For Quick Alerts
  ALLOW NOTIFICATIONS  
  For Daily Alerts

  'ಸಲಾರ್' ಮೇಲೆ ಕಣ್ಣು ಹಾಕಿದ ಅಮೆಜಾನ್ ಪ್ರೈಂ: ಭಾರಿ ಮೊತ್ತದ ಆಫರ್

  |

  ಪ್ರಶಾಂತ್ ನೀಲ್ ನಿರ್ದೇಶಿಸಿ ಪ್ರಭಾಸ್ ನಟಿಸುತ್ತಿರುವ 'ಸಲಾರ್' ಸಿನಿಮಾದ ಚಿತ್ರೀಕರಣ ಪೂರ್ಣವಾಗುವ ಮುನ್ನವೇ 'ವ್ಯವಹಾರ' ಆರಂಭವಾಗಿದೆ.

  Salaar ಗೆ ಬಿಗ್ ಆಫರ್ ಕೊಟ್ಟ Amazon Prime | Prabhas | Filmibeat Kannada

  'ಸಲಾರ್' ಸಿನಿಮಾದ ಮೇಲೆ ಒಟಿಟಿ ದೈತ್ಯ ಅಮೆಜಾನ್ ಪ್ರೈಂ ಕಣ್ಣು ಹಾಕಿದ್ದು, ಭಾರಿ ದೊಡ್ಡ ಮೊತ್ತವನ್ನು ಸಿನಿಮಾಕ್ಕೆ ಆಫರ್ ನೀಡಿದೆ. ಆದರೆ ಚಿತ್ರತಂಡ ಈ ಬಗ್ಗೆ ಇನ್ನೂ ಖಚಿತ ನಿರ್ಣಯ ಕೈಗೊಂಡಿಲ್ಲ.

  ಹಾಗೆಂದು 'ಸಲಾರ್' ಸಿನಿಮಾವನ್ನು ನೇರವಾಗಿ ಒಟಿಟಿಗೆ ಬಿಡುಗಡೆ ಮಾಡುವಂತೆ ಅಮೆಜಾನ್ ಪ್ರೈಂ ಕೇಳಿಲ್ಲ ಬದಲಿಗೆ ಸಿನಿಮಾದ ಡಿಜಿಟಲ್ ಹಕ್ಕನ್ನು ತಮಗೆ ನೀಡಿರೆಂದು ಮನವಿ ಮಾಡಿದೆ. ಈ ಹಿಂದೆ 'ಕೆಜಿಎಫ್' ಸಿನಿಮಾದ ಡಿಜಿಟಲ್ ಹಕ್ಕನ್ನು ಅಮೆಜಾನ್ ಪ್ರೈಂ ಕೊಂಡುಕೊಂಡು ಒಳ್ಳೆಯ ಲಾಭವನ್ನು ಪಡೆದುಕೊಂಡಿತ್ತು.

  'ಸಲಾರ್' ಸಿನಿಮಾದ ಡಿಜಿಟಲ್ ಹಕ್ಕಿಗೆ ಸರಿ ಸುಮಾರು 50 ಕೋಟಿ ಆಫರ್ ಅನ್ನು ಅಮೆಜಾನ್ ಪ್ರೈಂ ನೀಡುತ್ತಿದೆ ಎನ್ನಲಾಗುತ್ತಿದೆ. ಇನ್ನೊಂದು ಕಡೆ ಜೀ ಸಹ 'ಸಲಾರ್‌'ನ ಡಿಜಿಟಲ್ ಹಕ್ಕು ಖರೀದಿಸಲು ಆಸಕ್ತಿ ತೋರಿದೆ. ಹಾಗಾಗಿ ಚಿತ್ರತಂಡವು ಗೊಂದಲಕ್ಕೆ ಬಿದ್ದಿದೆ.

  'ಸಲಾರ್' ಸಿನಿಮಾವನ್ನು ಕನ್ನಡಿಗ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದು, ಶ್ರುತಿ ಹಾಸನ್ ನಾಯಕಿಯಾಗಿ ನಟಿಸುತ್ತಿದ್ದಾರೆ. 'ಸಲಾರ್' ಸಿನಿಮಾದಲ್ಲಿ ವಿಲನ್ ಆಗಿ ಕನ್ನಡದ ಮಧು ಗುರುಸ್ವಾಮಿ ನಟಿಸುತ್ತಿರುವುದು ವಿಶೇಷ. ಸಿನಿಮಾದ ಚಿತ್ರೀಕರಣ ಮುಗಿಯುವ ಹಂತದಲ್ಲಿದ್ದು ಲಾಕ್‌ಡೌನ್ ಕಾರಣದಿಂದ ಚಿತ್ರೀಕರಣ ಸ್ಥಗಿತಗೊಂಡಿದೆ.

  ಪ್ರಭಾಸ್ ನಟನೆಯ 'ರಾಧೆ-ಶ್ಯಾಮ್' ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಅದರ ಬಳಿಕ 'ಸಲಾರ್' ಸಿನಿಮಾ ಬಿಡುಗಡೆ ಆಗಲಿದೆ. ಈ ನಡುವೆ ಭಾರಿ ಬಜೆಟ್ ಸಿನಿಮಾ 'ಆದಿಪುರುಷ್‌'ನಲ್ಲಿ ಪ್ರಭಾಸ್ ನಟಿಸುತ್ತಿದ್ದು, ಆ ಸಿನಿಮಾದ ಬಳಿಕ ನಾಗ್ ಅಶ್ವಿನ್ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ. ಆ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಹಾಗೂ ಅಮಿತಾಬ್ ಬಚ್ಚನ್ ಸಹ ನಟಿಸಲಿದ್ದಾರೆ.

  English summary
  OTT Amazon Prime trying to buy Prabhas starer Salaar movie digital rights. Prime offered big amount of money.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X