For Quick Alerts
  ALLOW NOTIFICATIONS  
  For Daily Alerts

  Bigg Boss Kannada OTT: ನಂದುನಿಂದ ದೂರಾಗುವ ಮಾತನಾಡುತ್ತಿದ್ದಾನಾ ಜಶ್ವಂತ್?

  By ಎಸ್ ಸುಮಂತ್
  |

  ಬಿಗ್ ಬಾಸ್ ಮನೆಯಲ್ಲಿ ನಂದಿನಿ ಹಾಗೂ ಜಶ್ವಂತ್ ಪುಟ್ಟ ಪ್ರೇಮಿಗಳು. ಲವ್ವಲ್ಲಿ ಬಿದ್ದಿರುವ ಕ್ಯೂಟ್ ಕಪಲ್. ಜಶ್ವಂತ್‌ಗೆ ಕನ್ನಡ ಬಾರದೆ ಇದ್ದರು, ಮನೆಯವರೆಲ್ಲರ ಜೊತೆಗೆ ಮಾತನಾಡಲು ಯತ್ನಿಸುತ್ತಾರೆ. ನಂದಿನಿ ಪಕ್ಕದಲ್ಲಿಯೇ ಇದ್ದು ಆಗಾಗ ಹೇಳಿಕೊಡುತ್ತಾಳೆ. ಇದರ ನಡುವೆ ಅದ್ಯಾಕೋ ಜಶ್ವಂತ್ ಕೊಂಚ ನಂದಿನಿಯಿಂದ ಅಂತರ ಕಾಪಾಡಿಕೊಳ್ಳುತ್ತಿದ್ದಾನೆ ಅಂತ ನಂದಿನಿಗೆ ಅನಿಸಿದೆ. ಅದಕ್ಕೆ ಇವತ್ತು ಕ್ಲಾರಿಟಿ ತೆಗೆದುಕೊಂಡಿದ್ದಾಳೆ.

  ಬಿಗ್ ಬಾಸ್ ಮನೆಯಲ್ಲಿ ಅಷ್ಟು ಜನ ಇದ್ದರು, ಜಶ್ವಂತ್, ನಂದಿನಿಯನ್ನು ಬಿಟ್ಟು ಹೆಚ್ಚು ಎಲ್ಲಿಯೂ ಹೋಗುವುದಿಲ್ಲ. ಅದಕ್ಕೆ ನಂದಿನಿ ಬಿಡುವುದು ಇಲ್ಲ. ಈಗಾಗಲೇ ಸಾಕಷ್ಟು ಸಲ ಈ ಬಗ್ಗೆ ಡಿಸ್ಕಷನ್ ಕೂಡ ಆಗಿದೆ. ಜಶ್ವಂತ್‌ಗೆ ಕೇವಲ ಮನೆ ಊಟದಲ್ಲಿ ಮಾತ್ರ ಆಸಕ್ತಿ ಇರಬೇಕು. ಹೊಟೇಲ್ ಊಟವನ್ನು ಇಷ್ಟಪಡಬಾರದು ಎಂದು. ಈ ಬಗ್ಗೆ ಸುದೀಪ್ ಕೂಡ ವೇದಿಕೆ ಮೇಲೆ ಮಾತನಾಡಿ, ಜಶ್ವಂತ್ ಅವರಿಗೆ ರೇಗಿಸಿದ್ದರು. ಇದೀಗ ಜಶ್ವಂತ್, ನಂದಿನಿಯಿಂದ ಫ್ರೀಡಂ ಬಯಸುತ್ತಿದ್ದಾರಾ ಎಂಬ ಅನುಮಾನ ಕಾಡುತ್ತಿದೆ.

  Bigg Boss Kannada OTT: ನಿಲ್ತಿಲ್ಲಪ್ಪಾ ನಂದಿನಿ ಮತ್ತು ಜಯಶ್ರೀ ಫೈಟ್!Bigg Boss Kannada OTT: ನಿಲ್ತಿಲ್ಲಪ್ಪಾ ನಂದಿನಿ ಮತ್ತು ಜಯಶ್ರೀ ಫೈಟ್!

