಟೋಬರ್ 23ರಂದು ಸಿನಿಮಾ ಬಿಡುಗಡೆ ಮಾಡುವುದಾಗಿ ಕೆಜಿಎಫ್ ಚಿತ್ರತಂಡ ಈ ಹಿಂದೆ ಹೇಳಿತ್ತು. ಹೀಗಾಗಿ ಈಗಾಗಲೇ ಸಿನಿಮಾ ಕುರಿತಾದ ಕುತೂಹಲ, ನಿರೀಕ್ಷೆಗಳು ಬೆಟ್ಟದಷ್ಟಾಗುತ್ತಿವೆ.

  ಸಿನಿಮಾ ಬಿಡುಗಡೆಯಾದ ಬಳಿಕ ಚಿತ್ರರಂಗದಲ್ಲಿ ಮತ್ತೊಂದು ಇತಿಹಾಸ ಸೃಷ್ಟಿಸುವ ನಿರೀಕ್ಷೆ ಮೂಡಿಸಿದೆ. ಹೀಗಾಗಿ ಚಿತ್ರಕ್ಕೆ ಬೇಡಿಕೆಯೂ ಹೆಚ್ಚಿದೆ. ಬೇಗ ಸಿನಿಮಾ ಬಿಡುಗಡೆ ಮಾಡಿ, ಕುತೂಹಲ ತಡೆಯಲು ಆಗುತ್ತಿಲ್ಲ ಎಂದು ಮೊದಲ ಭಾಗ ಬಿಡುಗಡೆಯಾದ ಸಮಯದಿಂದಲೇ ಅಭಿಮಾನಿಗಳಿಂದ ಬೇಡಿಕೆ ಇತ್ತು. ಆ ಬೇಡಿಕೆ ಪ್ರಸಾರದ ಹಕ್ಕಿನಲ್ಲಿಯೂ ಇದೆ. ಮುಂದೆ ಓದಿ...

  'KGF-2' ಟೀಸರ್ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ನಿರಾಸೆ: ಚಿತ್ರತಂಡ ಹೇಳಿದ್ದೇನು?'KGF-2' ಟೀಸರ್ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ನಿರಾಸೆ: ಚಿತ್ರತಂಡ ಹೇಳಿದ್ದೇನು?

  ಕೆಜಿಎಫ್ ಮೇಲೆ ಅಮೆಜಾನ್ ಕಣ್ಣು

  ಕೆಜಿಎಫ್ ಮೇಲೆ ಅಮೆಜಾನ್ ಕಣ್ಣು

  ಜಗತ್ತಿನ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಮೊದಲ ಸ್ಥಾನದಲ್ಲಿರುವುದು ನೆಟ್‌ಫ್ಲಿಕ್ಸ್. ಆದರೆ ಭಾರತದಲ್ಲಿ ಮೊದಲ ಸ್ಥಾನದಲ್ಲಿ ತನ್ನ ಸ್ವಾಮ್ಯತೆ ಉಳಿಸಿಕೊಂಡಿರುವುದು ಅಮೆಜಾನ್ ಪ್ರೈಮ್. ಹಿಂದಿ ಮಾತ್ರವಲ್ಲದೆ ಎಲ್ಲ ಭಾಷೆಗಳ ಸಿನಿಮಾಗಳ ಡಿಜಿಟಲ್ ಹಕ್ಕನ್ನು ಪಡೆದುಕೊಳ್ಳುವ ಮೂಲಕ ಅತಿ ಹೆಚ್ಚಿನ ವೀಕ್ಷಕರನ್ನು ಅದು ಪಡೆದುಕೊಂಡಿದೆ. ಈಗ ಅದು ಕೆಜಿಎಫ್ 2 ಮೇಲೆಯೂ ಕಣ್ಣಿಟ್ಟಿದೆ ಎನ್ನಲಾಗಿದೆ.

