twitter
    For Quick Alerts
    ALLOW NOTIFICATIONS  
    For Daily Alerts

    ಹಾದಿ ಬದಲಿಸಿದ ಅಮೆಜಾನ್! ಸಿನಿಮಾಗಳ ಮೇಲೆ 8000 ಕೋಟಿ ಹಣ ಹೂಡಿಕೆ

    |

    ಕೋವಿಡ್ ಕಾಲದಲ್ಲಿ ಭಾರತದಲ್ಲಿ ಒಟಿಟಿ ಬೂಮ್‌ಗೆ ಕಾರಣವಾಗಿದ್ದು ಅಮೆಜಾನ್ ಪ್ರೈಂ. ನೆಟ್‌ಫ್ಲಿಕ್ಸ್‌ ಒಟಿಟಿಯು ವಿದೇಶಿ ಕಂಟೆಂಟ್‌ ಮೇಲೆ ಗಮನ ಕೇಂದ್ರೀಕರಿಸಿದ್ದ ಹೊತ್ತಿನಲ್ಲಿ, ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳ ಸಿನಿಮಾಗಳನ್ನು ಖರೀದಿಸಿ ದೊಡ್ಡ ಮಟ್ಟದಲ್ಲಿ ಜನರಿಗೆ ತಲುಪಿಸಿದ್ದು ಅಮೆಜಾನ್ ಪ್ರೈಂ.

    ಭಾರತ ಮಾತ್ರವೇ ಅಲ್ಲದೆ ಸುಮಾರು 240 ದೇಶಗಳಲ್ಲಿ ಅಮೆಜಾನ್ ತನ್ನ ವಿಡಿಯೋ ಸೇವೆಯನ್ನು ನೀಡುತ್ತಿದೆ. ಅನೇಕ ಭಾಷೆಗಳಲ್ಲಿ ಅನೇಕ ವಿಧವಾದ ಕಂಟೆಂಟ್‌ಗಳನ್ನು ಅಮೆಜಾನ್ ಪ್ರೈಂ ನೀಡುತ್ತಾ ಬಂದಿದ್ದು, ವಿಶೇಷವಾಗಿ ಸ್ಥಳೀಯ ಭಾಷೆಗಳ ಮೇಲೆ ಅಮೆಜಾನ್ ಹೆಚ್ಚು ಗಮನವಹಿಸಿದೆ.

    ಇದೀಗ ಅಮೆಜಾನ್ ಹೊಸ ಸಾಹಸಕ್ಕೆ ಕೈ ಹಾಕಿದ್ದು ಡಿಸ್ನಿ, ಮಾರ್ವೆಲ್ ಮಾದರಿಯಲ್ಲಿಯೇ ಭಾರಿ ದೊಡ್ಡ ಬಂಡವಾಳವನ್ನು ಸಿನಿಮಾ ನಿರ್ಮಾಣದ ಮೇಲೆ ತೊಡಗಲಿಸಲು ಹೊರಟಿದೆ. ಈವರೆಗೆ ಅಮೆಜಾನ್ ಸ್ವಂತವಾಗಿ ನಿರ್ಮಿಸಿದ ಎಲ್ಲ ವೆಬ್ ಸರಣಿ, ಸಿನಿಮಾಗಳು ಕೇವಲ ಅಮೆಜಾನ್‌ನಲ್ಲಿ ಮಾತ್ರವೇ ಬಿಡುಗಡೆ ಆಗುತ್ತಿದ್ದವು. ಆದರೆ ಈಗ ಚಿತ್ರಮಂದಿರಗಳಲ್ಲಿಯೂ ಬಿಡುಗಡೆ ಮಾಡಲು ಮುಂದಾಗಿದೆ ಅಮೆಜಾನ್.

    ವರ್ಷಕ್ಕೆ 12-15 ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆ

    ವರ್ಷಕ್ಕೆ 12-15 ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆ

    ಪ್ರತಿ ವರ್ಷ ಸುಮಾರು 12 ರಿಂದ 15 ಸಿನಿಮಾಗಳನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಅಮೆಜಾನ್ ಚಿಂತನೆ ನಡೆಸಿದೆ. ಮುಂದಿನ ವರ್ಷವೇ ಕೆಲವು ಸಿನಿಮಾಗಳನ್ನು ನಿರ್ಮಿಸಿ ಅವನ್ನು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲಿರುವ ಅಮೆಜಾನ್ ಆ ನಂತರದ ವರ್ಷಗಳಲ್ಲಿ ಸಿನಿಮಾಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲಿದೆ.

