twitter
    For Quick Alerts
    ALLOW NOTIFICATIONS  
    For Daily Alerts

    ಬೆಂಗಳೂರು ಅಂತರಾಷ್ಟ್ರೀಯ ಕಿರುಚಲನಚಿತ್ರೋತ್ಸವ: ಈ ಬಾರಿ ಒಟಿಟಿಯಲ್ಲೂ ಲಭ್ಯ!

    |

    ಕೊರೊನಾ, ಲಾಕ್‌ ಡೌನ್ ಅಂತ ಚಲನ ಚಿತ್ರೋತ್ಸವಗಳು ಮಂಕಾಗಿದ್ದವು. ಆದರೆ, ಈ ಬಾರಿ ಬೆಂಗಳೂರು ಅಂತರಾಷ್ಟ್ರೀಯ ಕಿರು ಚಲನಚಿತ್ರೋತ್ಸವ ಆ ಎಲ್ಲಾ ತೊಡಕುಗಳನ್ನು ಹೊಡೆದೋಡಿಸಿ ಮತ್ತೆ ಸಿನಿಪ್ರಿಯರ ಮುಂದೆ ಬಂದು ನಿಲ್ಲುತ್ತಿದೆ. ಇದೇ ಆಗಸ್ಟ್ 4 ರಿಂದ 14ರ ವರೆಗೆ ಕಿರು ಚಿತ್ರೋತ್ಸವ ನಡೆಯಲಿದೆ.

    ಈ ಬಾರಿಯ ಕಿರು ಚಲನಚಿತ್ರೋತ್ಸವದ ವಿಶೇಷವೆಂದರೆ, ಇಲ್ಲಿ ಭಾಗವಹಿಸುವ ಎಲ್ಲಾ ಕಿರು ಚಿತ್ರಗಳನ್ನೂ ಕೇವಲ ಥಿಯೇಟರ್‌ನಲ್ಲಿ ಮಾತ್ರವಲ್ಲದೇ ಒಟಿಟಿನಲ್ಲಿಯೂ ಕಣ್ತುಂಬಿಕೊಳ್ಳ ಬಹುದು. ಅಲ್ಲದೆ ಆಗಸ್ಟ್ 11 ರಿಂದ 14 ರವರೆಗೆ ಸುಚಿತ್ರಾ ಮತ್ತು ಗೋಥೆ ಇನ್ಸ್ಟಿಟ್ಯೂಟ್ ಮ್ಯಾಕ್ಸ್ ಮುಲ್ಲರ್ ಭವನದ ಚಿತ್ರಮಂದಿರಗಳಲ್ಲಿ ಕಿರುಚಿತ್ರಗಳು ಪ್ರದರ್ಶನಗೊಳ್ಳಲಿದೆ.

    Bengaluru International Short Film festival Will Start From August 4th

    ಸಿನಿಪ್ರಿಯರು ಕಿರು ಚಿತ್ರವನ್ನು ನೋಡಲು www.bisff.in ಗೆ ಲಾಗಿನ್ ಆಗಬೇಕು. ಈ ಮೂಲಕ ಎಲ್ಲಾ ವರ್ಗಗಳ ಕಿರುಚಿತ್ರಗಳನ್ನು ಇಲ್ಲಿ ವೀಕ್ಷಿಸಬಹುದಾಗಿದೆ. ಈ ವರ್ಷ BISFF ನಲ್ಲಿ ಹಲವು ವೈಶಿಷ್ಟ್ಯಗಳಿವೆ. ಒಮ್ಮೆ ನೋಂದಾಯಿಸಿದ ಚಲನಚಿತ್ರಗಳನ್ನು 10 ದಿನಗಳಲ್ಲಿ ಅವಧಿಯಲ್ಲಿ ಯಾವಾಗ ಬೇಕಾದರೂ ವೀಕ್ಷಿಸಬಹುದು.

    ಅಂದ್ಹಾಗೆ, ಖ್ಯಾತ ನಿರ್ದೇಶಕ ದಿವಂಗತ ಸತ್ಯಜಿತ್‌ ರೇ ಶತಮಾನೋತ್ಸವದ ಪುಣ್ಯತಿಥಿಯ ಅಂಗವಾಗಿ ಈ ಬಾರಿಯ ಬೆಂಗಳೂರು ಅಂತರಾಷ್ಟ್ರೀಯ ಕಿರು ಚಲನಚಿತ್ರೋತ್ಸವವನ್ನು ಅರ್ಪಿಸಲಾಗುತ್ತಿದೆ. 'ಪಥೇರ್ ಪಾಂಚಾಲಿ'ಯ ಚಿತ್ರದ ಸ್ಮರಣೀಯ ಆಯಾಮಗಳನ್ನು ಚಿತ್ರಿಸುವ ಪೋಸ್ಟರ್‌ ಅನ್ನು ಬಿಡುಗಡೆ ಮಾಡಿ, ಗೌರವ ಸೂಚಿಸಲಾಗುತ್ತಿದೆ.

