For Quick Alerts
  ALLOW NOTIFICATIONS  
  For Daily Alerts

  BBK OTT : ಬಿಗ್‌ಬಾಸ್ ಮನೆ ಸ್ಪರ್ಧಿಗಳಿಗೆ ಐದು ಲಕ್ಷ ಬಹುಮಾನದ ಆಫರ್: ಗೆಲ್ಲಲು ಏನು ಮಾಡಬೇಕು?

  |

  ಬಿಗ್‌ಬಾಸ್ ಕನ್ನಡ ಒಟಿಟಿ ಮೊದಲ ಸೀಸನ್‌ ಮುಗಿಯಲು ಎರಡು ವಾರಕ್ಕಿಂತಲೂ ಕಡಿಮೆ ಸಮಯ ಬಾಕಿ ಉಳಿದಿದೆ. ಮನೆಯಲ್ಲಿ ಇನ್ನೂ ಒಂಬತ್ತು ಮಂದಿ ಸ್ಪರ್ಧಿಗಳಿದ್ದಾರೆ.

  ಬಿಗ್‌ಬಾಸ್ ಒಟಿಟಿ ಪ್ರಾರಂಭವಾಗುವ ಮುನ್ನವೇ ಆಯೋಜಕ ಮುಖ್ಯಸ್ಥರಾದ ಪರಮೇಶ್ ಗುಂಡ್ಕಲ್ ಹೇಳಿದ್ದರು ಈ ಬಾರಿ ಒಬ್ಬ ವಿಜೇತ, ಒಂದು ಬಹುಮಾನ ಎಂದಿರುವುದಿಲ್ಲ ಬದಲಿಗೆ ನಾಲ್ವರು ವಿಜೇತರಿರುತ್ತಾರೆ ಅವರು ಟಿವಿ ಬಿಗ್‌ಬಾಸ್‌ಗೆ ಪ್ರೊಮೋಷನ್ ಪಡೆಯುತ್ತಾರೆ ಎಂದು.

  ಅಂತೆಯೇ ಇದೀಗ ಶೋ ಮುಗಿಯುತ್ತಾ ಬಂದಿದೆ. ಆದರೆ ಈಗ ಮನೆಯ ಸ್ಪರ್ಧಿಗಳ ನಡುವೆ ತುರುಸಿನ ಸ್ಪರ್ಧೆ ಏರ್ಪಡಿಸಲೆಂದು ಬಿಗ್‌ಬಾಸ್ ಬಂಪರ್ ಬಹುಮಾನದ ಆಫರ್ ಒಂದನ್ನು ನೀಡಿದ್ದಾರೆ.

  Bigg Boss Kannada OTT : 'ಸಾನ್ಯಾ'ಯಿಂದ 'ನಂದಿನಿ- ಜಸ್ವಂತ್' ನಡುವೆ ಪದೇ, ಪದೇ ಜಗಳ!Bigg Boss Kannada OTT : 'ಸಾನ್ಯಾ'ಯಿಂದ 'ನಂದಿನಿ- ಜಸ್ವಂತ್' ನಡುವೆ ಪದೇ, ಪದೇ ಜಗಳ!

  ಬಿಗ್‌ಬಾಸ್ ಮನೆಯ ಸ್ಪರ್ಧಿಗಳಿಗೆ ಐದು ಲಕ್ಷ ಹಣ ಬಹುಮಾನದ ಆಫರ್ ಅನ್ನು ಬಿಗ್‌ಬಾಸ್ ನೀಡಿದ್ದಾರೆ. ಈ ಬಹುಮಾನದ ಮೊತ್ತ ಒಬ್ಬ ಸ್ಪರ್ಧಿಗೆ ಮಾತ್ರವೇ ಸೇರುತ್ತದೆ. ಆದರೆ ಇದಕ್ಕಾಗಿ ಎಲ್ಲ ಸ್ಪರ್ಧಿಗಳು ತಮ್ಮ ಶ್ರಮವನ್ನೆಲ್ಲ ಹಾಕಿ ಆಟ ಆಡಬೇಕಾಗಿದೆ.

  ಇದೀಗ ಐದನೇ ವಾರ ಚಾಲ್ತಿಯಲ್ಲಿದ್ದು ಆಟದ ಮಜಾ ಹೆಚ್ಚಿಸಲು ಬಿಗ್‌ಬಾಸ್ ಐದು ಲಕ್ಷ ಹಣದ ಆಫರ್ ನೀಡಿದ್ದಾರೆ. ಬಹುಮಾನದ ಘೋಷಣೆ ಆಗುತ್ತಿದ್ದಂತೆ ಸ್ಪರ್ಧಿಗಳಲ್ಲಿ ಸಹ ಜೋಶ್ ಹೆಚ್ಚಾಗಿದೆ.