    ನಿರ್ಮಾಣ ಸಂಸ್ಥೆಯಾಗಿ ನೆಲೆಗೊಳ್ಳುವ ಯೋಜನೆ

    ನಿರ್ಮಾಣ ಸಂಸ್ಥೆಯಾಗಿ ನೆಲೆಗೊಳ್ಳುವ ಯೋಜನೆ

    ಅಮೆಜಾನ್‌ನ ಪ್ರಮುಖ ಪ್ರತಿಸ್ಪರ್ಧಿಗಳಾಗಿರುವ ನೆಟ್‌ಫ್ಲಿಕ್ಸ್‌, ಎಚ್‌ಬಿಓ, ಆಪಲ್‌ಗಳು ಸಹ ಸಿನಿಮಾ ಹಾಗೂ ವೆಬ್ ಸರಣಿಗಳ ಮೇಲೆ ಬಂಡವಾಳ ಹೂಡುತ್ತಿವೆಯಾದರೂ ಅವುಗಳನ್ನು ತಮ್ಮ ಒಟಿಟಿಯಲ್ಲಿ ಬಿಡುಗಡೆ ಮಾಡಿ, ವೀಕ್ಷಕರು ಮನೆಯಲ್ಲೇ ಕುಳಿತು ಸಿನಿಮಾ ನೋಡುವಂತೆ ಮಾಡುತ್ತಿವೆ. ಆದರೆ ಅಮೆಜಾನ್ ಪ್ರೈಂ ಈ ಸಂಪ್ರದಾಯದಿಂದ ಹೊರಗೆ ಬಂದು ಚಿತ್ರಮಂದಿರಗಳಲ್ಲಿ ಸಿನಿಮಾವನ್ನು ಬಿಡುಗಡೆಗೊಳಿಸುವ ಮೂಲಕ ನಿರ್ಮಾಣ ಸಂಸ್ಥೆಯಾಗಿಯೂ ನೆಲೆಗೊಳ್ಳುವ ಯೋಜನೆಯನ್ನು ಮುಂದಿರಿಸಿಕೊಂಡಿದೆ.

    ಇಂಗ್ಲೀಷ್ ಸಿನಿಮಾ ಹೆಚ್ಚು ನಿರ್ಮಾಣ ಮಾಡಲಿದೆ

    ಇಂಗ್ಲೀಷ್ ಸಿನಿಮಾ ಹೆಚ್ಚು ನಿರ್ಮಾಣ ಮಾಡಲಿದೆ

    ಅಮೆಜಾನ್‌ನ ಸಮೀಪ ಪ್ರತಿಸ್ಪರ್ಧಿ ನೆಟ್‌ಫ್ಲಿಕ್ಸ್‌ ವರ್ಷವೊಂದಕ್ಕೆ 100 ಸಿನಿಮಾಗಳನ್ನು ಹಾಗೂ ವೆಬ್‌ ಸರಣಿಗಳನ್ನು ಒಟಿಟಿಯಲ್ಲಿ ಬಿಡುಗಡೆ ಮಾಡುತ್ತಿದೆ. ಆದರೆ ಅಮೆಜಾನ್ ಇಷ್ಟೋಂದು ಒರಿಜಿನಲ್‌ಗಳನ್ನು ಬಿಡುಗಡೆ ಮಾಡುತ್ತಿಲ್ಲ. ಬದಲಿಗೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆದ ಸಿನಿಮಾಗಳನ್ನು ಬಿಡುಗಡೆಗೊಳಿಸುತ್ತಿದೆ. ಅದರಲ್ಲಿಯೂ ಇಂಗ್ಲೀಷ್ ಕಂಟೆಂಟ್ ಮೇಲೆ ಬಹಳ ಕಡಿಮೆ ಗಮನ ಕೇಂದ್ರೀಕರಿಸಿದೆ. ಆದರೆ ಇನ್ನು ಮುಂದೆ ಸಿನಿಮಾ ನಿರ್ಮಾಣಕ್ಕಿಳಿದಾಗ ಇಂಗ್ಲೀಷ್ ಸಿನಿಮಾಗಳನ್ನಷ್ಟೆ ನಿರ್ಮಾಣ ಮಾಡಲಿದೆ ಎನ್ನಲಾಗಿದೆ.

    69 ಸಾವಿರ ಕೋಟಿ ಕೊಟ್ಟು ಎಂಜಿಎಂ ಖರೀದಿ

    69 ಸಾವಿರ ಕೋಟಿ ಕೊಟ್ಟು ಎಂಜಿಎಂ ಖರೀದಿ

    98 ವರ್ಷ ಹಳೆಯ ಹಾಲಿವುಡ್‌ನ ಜನಪ್ರಿಯ ನಿರ್ಮಾಣ ಸಂಸ್ಥೆ ಎಂಜಿಎಂ ಅನ್ನು ಅಮೆಜಾನ್ ಸಂಸ್ಥೆಯು 69 ಸಾವಿರ ಕೋಟಿ ಹಣ ನೀಡಿ ಖರೀದಿ ಮಾಡಿದೆ. ಎಂಜಿಎಂ ಈವರೆಗೆ ನಿರ್ಮಾಣ ಮಾಡಿದ್ದ ಎಲ್ಲ ಆಲ್‌ಟೈಮ್ ಸೂಪರ್ ಹಿಟ್ ಸಿನಿಮಾಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ ಜೊತೆಗೆ ಅವರ ಸ್ಟುಡಿಯೋಗಳು ಸಹ ಅಮೆಜಾನ್ ಕೈ ಸೇರಿದ್ದು ಸಿನಿಮಾ ನಿರ್ಮಾಣಕ್ಕೆ ಹೆಚ್ಚು ಅನುಕೂಲವಾಗಲಿದೆ. ಸ್ವಂತದ ಒಟಿಟಿ ಇರುವ ಕಾರಣ ಇತರೆ ನಿರ್ಮಾಣ ಸಂಸ್ಥೆಗಳಿಗಿಂತಲೂ ಹೆಚ್ಚು ಲಾಭವನ್ನು ಅಮೆಜಾನ್ ಗಳಿಸಲಿದೆ ಎಂದು ವಾಣಿಜ್ಯ ಮಂಡಿತರು ಲೆಕ್ಕ ಹಾಕಿದ್ದಾರೆ.

    English summary
    Amazon planing to produce movies for theaters. Amazon planing to invest 8100 core rs on movie production.
    Thursday, November 24, 2022, 18:51
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X