For Quick Alerts
  ALLOW NOTIFICATIONS  
  For Daily Alerts

  Bigg Boss Kannada OTT: ಗಾಯಗೊಂಡ ಅರ್ಜುನ್ ರಮೇಶ್ ಬಿಗ್ ಬಾಸ್ ಮನೆಯಿಂದ ಔಟ್!

  |

  ಬಿಗ್ ಬಾಸ್ ಸ್ಪರ್ಧಿಗಳು ಯಾರು ಎನ್ನುವ ಕುತೂಹಲಕ್ಕೆ ತರೆ ಬಿದ್ದಿದೆ. ಆಗಸ್ಟ್ 6ರಂದು ಬಿಗ್ ಬಾಸ್ ಕನ್ನಡ ಓಟಿಟಿ ಲಾಂಚ್ ಆಗಿದೆ. ಭಿನ್ನ ವ್ಯಕ್ತಿತ್ವಯುಳ್ಳ ಹಲವು ಸ್ಪರ್ಧಿಗಳು ಈ ಓಟಿಟಿ ಸೀಸನ್‌ಗಲ್ಲಿ ಭಾಗಿಯಾಗಿದ್ದಾರೆ. ಇನ್ನು ಮೊದಲ ಎಲಿಮಿನೆಷನ್ ಮತ್ತು ಮನೆಯ ಮೊದಲ ಕ್ಯಾಪ್ಟೆನ್ಸಿಯನ್ನು ಸ್ಪರ್ಧಿಗಳು ನೋಡಿದ್ದಾರೆ.

  ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವ ಪ್ರತಿ ಸ್ಪರ್ಧಿಗೂ ಒಮ್ಮೆಯಾದರೂ ಕ್ಯಾಪ್ಟನ್ ಆಗಬೇಕು ಎನ್ನುವ ಆಸೆ ಇರುತ್ತದೆ. ಅದಕ್ಕಾಗಿಯೇ ಹಲವರು ಹಲವರೊಂದಿಗೆ ಮುಖ ಕೆಡಿಸಿಕೊಳ್ಳುವುದು ಕೂಡ ಉಂಟು. ಇನ್ನು ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟೆನ್ಸಿ ಟಾಸ್ಕ್ ನಡೆಯುದೇ ಚೆಂದ. ಇದೇ ಕ್ಯಾಪ್ಟೆನ್ಸಿ ಟಾಸ್ಕ್ ಇಂದ ಅರ್ಜುನ್ ರಮೇಶ್ ಆಟದಿಂದ ಹೊರಬರಬೇಕಾಗಿದೆ.

  ಬಿಗ್ ಬಾಸ್‌ನಲ್ಲಿ ಕಿತ್ತಾಟ ಶುರು ಗುರು: ಮೊಟ್ಟೆಗಾಗಿ ಆರ್ಯವರ್ಧನ್ ಎದುರು ಸೋನು ಕಿತ್ತಾಟ!ಬಿಗ್ ಬಾಸ್‌ನಲ್ಲಿ ಕಿತ್ತಾಟ ಶುರು ಗುರು: ಮೊಟ್ಟೆಗಾಗಿ ಆರ್ಯವರ್ಧನ್ ಎದುರು ಸೋನು ಕಿತ್ತಾಟ!

  ಅರ್ಜುನ್ ರಮೇಶ್ ಮನೆಯ ಮೊದಲ ಕ್ಯಾಪ್ಟನ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಬಿಗ್ ಬಾಸ್ ನೀಡಿದ್ದ ಟಾಸ್ಕ್‌ನಲ್ಲಿ ಗೆದ್ದ ಅರ್ಜುನ್ ರಮೇಶ್ ಮನೆಯ ಕ್ಯಾಪ್ಟನ್ ಆಗಿದ್ದರು. ಆದರೆ ಅದುವೆ ಇವರಿಗೆ ಮುಳುವಾಗಿದೆ. ಹಾಗಾಗಿ ಈಗ ಅರ್ಜುನ್ ರಮೇಶ್ ಮನೆಯಿಂದ ಹೊರಬಂದಿದ್ದಾರೆ.