  Bigg Boss Kannada OTT: ಬಿಗ್ ಬಾಸಸ್ ಮನೆಯ ಕಟ್ಟ ಕಡೆಯ ಕ್ಯಾಪ್ಟನ್ ರೂಪೇಶ್ ಶೆಟ್ಟಿ!Bigg Boss Kannada OTT: ಬಿಗ್ ಬಾಸಸ್ ಮನೆಯ ಕಟ್ಟ ಕಡೆಯ ಕ್ಯಾಪ್ಟನ್ ರೂಪೇಶ್ ಶೆಟ್ಟಿ!

  ಐದು ಲಕ್ಷ ಬಹುಮಾನ ಘೋಷಿಸಿದ ಬಿಗ್‌ಬಾಸ್

  ಐದು ಲಕ್ಷ ಬಹುಮಾನ ಘೋಷಿಸಿದ ಬಿಗ್‌ಬಾಸ್

  ''ಬಿಗ್‌ಬಾಸ್ ಒಟಿಟಿ ಮೊದಲ ಸೀಸನ್ ಮುಗಿಯಲು ಇನ್ನೆರಡು ವಾರವಷ್ಟೆ ಬಾಕಿ ಇದೆ. ಈ ಹಂತ ತಲುಪಲು ನೀವೆಲ್ಲ ಒಟ್ಟಾಗಿ, ಒಬ್ಬೊಬ್ಬರಾಗಿ ವಿವಿಧ ಆಟಗಳನ್ನು ಆಡಿದ್ದೀರಿ. ಕೆಲವು ಟಾಸ್ಕ್‌ಗಳಲ್ಲಿ ಗೆದ್ದಿದ್ದೀರಿ, ಕೆಲವು ಟಾಸ್ಕ್‌ಗಳಲ್ಲಿ ಸೋತಿದ್ದೀರಿ. ಈ ವಾರ ಬಿಗ್‌ಬಾಸ್‌ ಮನೆಯೆ ಸದಸ್ಯರಿಗೆ ಐದು ಲಕ್ಷ ಹಣ ಗೆಲ್ಲುವ ಅವಕಾಶವನ್ನು ನೀಡಲಾಗುತ್ತಿದೆ. ಈ ಹಣವನ್ನು ಮನೆಯ ಸದಸ್ಯರೆಲ್ಲರೂ ಒಟ್ಟಿಗೆ ಆಡಿ ಸಂಗ್ರಹಿಸಬೇಕಾಗುತ್ತದೆ'' ಎಂದು ಬಿಗ್‌ಬಾಸ್ ಘೋಷಣೆ ಮಾಡಿದ್ದಾರೆ.

  ಒಂದೊಂದು ಟಾಸ್ಕ್‌ಗೆ ಒಂದೊಂದು ಮೌಲ್ಯ

  ಒಂದೊಂದು ಟಾಸ್ಕ್‌ಗೆ ಒಂದೊಂದು ಮೌಲ್ಯ

  ಮುಂದುವರೆದು, ''ಐದು ಲಕ್ಷ ರುಪಾಯಿ ಹಣ ಗಳಿಸಲು ವಿವಿಧ ಟಾಸ್ಕ್‌ಗಳು ಇರುತ್ತವೆ. ಪ್ರತಿ ಟಾಸ್ಕ್‌ಗೆ ಒಂದೊಂದು ಮೌಲ್ಯ ಇರುತ್ತದೆ. ಟಾಸ್ಕ್‌ನಲ್ಲಿ ಭಾಗವಹಿಸುವ ಆಟಗಾರರ ಸಂಖ್ಯೆ, ಹೆಸರು ಹೇಳಲಾಗುತ್ತದೆ. ಮನೆಯ ಸದಸ್ಯರು ಆಡಿ ಗೆದ್ದು ಹಣವನ್ನು ಖಾತೆಗೆ ಜಮಾ ಮಾಡಿಕೊಳ್ಳಬೇಕು. ಅಂತಿಮವಾಗಿ ಉಳಿದ ಹಣವನ್ನು ಫಿನಾಲೆಯ ದಿನ ಜನ ಮೆಚ್ಚಿದ ಒಬ್ಬ ಆಟಗಾರನಿಗೆ ನೀಡಲಾಗುವುದು. ಎಲ್ಲರೂ ಮನಸಿಟ್ಟು ಆಡಿ, ಇನ್ನು ಉಳಿದಿರುವುದು 13 ದಿನಗಳು ಮಾತ್ರ'' ಎಂದು ಬಿಗ್‌ಬಾಸ್ ಹೇಳಿದ್ದಾರೆ.