  ಜಶ್ವಂತ್ ನಡವಳಿಕೆಗೆ ಬೇಸರ

  ಜಶ್ವಂತ್ ನಡವಳಿಕೆಗೆ ಬೇಸರ

  ಜಶ್ವಂತ್‌ನನ್ನು ನಂದಿನಿ ತುಂಬಾನೇ ಹಚ್ಚಿಕೊಂಡಂತೆ ಕಾಣುತ್ತಿದೆ. ಅದರ ಪರಿಣಾಮವಾಗಿಯೇ ಎಲ್ಲಿಯೂ ಹೆಚ್ಚು ಸಮಯ ಬಿಟ್ಟು ಇರುವುದೇ ಇಲ್ಲ. ಜಶ್ವಂತ್ ಒಂಟಿಯಾಗಿದ್ದಾನೆ ಎಂದರೆ ಅಲ್ಲಿಗೆ ನಂದಿನಿ ಹೋಗಿ ಕುಳಿತು ಬಿಡುತ್ತಾಳೆ. ಇದು ಜಶ್ವಂತ್‌ಗೆ ಬೇಸರವಾಗಿದೆ ಏನೋ. ಅದನ್ನು ಒಮ್ಮೊಮ್ಮೆ ಬೇರೆ ರೀತಿಯಲ್ಲಿ ನಡೆದುಕೊಳ್ಳುವ ಮೂಲಕ ಹೊರ ಹಾಕುತ್ತಿದ್ದಾನೆ ಎನಿಸುತ್ತಿದೆ. ಅದೇ ನಡವಳಿಕೆ ಇದೀಗ ನಂದಿನಿ ಬೇಸರಕ್ಕೆ ಕಾರಣವಾಗಿದೆ.

  Bigg Boss Kannada OTT: ರೂಪೇಶ್‌ಗೆ ಮಗಳನ್ನು ಕೊಟ್ಟ ಆರ್ಯವರ್ಧನ್: ಒಂದೇ ಮನೆಯಲ್ಲಿ ಅಳಿಯ ಮಾವ!Bigg Boss Kannada OTT: ರೂಪೇಶ್‌ಗೆ ಮಗಳನ್ನು ಕೊಟ್ಟ ಆರ್ಯವರ್ಧನ್: ಒಂದೇ ಮನೆಯಲ್ಲಿ ಅಳಿಯ ಮಾವ!

  ನಂದಿನಿ ಕಟ್ಟಾಕಿದ್ದಾಳಾ

  ನಂದಿನಿ ಕಟ್ಟಾಕಿದ್ದಾಳಾ

  ನಿನ್ನೆ ಏನೋ ಮಾತನಾಡುವಾಗ ಜಶ್ವಂತ್, ನಂದಿನಿಗೆ ಕೊಟ್ಟ ರೆಸ್ಪಾನ್ಸ್ ಇವತ್ತಿನ ಬೇಸರಕ್ಕೆ ಕಾರಣವಾಗಿದೆ. ಅದನ್ನೇ ನಂದಿನಿ ಇದೀಗ ಜಶ್ವಂತ್ ಬಳಿ ಚರ್ಚೆ ಮಾಡುತ್ತಿದ್ದಾಳೆ. ನೀನು ಬೇರೆ ಕಡೆ ಕಂಫರ್ಟ್ ನೋಡುತ್ತಿದ್ದೀಯಾ ಎಂದಾಗ ಜಶ್ವಂತ್ ಹೌದಾ? ಹಾಗೇನು ಇಲ್ವಲ್ಲ ಎಂದಿದ್ದಾನೆ. ಅದಕ್ಕೆ ನಂದಿನಿ ನಿನ್ನೆ ಏನನ್ನೋ ಕೇಳಿದಾಗ ಮಾಡಿದ ಸ್ಮೈಲ್ ಬಗ್ಗೆ ವಿವರಣೆ ನೀಡಿದ್ದಾಳೆ. ಬಳಿಕ ಹೀಗೆ ಆದರೇ ತುಂಬಾನೇ ಕಷ್ಟ ಆಗುತ್ತೆ. ಇದೇ ಮೊದಲ ಬಾರಿಗೆ ನಮ್ಮಿಬ್ಬರ ನಡುವೆ ಈ ರೀತಿ ಆಗುತ್ತಿರುವುದು. ಏನೋ ಮಿಸ್ ಹೊಡೀತಿದೆ ಎಂದಿದ್ದಾಳೆ. ಅದಕ್ಕೆ ರಿಪ್ಲೆ ಕೊಟ್ಟ ಜಶು, ನಂಗು ಕಷ್ಟ ಆಗುತ್ತಾ ಇದೆ ಎಂದಿದ್ದಾನೆ.