  55 ಕೋಟಿ ರೂ. ಆಫರ್

  55 ಕೋಟಿ ರೂ. ಆಫರ್

  ಮೂಲಗಳ ಪ್ರಕಾರ ಅಮೆಜಾನ್ ಪ್ರೈಮ್, 'ಕೆಜಿಎಫ್ 2' ಚಿತ್ರದ ಎಲ್ಲಾ ಭಾಷೆಗಳ ಪ್ರಸಾರದ ಹಕ್ಕು ಪಡೆದುಕೊಳ್ಳಲು ಮುಂದಾಗಿದೆ. ಅದಕ್ಕಾಗಿ ಭಾರಿ ಮೊತ್ತದ ಆಫರ್ ಅನ್ನೂ ನಿರ್ಮಾಪಕರ ಮುಂದೆ ಇರಿಸಿದೆಯಂತೆ. ಡಿಜಿಟಲ್ ರೈಟ್ಸ್‌ಗಾಗಿ ಅಮೆಜಾನ್ 55 ಕೋಟಿ ರೂ. ನೀಡಲು ಮುಂದಾಗಿದೆ ಎನ್ನಲಾಗಿದೆ.

  ಯಶ್ ಮುಂದಿನ ಸಿನಿಮಾ ನಿರ್ದೇಶಕರು ಯಾರು? ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರದಲ್ಲಿ ರಾಕಿಂಗ್ ಸ್ಟಾರ್?ಯಶ್ ಮುಂದಿನ ಸಿನಿಮಾ ನಿರ್ದೇಶಕರು ಯಾರು? ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರದಲ್ಲಿ ರಾಕಿಂಗ್ ಸ್ಟಾರ್?

  ಬಾಲಿವುಡ್ ಸ್ಟಾರ್‌ಗಳು

  ಬಾಲಿವುಡ್ ಸ್ಟಾರ್‌ಗಳು

  ಕೆಜಿಎಫ್‌ನ ಮೊದಲ ಭಾಗ ಭಾರಿ ಯಶಸ್ಸು ಕಂಡಿತ್ತು. ಎರಡನೆಯ ಭಾಗಕ್ಕೆ ಬೇಡಿಕೆ ಮತ್ತಷ್ಟು ಹೆಚ್ಚಲು ಚಿತ್ರ ಮೂಡಿಸುವ ಕುತೂಹಲದ ಜತೆಗೆ ಅದರಲ್ಲಿ ಬಾಲಿವುಡ್‌ನ ಸ್ಟಾರ್‌ಗಳಾದ ಸಂಜಯ್ ದತ್ ಮತ್ತು ರವೀನಾ ಟಂಡನ್ ಕೂಡ ನಟಿಸಿರುವುದು ಕಾರಣ.

  ಮತ್ತಷ್ಟು ಅದ್ಧೂರಿ ಚಿತ್ರ

  ಮತ್ತಷ್ಟು ಅದ್ಧೂರಿ ಚಿತ್ರ

  'ಕೆಜಿಎಫ್'ನಲ್ಲಿ ಮೈನವಿರೇಳಿಸುವ ಆಕ್ಷನ್, ಸ್ಕ್ರೀನ್‌ ಪ್ಲೇ ಹಾಗೂ ಅದ್ಧೂರಿತನವಿತ್ತು. ಎರಡನೆಯ ಭಾಗ ಅದಕ್ಕಿಂತಲೂ ಹೆಚ್ಚು ಅದ್ಧೂರಿಯಾಗಿರಲಿದೆ ಎಂದು ಚಿತ್ರತಂಡ ತಿಳಿಸಿದೆ. ಡಿಜಿಟಲ್ ಹಕ್ಕು ಮಾರಾಟದ ಕುರಿತು ಇನ್ನೂ ಚಿತ್ರತಂಡ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಸ್ಯಾಟಲೈಟ್ ರೈಟ್ಸ್ ಮತ್ತು ವಿತರಣೆಯ ಹಕ್ಕುಗಳಿಗೂ ಭಾರಿ ಬೇಡಿಕೆ ಇದೆ.

  English summary
  Reports says Amazon Prime has offers huge amount to the producers of KGF Chapter 2 for its digital rights.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X