  ಐದು ಲಕ್ಷ ಹಣ ಗೆಲ್ಲುವುದು ಹೇಗೆ?

  ಐದು ಲಕ್ಷ ಹಣ ಗೆಲ್ಲುವುದು ಹೇಗೆ?

  ಪ್ರತಿ ಟಾಸ್ಕ್‌ಗೆ ಇಂತಿಷ್ಟೆಂದು ಮೌಲ್ಯವನ್ನು ಬಿಗ್‌ಬಾಸ್ ನಿಗದಿ ಪಡಿಸುತ್ತಾರೆ ಆ ಟಾಸ್ಕ್‌ ಅನ್ನು ಜಯಿಸಿದರೆ ಆ ಮೌಲ್ಯ ಆಟಗಾರರ ಖಾತೆಗೆ ಜಮಾ ಆಗುತ್ತದೆ. ಸೋತರೆ ಒಟ್ಟು ಮೌಲ್ಯದ ಕೆಲ ಭಾಗವಷ್ಟೆ ಆಟಗಾರರ ಖಾತೆಗೆ ಜಮಾ ಆಗುತ್ತದೆ. ಅಂತಿಮವಾಗಿ ಉಳಿದ ಹಣವನ್ನು ಒಬ್ಬ ಸ್ಪರ್ಧಿಗೆ ಬಿಗ್‌ಬಾಸ್ ವೇದಿಕೆ ಮೇಲೆ ಸುದೀಪ್ ನೀಡುತ್ತಾರೆ. ಆ ಲಕ್ಕಿ ಆಟಗಾರನನ್ನು ಜನರೇ ನಿರ್ಧಾರ ಮಾಡಿ ಮತ ಚಲಾಯಿಸಿ ಆಯ್ಕೆ ಮಾಡುತ್ತಾರೆ. ಆ ಲಕ್ಕಿ ಸ್ಪರ್ಧಿ ಯಾರಾಗಲಿದ್ದಾರೆ ಎಂಬುದು ಕುತೂಹಲ.

  ಮನೆಯಲ್ಲಿ ಉಳಿದಿರುವ ಸದಸ್ಯರು ಯಾರು?

  ಮನೆಯಲ್ಲಿ ಉಳಿದಿರುವ ಸದಸ್ಯರು ಯಾರು?

  ಬಿಗ್‌ಬಾಸ್ ಕನ್ನಡ ಒಟಿಟಿ ಮೊದಲ ಸೀಸನ್‌ ಆರಂಭವಾದಾಗ ಮನೆಯಲ್ಲಿ 16 ಮಂದಿ ಸದಸ್ಯರಿದ್ದರು. ಶೋ ಮುಗಿಯಲು ಇನ್ನು ಹನ್ನೆರಡು ದಿನ ಇರುವಾಗ ಬಿಗ್‌ಬಾಸ್ ಮನೆಯಲ್ಲಿ ಉಳಿದಿರುವುದು ಕೇವಲ 9 ಮಂದಿ. ಆರ್ವರ್ಧನ್ ಗುರೂಜಿ, ಸೋಮಣ್ಣ ಮಾಚಿಮಾಡ, ರಾಕೇಶ್, ರೂಪೇಶ್, ಜಶ್ವಂತ್, ಸಾನ್ಯಾ ಐಯ್ಯರ್, ಜಯಶ್ರೀ, ನಂದಿನಿ, ಸೋನು ಗೌಡ ಇವರುಗಳು ಮಾತ್ರ ಮನೆಯಲ್ಲಿದ್ದಾರೆ. ಕಳೆದ ವಾರ ಚೈತ್ರಾ ಹಳ್ಳಿಕೆರೆ ಹಾಗೂ ಅಕ್ಷತಾ ಕುಕಿ ಒಟ್ಟಿಗೆ ಮನೆಯಿಂದ ಹೊರಬಂದಿದ್ದಾರೆ. ರಾಕೇಶ್, ರೂಪೇಶ್ ಅವರುಗಳು ಫಿನಾಲೆ ವಾರಕ್ಕೆ ಹೋಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ.

  English summary
  Bigg Boss Kannada OTT: Bigg Boss gave five lakh rs prize offer to bigg boss house inmates. prize amount will be given to one contestant only.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X