For Quick Alerts
  ALLOW NOTIFICATIONS  
  For Daily Alerts

  BBK OTT Finale: ಯಾರು ಗೆಲ್ಲಬಹುದು ಎಂದು ಊಹಿಸಿದ ಮಾಜಿ ಸ್ಪರ್ಧಿಗಳು

  |

  ಬಿಗ್ ಬಾಸ್ ಕನ್ನಡದ ಮೊದಲ ಓಟಿಟಿ ಸೀಸನ್ ತನ್ನ ಮಹತ್ವದ ಪ್ರಯಾಣದ ಅಂತಿಮ ಹಂತದಲ್ಲಿದೆ. ರೋಮಾಂಚನಕಾರಿ ಫೈನಲ್‌ ವೀಕ್ಷಿಸಲು ಪ್ರೇಕ್ಷಕರು ಸಜ್ಜಾಗುತ್ತಿದ್ದಂತೆ, ಬಿಗ್‌ಬಾಸ್‌ನ ಈ ಮೊದಲಿನ ಕೆಲವು ಸ್ಪರ್ಧಿಗಳು ಈ ಕಾರ್ಯಕ್ರಮದ ಸಿಂಹಾವಲೋಕನ ಮಾಡಿದ್ದಾರೆ ಮತ್ತು ಒಟ್ಟಾರೆ ಪಯಣದ ಕುರಿತು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದಾರೆ ಹಾಗೂ ಯಾರು ಈ ಶೋ ಗೆದ್ದು ಟ್ರೋಫಿಯನ್ನು ಮನೆಗೊಯ್ಯುತ್ತಾರೆಂದೂ ಊಹಿಸಿದ್ದಾರೆ.

  ಸೋಮಣ್ಣ ಅವರು ಸ್ವತಂತ್ರವಾಗಿ ಆಡುತ್ತಿರುವುದರಿಂದ ಮತ್ತು ಉತ್ತಮ ಕೆಲಸ ಮಾಡುತ್ತಿರುವುದರಿಂದ ಅವರ ಗೆಲುವಿಗೆ ಅಪಾರ ಅವಕಾಶವಿದೆ ಎಂದು ಇತ್ತೀಚೆಗೆ ಎಲಿಮಿನೇಟ್ ಆಗಿರುವ ನಟಿ ಮತ್ತು ನಿರ್ಮಾಪಕಿ ಚಿತ್ರಾ ಹಳ್ಳಿಕೇರಿ ಅಭಿಪ್ರಾಯ ಪಟ್ಟಿದ್ದಾರೆ.

  ಮನೆಯಲ್ಲಿ ಯಾರಿಗೆ ಉತ್ತಮ ತಂತ್ರವಿದೆ ಎಂದು ಕೇಳಿದಾಗ, ಚಿತ್ರಾ ಹೇಳಿದ್ದಿಷ್ಟು: ನಾವು ತಂತ್ರದ ಬಗ್ಗೆ ಮಾತನಾಡುವಾಗ, ರಾಕೇಶ್ ಅವರು ಇಡೀ ಶೋದಲ್ಲಿ ಸ್ಥಿರವಾಗಿ ಉಳಿದಿದ್ದಾರೆ ಮತ್ತು ನನ್ನ ಪ್ರಕಾರ ಅದೇ ಅವರ ದೊಡ್ಡ ಶಕ್ತಿಯಾಗಿದೆ ಎಂದು ಹೇಳಿಕೆ ನೀಡಿದ್ದಾರೆ.

  ತಮ್ಮ ಪ್ರಯಾಣವನ್ನು ನೆನಪಿಸಿಕೊಂಡ ಚೈತ್ರ , "ಬಿಗ್ ಬಾಸ್ OTT ಕನ್ನಡ ಸೀಸನ್ 1 ಜೀವನದ ಪ್ರತಿಯೊಂದು ಹಂತದ ಜನರ ಜೊತೆಗೆ ಬೆರೆಯಲು ಅವಕಾಶ ನೀಡಿದ್ದು, ಅದ್ಭುತ ಅನುಭವವಾಗಿದೆ" ಎಂದರು.

  ಬಿಗ್ ಬಾಸ್ ಮನೆಯಿಂದ ಹೊರಬಿದ್ದವರಲ್ಲಿ ಮೊದಲಿಗರಾದ ರೂಪದರ್ಶಿ ಮತ್ತು ನಟಿ ಕಿರಣ್ ಯೋಗೇಶ್ವರ್ "ರಾಕೇಶ್ ಪ್ರಬಲ ಸ್ಪರ್ಧಿಗಳಲ್ಲಿ ಒಬ್ಬರು. ಏಕೆಂದರೆ, ಅವರು ತುಂಬಾ ಸ್ಮಾರ್ಟ್ ಮತ್ತು ತಮ್ಮ ಆಟದಲ್ಲಿ ಚೆನ್ನಾಗಿದ್ದಾರೆ. ಸ್ಪರ್ಧೆಯ ವಿಷಯದಲ್ಲಿ, ತಂತ್ರ ಮತ್ತು ಪ್ರೇಕ್ಷಕರ ಮೇಲೆ ಸಾನ್ಯಾ ಉತ್ತಮ ನಾಡಿಮಿಡಿತವನ್ನು ಹೊಂದಿದ್ದಾರೆ" ಎಂದು ಅಭಿಪ್ರಾಯಪಟ್ಟರು.

  ಅಕ್ಷತಾ ಕುಕಿ ಪ್ರತಿಕ್ರಿಯಿಸಿದ್ದು ಹೀಗೆ: "ರಾಕೇಶ್ ಅವರು ತುಂಬಾ ಅರ್ಹರು ಮತ್ತು ಆಟಕ್ಕೆ 100% ಕ್ಕಿಂತ ಹೆಚ್ಚು ಶ್ರಮ ನೀಡಿರುವುದರಿಂದ ಅವರು ಗೆಲ್ಲುತ್ತಾರೆ ಎಂದು ನಾನು ಭಾವಿಸುತ್ತೇನೆ. ನನ್ನ ಪ್ರಕಾರ, ಅವರು ಮನೆಯಲ್ಲಿ ಅತ್ಯಂತ ಅರ್ಹ ಅಭ್ಯರ್ಥಿ."

  BBK OTT ಕನ್ನಡ ಮನೆಯ ನಗುಮುಖದ ಹುಡುಗಿ, ಸ್ಪೂರ್ತಿ ಗೌಡ "ರೂಪೇಶ್ ಗೆಲ್ಲಬೇಕೆಂದು ನಾನು ಬಯಸುತ್ತೇನೆ. ಏಕೆಂದರೆ, ಅವರು ಪ್ರಬಲ ಸ್ಪರ್ಧಿಯಾಗಿದ್ದು, ಒಳ್ಳೆಯ ಮನುಷ್ಯನೂ ಆಗಿದ್ದಾರೆ. ರಾಕೇಶ್ ಅವರು ತಂತ್ರದೊಂದಿಗೆ ತಮ್ಮ ಆಟವನ್ನು ಬಹಳ ಚುರುಕಾಗಿ ಆಡುತ್ತಿರುವುದರಿಂದ ವಿಜೇತರಾಗಬೇಕೆಂದು ನಾನು ಹಾರೈಸುತ್ತೇನೆ" ಎಂದು ಹೇಳಿದರು.

  English summary
  Bigg Boss Kannada OTT old contestants predicts the winner of the show. Read on
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X