  ಜಶು ವಿಚಾರದಲ್ಲಿ ನಂದಿನಿಗೆ ಬೇಸರ

  ಜಶು ವಿಚಾರದಲ್ಲಿ ನಂದಿನಿಗೆ ಬೇಸರ

  ಜಶ್ವಂತ್ ಬಗ್ಗೆ ನಂದಿನಿ ಪೊಸೆಸಿವ್ ಆಗುತ್ತಿದ್ದಾಳಾ ಎಂಬ ಅನುಮಾನ ನೋಡುಗರಿಗೆ ಸೃಷ್ಟಿಯಾದಂತೆ ಕಾಣುತ್ತಿದೆ. ಯಾಕೆಂದರೆ ಇತ್ತೀಚೆಗೆ ಇಷ್ಟ ಕಷ್ಟದ ಆಟ ಬಂದಾಗ ಒಂದು ಬ್ಯೂಟಿಫುಲ್ ಗಿಫ್ಟ್ ಒಂದನ್ನು ಸಾನ್ಯಾಗೆ ನೀಡಿ, ನೀನು ನನ್ನ ಲೈಫ್ ಟೈಮ್ ಫ್ರೆಂಡ್ ಅಂತ ಹೇಳಿದ್ದಳು ನಂದಿನಿ. ಆದರೆ ಅದರ ಮಾರನೇ ದಿನ ಜಶ್ವಂತ್ ವಿಚಾರದಲ್ಲಿ ಸುಮ್ಮನೆ ಕೋಪ ಮಾಡಿಕೊಂಡಿದ್ದಳು. ನೀನು ಹೆಚ್ಚು ಅವಳ ಜೊತೆ ಮಾತನಾಡುತ್ತಾ ನಿಂತರೆ ನೋಡುವವರು ಬೇರೆ ರೀತಿ ಅರ್ಥೈಸಿಕೊಳ್ಳುತ್ತಾರೆ ಎಂದು ಬುದ್ದಿ ಮಾತು ಹೇಳಿದ್ದಳು.

  ರಾತ್ರಿ ತಾನೇ ಜಶ್ವಂತ್‌ಗೆ ಸಲಹೆ ನೀಡಿದ್ದ ನಂದು

  ರಾತ್ರಿ ತಾನೇ ಜಶ್ವಂತ್‌ಗೆ ಸಲಹೆ ನೀಡಿದ್ದ ನಂದು

  ಬಿಗ್ ಬಾಸ್ ಮನೆಯಲ್ಲಿ ನಂದಿನಿ ಹಾಗೂ ಜಶ್ವಂತ್ ಸಾಕಷ್ಟು ಸಮಯ ಕಳೆಯುತ್ತಿದ್ದಾರೆ. ಒಂದೇ ಮನೆ, ಹೊರಗಡೆಯ ಸಂಪರ್ಕವಿಲ್ಲ. ಜಶ್ವಂತ್‌ಗೂ ಬೇರೆಯವರ ಜೊತೆ ಮಾತನಾಡಬೇಕು. ಸಮಯ ಕಳೆಯಬೇಕು ಎನಿಸಿರಬೇಕು. ಯಾಕೆಂದರೆ ಹೊರಗಡೆ ಇದ್ದಾಗ ಹೆಚ್ಚು ಜನ ಫ್ರೆಂಡ್ಸ್, ಫ್ಯಾಮಿಲಿ ಅಂತ ಸಮಯ ಬೇರೆ ರೀತಿ ಇರುತ್ತದೆ. ಆದರೆ ಇಲ್ಲಿ ಬರೀ ನಂದಿನಿ ಮಾತ್ರ. ಹೀಗಾಗಿ ಕೊಂಚ ಡಿಸ್ಟರ್ಬ್ ಆಗಿದ್ದಾನೆ ಎನಿಸುತ್ತದೆ. ಆದರೆ ನಂದಿನಿ ರಾತ್ರಿಯೆಲ್ಲ ಜಶ್ವಂತ್‌ಗೆ ಬುದ್ದಿ ಹೇಳಿದ್ದಾಳೆ. ಈ ವಾರ ನಾನೇನಾದರೂ ಹೊರಗೆ ಹೋದರೆ, ನೀನು ಸೀರಿಯಸ್ ಆಗಿ ಆಟ ಆಡು. ಎಲ್ಲರ ಜೊತೆಗೂ ಚೆನ್ನಾಗಿ ನಗು ನಗುತ್ತಾ ಇರು. ಹೊರಗಡೆ ಬಂದಾಗ ನಾನು ಸಿಗುತ್ತೀನಲ್ಲ ಎಂಬ ಬುದ್ದಿ ಮಾತನ್ನು ಹೇಳಿದ್ದಾಳೆ.

  English summary
  Bigg Boss Kannada OTT September 2nd Episode Written Update. Here is the details about Jashwanth and Nandini Fight. Know More

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X