India
  For Quick Alerts
  ALLOW NOTIFICATIONS  
  For Daily Alerts

  ಸೂಪರ್ ಆಗಿದೆ ವಾಸುಕಿ ವೈಭವ್ ಹಾಡಿದ ಬಿಗ್‌ಬಾಸ್ ಒಟಿಟಿ ಹಾಡು

  |

  ''ಲಾಗಿನ್ ಮಾಡಿ ಬಲಗಾಲಿಟ್ಟು, ಲಾಗ್ ಔಟ್ ಯಾವಾಗ್ಲೊ ಯಾವಾನಿಗ್ಗೊತ್ತು. ಕ್ಯಾಮೆರಾ ನೋಡ್ತೈತೆ ಮೂರ್ಹೊತ್ತು, ಏನ್ ಕಿತ್ ದಬಾಕ್ತಿಯೊ ಅದೆ ಸಂಪತ್ತು'' ಬಿಗ್‌ಬಾಸ್ ಒಟಿಟಿ ಕನ್ನಡದ ಮೊದಲ ಸೀಸನ್‌ಗೆ ಸಂಗೀತ ನಿರ್ದೇಶಕ, ಹಾಡುಗಾರ, ಗೀತ ಸಾಹಿತಿ ವಾಸುಕಿ ವೈಭವ್ ಬರೆದಿರುವ ಹಾಡಿನ ಪಲ್ಲವಿ ಇದು.

  ಬಿಗ್‌ಬಾಸ್ ಕನ್ನಡ ಒಟಿಟಿ ಸೀಸನ್ ಒಂದರ ಉದ್ಘಾಟನಾ ಕಾರ್ಯಕ್ರಮದಲ್ಲಿ ವಾಸುಕಿ ವೈಭವ್ ಅತಿಥಿಯಾಗಿ ಪಾಲ್ಗೊಂಡಿದ್ದು, ನಟ ಸುದೀಪ್, ''ಏನ್ರಿ ಒಟಿಟಿ ಸೀಸನ್‌ಗೆ ಹಾಡು ಬರೆದುಕೊಡ್ತೀನಿ ಎಂದಿದ್ರಂತೆ ಎಲ್ಲದು'' ಎಂದು ಪ್ರಶ್ನೆ ಮಾಡಿದ್ದಾರೆ ಆಗ ಸರ್, ಹಾಡು ಹಾಡೇ ಬಿಡ್ತೀನಿ ಎಂದು ವಾಸುಕಿ ವೈಭವ್ ಹಾಡು ಹಾಡಿದ್ದಾರೆ.

  ವಾಸುಕಿ ವೈಭವ್ ಹಾಡಿರುವ ಹಾಡನ್ನು ಕಲರ್ಸ್ ವಾಹಿನಿಯ ಅಧಿಕೃತ ಸಾಮಾಜಿಕ ಜಾಲತಾಣ ಪೇಜ್‌ನಲ್ಲಿ ಹಂಚಿಕೊಳ್ಳಲಾಗಿದೆ. ವಾಸುಕಿ ತಾವೇ ಬರೆದು ಗೀತ ಸಂಯೋಜಿಸಿರುವ ತಮಾಷೆ ಧಾಟಿಯ, ಜೋಶ್‌ ಭರಿತ ಹಾಡನ್ನು ಹಾಡಿದ್ದಾರೆ.

  ಅಸಲಿಗೆ ಬಿಗ್‌ಬಾಸ್ ಕಾರ್ಯಕ್ರಮವು ಆಗಸ್ಟ್ 06 ರ ಸಂಜೆ 7 ರಿಂದ ಆರಂಭವಾಗಲಿದೆ ವೂಟ್‌ ಒಟಿಟಿಯಲ್ಲಿ. ಆದರೆ ಎರಡು ದಿನ ಮುಂಚೆಯೇ ಕಾರ್ಯಕ್ರಮದ ಚಿತ್ರೀಕರಣ ನಡೆದಾಗಿದೆ. ಕಾರ್ಯಕ್ರಮದ ಉದ್ಘಾಟನೆ ಸ್ಪರ್ಧಿಗಳ ಎಂಟ್ರಿ ಈಗಾಗಲೇ ಆಗಿಬಿಟ್ಟಿದೆ ಎಂಬುದನ್ನು ಇಂದು ಬಿಡುಗಡೆ ಆಗಿರುವ ಕೆಲವು ವೀಡಿಯೋಗಳು ಸಾರಿ ಹೇಳುತ್ತಿವೆ.

  ವಾಸುಕಿ ವೈಭವ್ ಹಾಡು ಹಾಡಿರುವ ವಿಡಿಯೋದ ಜೊತೆಗೆ ಸುದೀಪ್ ಹಾಗೂ ವಾಸುಕಿ ವೈಭವ್ ಬಿಗ್‌ಬಾಸ್ ಮನೆ ಪ್ರವೇಶಿಸಿರುವ ವೀಡಿಯೋ ಸಹ ವೂಟ್‌ನಲ್ಲಿ ಪ್ರಸಾರವಾಗಿದೆ.

  ಆದರೆ ಕೆಲವು ದಿನಗಳ ಹಿಂದೆ ನಡೆದ ಸುದ್ದಿಗೋಷ್ಠಿಯಲ್ಲಿ, ಬಿಗ್‌ಬಾಸ್ ಒಟಿಟಿ ಕಾರ್ಯಕ್ರಮವು ಲೈವ್ ಕಾರ್ಯಕ್ರಮ ಆಗಿರಲಿದೆ ಎಂದು ಕಲರ್ಸ್‌ನ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಹೇಳಿದ್ದರು. ಆದರೆ ಈಗಾಗಲೇ ಉದ್ಘಾಟನೆ ಕಾರ್ಯಕ್ರಮ, ಸ್ಪರ್ಧಿಗಳ ಎಂಟ್ರಿ ಎಲ್ಲ ರೆಕಾರ್ಡ್‌ ಆಗಿ ಆಗಿದೆ. ಹಾಗಿದ್ದ ಮೇಲೆ ಇದು ಲೈವ್ ಹೇಗಾಗುತ್ತದೆ ಎಂಬುದನ್ನು ಆಯೋಜಕರೇ ಸ್ಪಷ್ಟಪಡಿಸಬೇಕಿದೆ. ಈ ಪ್ರಶ್ನೆಗೆ ಉತ್ತರ ಬಹುಷಃ ನಾಳೆ ಪ್ರಸಾರವಾಗಲಿರುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಗುವ ಸಾಧ್ಯತೆಯೂ ಇದೆ. ಆಗಸ್ಟ್ 6 ರಂದು ಸಂಜೆ 7 ಗಂಟೆಗೆ ಕಾರ್ಯಕ್ರಮ ವೂಟ್‌ನಲ್ಲಿ ಮಾತ್ರವೇ ಪ್ರಸಾರವಾಗಲಿದೆ.

  English summary
  Singer, music composer Vasukhi Vaibhav sung a song for Bigg Boss OTT on bigg boss stage. He is the guest for Bigg Boss OTT inauguration program.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X