  ಅರ್ಜುನ್ ರಮೇಶ್ ಔಟ್!

  ಅರ್ಜುನ್ ರಮೇಶ್ ಔಟ್!

  ನಟ ಅರ್ಜುನ್ ರಮೇಶ್ ಬಿಗ್ ಬಾಸ್ ಮನೆಯಲ್ಲಿ ಒಂದು ಮಟ್ಟಿಗೆ ಉತ್ತಮ ಸ್ಪರ್ಧಿ ಎಂದು ಗುರುತಿಸಿಕೊಂಡಿದ್ದರು. ಸ್ಪರ್ಧೆಗಳಲ್ಲೂ ಮುನ್ನುಗಿ ಆಟ ಆಡುತ್ತಿದ್ದರು. ಜೊತೆಗೆ ಮನೆಯಲ್ಲಿ ಇರುವ ಬಹುತೇಕರ ಮನಸನ್ನು ಗೆದ್ದಿದ್ದರು. ಮನೆಯಲ್ಲಿ ಇವ್ರನ್ನ ಬಹುತೇಕರು ಅರ್ಜುನ್ ಅಣ್ಣ ಅಂತಲೇ ಕರೆಯುತ್ತಿದ್ದರು. ಆದರೆ ಅನಿವಾರ್ಯವಾಗಿ ಅರ್ಜುನ್ ರಮೇಶ್ ಬಿಗ್ ಬಾಸ್ ಇಂದ ಹೊರ ಬಂದಿದ್ದಾರೆ.

  Bigg Boss Kannada OTT: 'ಮದುವೆ ಆದ ವ್ಯಕ್ತಿ ಜೊತೆ ಸಂಬಂಧದಲ್ಲಿದ್ದೆ': ಅವರಿಗೆ ಕ್ಯಾನ್ಸರ್ ಬಂದ್ರೂ ಜೊತೆಲಿದ್ದೆ!Bigg Boss Kannada OTT: 'ಮದುವೆ ಆದ ವ್ಯಕ್ತಿ ಜೊತೆ ಸಂಬಂಧದಲ್ಲಿದ್ದೆ': ಅವರಿಗೆ ಕ್ಯಾನ್ಸರ್ ಬಂದ್ರೂ ಜೊತೆಲಿದ್ದೆ!

  ಎಲಿಮಿನೇಷನ್ ಇಲ್ಲದೇ ಅರ್ಜುನ್ ಔಟ್!

  ಎಲಿಮಿನೇಷನ್ ಇಲ್ಲದೇ ಅರ್ಜುನ್ ಔಟ್!

  ಇನ್ನು ನಟ ಅರ್ಜುನ್ ರಮೇಶ್ ಬಿಗ್ ಬಾಸ್ ಮನೆಯಲ್ಲಿ ದಿನಗಳು ಉಳಿಯುವ ಸ್ಪರ್ಧಿ ಎನ್ನುವ ಭರವಸೆ ಮೂಡಿಸಿದ್ದರು. ಆದರೆ ನಾಮಿನೇಷನ್ ಇಲ್ಲದೆ, ಎಲಿಮಿನೇಷನ್ ಇಲ್ಲದೇ ಮನೆಯಿಂದ ಅರ್ಜುನ್ ಹೊರ ಬಂದಿದ್ದಾರೆ. ಇದಕ್ಕೆ ಕಾರಣ ಅವರ ಕೈಗೆ ಪೆಟ್ಟು ಮಾಡಿಕೊಂಡಿರುವುದು. ಆಟದಲ್ಲಿ ಗಾಯಗೊಂಡ ಅರ್ಜುನ್ ರಮೇಶ್ ಒಂದು ವಾರ ಮನೆಯ ಕ್ಯಾಪ್ಟನ್ ಆಗಿ ಇದ್ದರು. ಆದರೆ ವಾರವಾದರು ಅವರ ಕೈ ಸರಿ ಹೋಗದ ಕಾರಣ ಅವರು ಬಿಗ್ ಬಾಸ್ ಬಿಟ್ಟು ಹೋಗಿದ್ದಾರೆ.

