For Quick Alerts
  ALLOW NOTIFICATIONS  
  For Daily Alerts

  Bigg Boss Kannada OTT: ಗುರೂಜಿ ಹಾಗೂ ಸೋಮಣ್ಣಗೆ ನಿದ್ದೆ ಗಿಫ್ಟ್ : ಆದರೆ 30 ನಿಮಿಷ ಮಾತ್ರ?

  By ಎಸ್ ಸುಮಂತ್
  |

  ಕೆಲಸವಿಲ್ಲದೆ, ಓಡಾಟವಿಲ್ಲದೆ ಒಂದೇ ಕಡೆ ಇದ್ದಾಗ ನಿದ್ದೆ ಬರುವುದು ಸಹಜ. ಬಿಗ್ ಬಾಸ್ ಮನೆಯಲ್ಲಿ ಈ ಸಂಕಟವನ್ನು ಸಾಕಷ್ಟು ಜನ ಅನುಭವಿಸುತ್ತಾರೆ. ಟಿವಿ ಇಲ್ಲ, ಮೊಬೈಲ್ ಇಲ್ಲ, ಹೊರಗಿನವರ ಸಂಪರ್ಕವಿಲ್ಲ, ಓಡಾಟವಿಲ್ಲ. ಮಾತನಾಡಿದವರ ಜೊತೆಗೆ ಎಷ್ಟು ಅಂತ ಮಾತನಾಡುವುದು. ಬೆಳಗ್ಗೆ ಎದ್ದವರು ತಿಂಡಿ ಮಾಡಿ, ಮಧ್ಯಾಹ್ನದ ಅಡುಗೆ ಮಾಡುವಷ್ಟರಲ್ಲಿಯೇ ಸಮಯ ಆಗುತ್ತೆ. ಆದರೆ ಮಧ್ಯಾಹ್ನದ ಊಟ ಮಾಡಿದ ಮೇಲೆ ಸಾಕಷ್ಟು ಸಮಯ ಮನೆ ಮಂದಿಯನ್ನು ಕಾಡುತ್ತೆ. ಆಗ ಹಲವರು ಕೂತಲ್ಲೇ ತೂಕಡಿಸಿದ್ದು ಇದೆ. ಆಗ ಬಿಗ್ ಬಾಸ್ ವಾರ್ನಿಂಗ್ ಕೂಡ ಕೊಟ್ಟಿದೆ.

  ಆದರೆ ಈಗ ಬಿಗ್ ಬಾಸ್ ಮನೆಯಲ್ಲಿ ಮಧ್ಯಾಹ್ನ ಮಲಗಲು ಅವಕಾಶ ಸಿಗುತ್ತಿದೆ. ಎಲ್ಲರಿಗೂ ಅಲ್ಲ ಇಬ್ಬರಿಗೆ ಮಾತ್ರ. ಅದು ದಿನವಿಡಿ ಅಲ್ಲ ಕೇವಲ 30 ನಿಮಿಷ. ಅದನ್ನು ಜನರ ಅಭಿಪ್ರಾಯಗಳ ಮೂಲಕ ಸಂಗ್ರಹ ಮಾಡಿದೆ. ನಿದ್ದೆ ಮಾಡಲು ಬಿಟ್ಟರೆ ಹಾಗೇ ನಿದ್ದೆ ಹೋಗುವವರ ಪ್ರಮಾಣ ಹೆಚ್ಚಾಗಿಯೇ ಇದೆ. ಸಾಕಷ್ಟು ಕಂಟ್ರೋಲ್ ಮಾಡಿಕೊಂಡು ನಿದ್ದೆಗೆ ಜಾರದೆ ಏನೋ ಒಂದನ್ನು ಮಾಡುತ್ತಾ ಕುಳಿತು ಬಿಡುತ್ತಾರೆ.

