For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್ ಓಟಿಟಿ: ಅಂತಿಮ ಹಂತದಲ್ಲಿ ಸೋನು ಔಟ್, ನಾಲ್ವರು ಟಿವಿ ಬಿಗ್ ಬಾಸ್ ಗೆ; ನಂಬರ್ 1 ಯಾರು?

  |

  42 ದಿನಗಳ ಕಾಲ ನಡೆದ ಬಿಗ್ ಬಾಸ್ ಓಟಿಟಿ ಕಾರ್ಯಕ್ರಮಕ್ಕೆ ನಿನ್ನೆ ( ಸೆಪ್ಟೆಂಬರ್ 16 ) ಅಧಿಕೃತವಾಗಿ ತೆರೆಬಿದ್ದಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 16 ಸ್ಪರ್ಧಿಗಳ ಪೈಕಿ ಫಿನಾಲೆ ವಾರಕ್ಕೆ 8 ಸ್ಪರ್ಧಿಗಳು ಕಾಲಿಟ್ಟಿದ್ದರು.

  ಜಸ್ವಂತ್, ಸೋನು ಶ್ರೀನಿವಾಸ್ ಗೌಡ, ಜಯಶ್ರೀ, ಸೋಮಣ್ಣ ಮಾಚಿಮಾಡ, ರೂಪೇಶ್ ಶೆಟ್ಟಿ, ಸಾನ್ಯಾ ಅಯ್ಯರ್, ಆರ್ಯವರ್ಧನ್ ಹಾಗೂ ರಾಕೇಶ್ ಅಡಿಗ ಈ 8 ಸ್ಪರ್ಧಿಗಳು ಫಿನಾಲೆ ವಾರದಲ್ಲಿ ಮನೆಯಲ್ಲಿದ್ದುಕೊಂಡು ಟಿವಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಆಯ್ಕೆಯಾಗಲು ಯತ್ನಿಸಿದರು.

  ಶ್ರೀಲೀಲಾ ಉಳಿದುಕೊಂಡಿರೋ ಹೋಟೆಲ್ ರೂಮಿನ ಬೆಲೆ ಕೇಳಿ ಟಾಲಿವುಡ್ ಮಂದಿ ಸುಸ್ತೋ ಸುಸ್ತು!ಶ್ರೀಲೀಲಾ ಉಳಿದುಕೊಂಡಿರೋ ಹೋಟೆಲ್ ರೂಮಿನ ಬೆಲೆ ಕೇಳಿ ಟಾಲಿವುಡ್ ಮಂದಿ ಸುಸ್ತೋ ಸುಸ್ತು!

  ಈ 8 ಸ್ಪರ್ಧಿಗಳ ಪೈಕಿ ನಾಲ್ವರು ಸ್ಪರ್ಧಿಗಳು ಟಿವಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಆಯ್ಕೆಯಾದರೆ, ಇನ್ನುಳಿದ ನಾಲ್ವರು ಸ್ಪರ್ಧಿಗಳು ನಿರಾಸೆಯಿಂದ ಹೊರಬಿದ್ದರು.

  ನಾಲ್ವರು ಕಾರ್ಯಕ್ರಮದಿಂದ ಔಟ್

  ನಾಲ್ವರು ಕಾರ್ಯಕ್ರಮದಿಂದ ಔಟ್

  ನಿನ್ನೆ ನಡೆದ ಬಿಗ್ ಬಾಸ್ ಓಟಿಟಿ ಸೀಸನ್‌ನ ಕಾರ್ಯಕ್ರಮದಿಂದ ಮೊದಲಿಗೆ ಜಯಶ್ರೀ ಹೊರಬಿದ್ದರು, ನಂತರ ಜಸ್ವಂತ್ ಕೂಡ ಜನರ ಒಲವನ್ನು ದೊಡ್ಡ ಮಟ್ಟದಲ್ಲಿ ಗಳಿಸದ ಕಾರಣ ಔಟ್ ಆದರು, ಸೋಮಣ್ಣ ಮಾಚಿಮಾಡ ಕೂಡ ಹೊರಬಿದ್ದರು ಹಾಗೂ ಅಂತಿಮ ಹಂತದಲ್ಲಿ ಸೋನು ಶ್ರೀನಿವಾಸ್ ಗೌಡ ಕೂಡ ಔಟ್ ಆದರು.

  ಸೋನು ಮತ್ತು ಸಾನ್ಯಾ ನಡುವೆ ಅಂತಿಮ ಹಂತದ ಪೈಪೋಟಿ

  ಸೋನು ಮತ್ತು ಸಾನ್ಯಾ ನಡುವೆ ಅಂತಿಮ ಹಂತದ ಪೈಪೋಟಿ

  ಇನ್ನು ಬಿಗ್ ಬಾಸ್ ಸೀಸನ್ 9ಕ್ಕೆ ಆಯ್ಕೆಯಾಗಲು ಉಳಿದಿದ್ದ ಅಂತಿಮ ಸ್ಥಾನಕ್ಕಾಗಿ ಸೋನು ಶ್ರೀನಿವಾಸ್ ಗೌಡ ಹಾಗೂ ಸಾನಿಯಾ ಅಯ್ಯರ್ ನಡುವೆ ಪೈಪೋಟಿ ಏರ್ಪಟ್ಟಿತ್ತು. ಈ ಪೈಕಿ ಇಬ್ಬರು ಸಹ ಬಿಗ್ ಬಾಸ್ ಮನೆಗೆ ತೆರಳುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು. ಆದರೆ ವೀಕ್ಷಕರ ಒಲವು ಸೋನು ಶ್ರೀನಿವಾಸ್ ಗೌಡಗಿಂತ ಹೆಚ್ಚು ಸಾನ್ಯಾ ಅಯ್ಯರ್ ಮೇಲಿದ್ದ ಕಾರಣ ಸೋನು ಅಂತಿಮ ಹಂತದಲ್ಲಿ ಹಿನ್ನಡೆ ಅನುಭವಿಸಿ ಕಾರ್ಯಕ್ರಮದಿಂದ ಹೊರಬಿದ್ದಳು ಹಾಗೂ ಸಾನಿಯಾ ಅಯ್ಯರ್ ಸೀಸನ್ 9ಕ್ಕೆ ಲಗ್ಗೆ ಇಟ್ಟಿದ್ದಾರೆ.

  ನಾಲ್ವರು ಸೀಸನ್ 9ಕ್ಕೆ, ಟಾಪರ್ ಆಗಿದ್ಯಾರು?

  ನಾಲ್ವರು ಸೀಸನ್ 9ಕ್ಕೆ, ಟಾಪರ್ ಆಗಿದ್ಯಾರು?

  ಹೀಗೆ ಎಲಿಮಿನೇಷನ್ ಪ್ರಕ್ರಿಯೆ ಮುಕ್ತಾಯಗೊಂಡ ನಂತರ ಆರ್ಯವರ್ಧನ್, ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ ಹಾಗೂ ಸಾನ್ಯಾ ಅಯ್ಯರ್ ಟಿವಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಆಯ್ಕೆಗೊಂಡರು. ಈ ಪೈಕಿ ಎಲ್ಲರಿಗಿಂತ ಅತಿ ಹೆಚ್ಚು ಮತ ಪಡೆದ ರೂಪೇಶ್ ಶೆಟ್ಟಿ ಕಾರ್ಯಕ್ರಮದಲ್ಲಿ ಟಾಪರ್ ಆಗಿ ಹೊರ ಹೊಮ್ಮಿದರು.

  English summary
  BBK OTT: Complete details of contestants who entered Bigg Boss Season 9, who got eliminated and winner

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X