  ಕ್ಯಾಪ್ಟೆನ್ಸಿ ಟಾಸ್ಕ್‌ನಲ್ಲಿ ಅರ್ಜುನ್‌ಗೆ ಗಾಯ!

  ಕ್ಯಾಪ್ಟೆನ್ಸಿ ಟಾಸ್ಕ್‌ನಲ್ಲಿ ಅರ್ಜುನ್‌ಗೆ ಗಾಯ!

  ನಾಲ್ಕು ಮಂದಿಗೆ ಕ್ಯಾಪ್ಟೆನ್ಸಿ ಟಾಸ್ಕ್ ನೀಡಲಾಯಿತು. ಈ ಟಾಸ್ಕ್‌ನಲ್ಲಿ ನಂದಿನಿ, ಸೋಮಣ್ಣ, ಚೈತ್ರಾ, ಅರ್ಜುನ್ ಭಾಗಿಯಾಗಿದ್ದಾರೆ. ವೃತ್ತದಲ್ಲಿ ನಂಬರ್‌ಗಳನ್ನು ಇಟ್ಟು. ಆ ನಂಬರ್‌ಗಳಲ್ಲಿ ಹೆಚ್ಚು ನಂಬರ್ ಸಂಗ್ರಹಿಸುವ ಸ್ಪರ್ಧಿ ಮನೆಯ ಕ್ಯಾಪ್ಟನ್ ಆಗುತ್ತಾರೆ ಎನ್ನುವ ಟಾಸ್ಟ್ ಇತ್ತು. ಇದರಲ್ಲಿ ಎಲ್ಲರೂ ಸ್ಪೋರ್ಟಿವ್ ಆಗಿ ಆಟವಾಡಿದ್ದಾರೆ. ಇದೇ ಟಾಸ್ಕ್‌ನಲ್ಲಿ ಅರ್ಜುನ್‌ಗೆ ಪೆಟ್ಟಾಗಿದ್ದು. ಹಾಗಾಗಿ ಈ ಆಟ ಅರ್ಧಕ್ಕೆ ನಿಂತರೂ, ಹೆಚ್ಚು ನಂಬರ್ ಪಡೆದ ಅರ್ಜುನ್‌ ಮನೆಯ ಕ್ಯಾಪ್ಟನ್ ಆಗಿ ಅರ್ಜುನ್ ಆಯ್ಕೆಯಾದರು.

  Recommended Video

  Bigg Boss ಮನೆಯೊಳಗೆ ಎಲ್ಲರು ನಾಟಕವಾಡಿಕೊಂಡೆ ದಿನ ಕಳೆಯುತ್ತಿದ್ದಾರೆ | Kiran Yogeshwar *Interview
  ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಅರ್ಜುನ್!

  ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಅರ್ಜುನ್!

  ಬಿಗ್ ಬಾಸ್ ಮನೆಯ ಮೊದಲ ಕ್ಯಾಪಗ್ಟನ್ ಆಗಿದ್ದ ಅರ್ಜುನ್ ರಮೇಶ್ ಮನೆಯಿಂದ ಹೊರ ನಡೆದಿದ್ದು, ಮನೆಯಲ್ಲಿ ಇರುವ ಸ್ಪರ್ಧಿಗಳಿಗೆ ಶಾಕ್ ಕೊಟ್ಟಿದೆ. ಅರ್ಜುನ್ ಸ್ಪರ್ಧಿಯಾದರು ಕೂಡ, ಅವರು ಮನೆಯಿಮದ ಹೀಗೆ ಹೊರ ಬಂದಿರೋದು ಸ್ಪರ್ಧಗಳಲ್ಲಿ ಬೇಸರ ತಂದಿದೆ. ಹಾಗಾಗಿ ಮನೆಯ ಸ್ಪರ್ಧಿಗಳೆಲ್ಲಾ ಅರ್ಜುನ್‌ಗೆ ಶುಭಕೋರಿದ್ದಾರೆ.

  English summary
  Bigg Boss Kannada OTT: Arjun Ramesh Out From Bigg Boss Because Of Injury, Know More,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X