  BBK OTT : ಬಿಗ್‌ಬಾಸ್ ಮನೆ ಸ್ಪರ್ಧಿಗಳಿಗೆ ಐದು ಲಕ್ಷ ಬಹುಮಾನದ ಆಫರ್: ಗೆಲ್ಲಲು ಏನು ಮಾಡಬೇಕು?BBK OTT : ಬಿಗ್‌ಬಾಸ್ ಮನೆ ಸ್ಪರ್ಧಿಗಳಿಗೆ ಐದು ಲಕ್ಷ ಬಹುಮಾನದ ಆಫರ್: ಗೆಲ್ಲಲು ಏನು ಮಾಡಬೇಕು?

  ಗುರೂಜಿ, ಸೋಮಣ್ಣನಿಗೆ ಬಂಪರ್ ಅವಕಾಶ

  ಗುರೂಜಿ, ಸೋಮಣ್ಣನಿಗೆ ಬಂಪರ್ ಅವಕಾಶ

  ಮಧ್ಯಾಹ್ನದ ನಿದ್ದೆ ಯಾರಿಗೆ ಬೇಡ ಹೇಳಿ. ರಾತ್ರಿ ನಿದ್ದೆ ಸ್ವಲ್ಪ ಕಡಿಮೆಯಾದರೂ ಮಧ್ಯಾಹ್ನ ನಿದ್ದೆ ಮಾಡಿದರೆ ಆಹಾ ಏನೋ ಆನಂದ. ಆದರೆ ಎಲ್ಲಾ ಸಮಯದಲ್ಲೂ ಅದು ಸಾಧ್ಯವಾಗುವುದಿಲ್ಲ. ಹಾಗೇ ಎಲ್ಲಾ ಸಮಯದಲ್ಲೂ ಅದು ಬೇಕಾಗುವುದು ಇಲ್ಲ. ಆದರೆ ಬಿಗ್ ಬಾಸ್ ಮನೆಯಲ್ಲಿ ಇರುವವರಿಗೆ ಇದು ಖಂಡಿತ ಅಗತ್ಯವಿದೆ ಎನಿಸಿದೆ. ಆದರೆ ಅದನ್ನು ಬಿಗ್ ಬಾಸ್ ನೀಡುವುದಿಲ್ಲ. ಇದೀಗ ಅಂಥದ್ದೊಂದು ಅವಕಾಶ ಕಲ್ಪಿಸಿದ್ದು, ಆ ಅದ್ಭುತ ಅವಕಾಶ ಗುರೂಜಿ ಹಾಗೂ ಸೋಮಣ್ಣ ಪಾಲಾಗಿದೆ.

  ಇದು ದೊಡ್ಡ ಶಿಕ್ಷೆಯೇ ಸರಿ

  ಇದು ದೊಡ್ಡ ಶಿಕ್ಷೆಯೇ ಸರಿ

  ಊಟ ಸಂಪೂರ್ಣವಾಗಿ ಸಿಗದೆ ಇದ್ದರೂ ಪರವಾಗಿಲ್ಲ. ಆದರೆ ನಿದ್ದೆ ಅರ್ಧಂಬರ್ಧ ಆಗಬಾರದು. ಆ ರೀತಿ ಅರ್ಧಂಬರ್ಧ ಆಗಿ ಬಿಟ್ಟಿರೆ ಕೋಪವೂ ಅವನನ್ನು ಆವರಿಸಿಕೊಳ್ಳುತ್ತಾ ಇರುತ್ತದೆ. ಆರೋಗ್ಯದ ಸಮಸ್ಯೆಯೂ ಕೆಲವರಲ್ಲಿ ಶುರುವಾಗಿ ಬಿಡುತ್ತೆ. ಅಷ್ಟೇ ಅಲ್ಲ ಮಲಗಿದ ಕೂಡಲೇ ನಿದ್ದೆ ಬರುವುದಕ್ಕೂ ಸಾಧ್ಯವಿಲ್ಲ. ಏನೋ ಸಿಕ್ಕ ಖುಷಿಯಲ್ಲಿ ನಿದ್ದೆ ಹೋಗಿಯೇ ಬಿಡುತ್ತದೆ. ಈಗ ಕೊಟ್ಟಿರುವ ಸಮಯ ಕೇವಲ ಮೂವತ್ತು ನಿಮಿಷ. ನಿದ್ದೆ ಬರುವುದಕ್ಕೆ 5 ನಿಮಿಷ ಸಮಯ ತೆಗೆದುಕೊಂಡರು, ನಿದ್ದೆ ಮಾಡುವುದಕ್ಕೆ 25 ನಿಮಿಷ ಸಮಯ.