    ಯುವ ಮತ್ತು ಹವ್ಯಾಸಿ ಸಿನಿಮಾ ಆಸಕ್ತಿರಿಗೆ ಬೆಂಗಳೂರು ಅಂತರಾಷ್ಟ್ರೀಯ ಕಿರು ಚಲನಚಿತ್ರೋತ್ಸವ ಉತ್ತಮ ವೇದಿಕೆಯಾಗಿದೆ. 2020 ರಲ್ಲಿ ಕಿರು ಚಲನಚಿತ್ರೋತ್ಸವನ್ನಾಗಿ ಆಚರಿಸಲು ಆಸ್ಕರ್‌ ಅಕಾಡೆಮಿಯಿಂದ ಅರ್ಹತೆ ಪಡೆದುಕೊಂಡಿದೆ. ಈ ಉತ್ಸವದಲ್ಲಿ ಪ್ರದರ್ಶನಗೊಂಡು, ಆಯ್ಕೆಯಾಗುವ ಕಿರುಚಿತ್ರವು ಅಕಾಡೆಮಿ ಪ್ರಶಸ್ತಿಗಳ ಲೈವ್ ಆಕ್ಷನ್ ಕಿರುಚಿತ್ರ ವಿಭಾಗದಲ್ಲಿ ಪರಿಗಣಿಸಲು ಸ್ವತಂತ್ರವಾಗಿ ಅರ್ಹವಾಗಿರುತ್ತವೆ.

    Bengaluru International Short Film festival Will Start From August 4th

    2022ರ BISFFಗೆ 90 ದೇಶಗಳಿಂದ 3000 ಕ್ಕೂ ಹೆಚ್ಚು ಕಿರುಚಿತ್ರಗಳು ಬಂದಿವೆ. ಇವುಗಳಲ್ಲಿ ಶೇ.23ರಷ್ಟು ಮಹಿಳಾ ಸಿನಿಮಾ ಮೇಕರ್ ಸೇರಿದ್ದಾರೆ. ಉತ್ಸವದ ಪ್ರದರ್ಶನಕ್ಕೆ ಸುಮಾರು 250 ಚಲನಚಿತ್ರಗಳನ್ನು ಆಯ್ಕೆ ಮಾಡಲಾಗಿದೆ. ಪ್ರತಿ ವರ್ಷವು ಕಿರುಚಿತ್ರೋತ್ಸವದಲ್ಲಿ ಹೊಸ ವಿಭಾಗವನ್ನು ಸೇರಿಸಲಾಗುತ್ತದೆ.

    ಬೆಂಗಳೂರು ಅಂತರಾಷ್ಟ್ರೀಯ ಕಿರು ಚಲನಚಿತ್ರೋತ್ಸವದ ಮತ್ತೊಂದು ವಿಶೇಷತೆ ಎಂದರೆ, ಇಲ್ಲಿ ಲಾಗಿನ್‌ ಆಗುವ ಸಿನಿಮಾಸಕ್ತರು ಸಿನಿಮಾ ನೋಡುವ ಜೊತೆಗೆ ಬಡ ಮಕ್ಕಳಿಗೆ ದೇಣಿಗೆ ಕೂಡ ನೀಡಬಹುದು. ವೆಬ್‌ಸೈಟ್‌ನಲ್ಲಿ "ಡೊನೇಟ್‌ ನೌವ್‌" ಎನ್ನುವ ಆಪ್ಷನ್‌ ನೀಡಲಾಗಿದ್ದು, ಆಸಕ್ತರು ಡೊನೇಟ್‌ ಮಾಡಬಹುದು. ಈ ಹಣವು ನೇರವಾಗಿ ಬೆಂಗಳೂರಿನಲ್ಲಿರುವ ಎನ್‌ಜಿಒ 'ವಿದ್ಯಾನಿಕೇತನ'ಕ್ಕೆ ತಲುಪಲಿದೆ.

    English summary
    Bengaluru International Short Film festival Will Start From August 4th, Know More.
    Thursday, August 4, 2022, 9:27
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X