  ನಿದ್ದೆ ಮಾಡಿದ ತೃಪ್ತಿ ಇರುತ್ತಾ?

  ನಿದ್ದೆ ಮಾಡಿದ ತೃಪ್ತಿ ಇರುತ್ತಾ?

  ಇಷ್ಟು ದಿನದಲ್ಲಿ ನಿದ್ದೆ ಕಡಿಮೆಯಾಗಿದ್ದ ಕಾರಣ ಆರ್ಯವರ್ಧನ್ ಹಾಗೂ ಸೋಮಣ್ಣನಿಗೆ ಬೆಡ್ ಮೇಲೆ ಮಲಗಿದ ಕೂಡಲೆ ನಿದ್ದೆ ಮಾಡಿ ಬಿಡಬಹುದು. ಆದರೆ ಎದ್ದೇಳುವಾಗ ಇದೆಯಲ್ಲ ಅದು ಸ್ವಲ್ಪ ಸಂಕಷ್ಟ ತಂದೊಡ್ಡಬಹುದು. ಯಾಕೆಂದರೆ ನಿದ್ದೆ ಸಂಪೂರ್ಣವಾಗದೆ ಇದ್ದರೆ ಯಾವುದರಲ್ಲೂ ಆಸಕ್ತಿ ಇಲ್ಲದಂತೆ ಆಗಿಬಿಡುತ್ತದೆ. ಹೀಗಾಗಿ ಬಿಗ್ ಬಾಸ್ ಕೊಟ್ಟ ಈ ಗಿಫ್ಟ್ ಅಷ್ಟೊಂದು ಖುಷಿ ನೀಡುವುದಿಲ್ಲವೇನೋ.

  ಗುರೂಜಿ, ಸೋಮಣ್ಣನಿಗೆ ಈ ಗಿಫ್ಟ್ ಯಾಕೆ?

  ಗುರೂಜಿ, ಸೋಮಣ್ಣನಿಗೆ ಈ ಗಿಫ್ಟ್ ಯಾಕೆ?

  ಬಿಗ್ ಬಾಸ್ ಎಲ್ಲಾ ವಿಚಾರಕ್ಕೂ ಜನರಿಂದ ಬಂದ ಉತ್ತರ ಎಂದು ಹೇಳಿದೆ. ನಿದ್ದೆಯ ವಿಚಾರಕ್ಕೂ ಜನ ಸೆಲೆಕ್ಟ್ ಮಾಡಿರುವುದು ಸೋಮಣ್ಣ ಹಾಗೂ ಆರ್ಯವರ್ಧನ್ ಅವರನ್ನು. ಯಾಕೆಂದರೆ ಹಲವು ಬಾರಿ ಕೂತಲ್ಲಿಯೇ ನಿದ್ದೆ ಹೋಗುತ್ತಿದ್ದವರು ಇವರೇ. ಜೊತೆಗೆ ಮನೆಯಲ್ಲಿ ಇರುವ ಹಿರಿಯರು ಎಂದರೆ ಈ ಇಬ್ಬರೇ. ಈ ಕಾರಣದಿಂದ ಅವರಿಗೆ ಕೊಂಚ ವಿಶ್ರಾಂತಿ ಬರಲಿ ಎಂದು ಈ ರೀತಿಯ ಆಯ್ಕೆ ಮಾಡಿರಬಹುದು.

  English summary
  Bigg Boss Kannada OTT September 7th Episode Written Update. Here is the details about Aryavardhan and Somanna got sleeping gift.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X