For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್ ಒಟಿಟಿ; ಶಿಲ್ಪಾ ಶೆಟ್ಟಿ ತಂಗಿಯ ವಯಸ್ಸಿನ ಬಗ್ಗೆ ಅಣಕ ಮಾಡಿದ ಸಹಸ್ಪರ್ಧಿ ವಿರುದ್ಧ ಆಕ್ರೋಶ

  |

  ಬಾಲಿವುಡ್ ಖ್ಯಾತ ನಿರ್ಮಾಪಕ, ನಿರ್ದೇಶಕ ಕರಣ್​ ಜೋಹರ್​ ನಡೆಸಿಕೊಡುತ್ತಿರುವ ಬಿಗ್​ ಬಾಸ್​ ಒಟಿಟಿ ರಿಯಾಲಿಟಿ ಶೋನಲ್ಲಿ ನಟಿ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ ಹೆಚ್ಚು ಹೈಲೈಟ್​ ಆಗುತ್ತಿದ್ದಾರೆ. ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರ ಜೈಲು ಸೇರಿದ ಬಳಿಕ ಶಮಿತಾ ಶೆಟ್ಟಿ ಬಿಗ್ ಬಾಸ್ ಗೆ ಎಂಟ್ರಿ ಕೊಡ್ತಾರೆ ಎನ್ನುವ ಸುದ್ದಿ ಕೇಳುತ್ತಿದ್ದಂತೆ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಾಗಿತ್ತು. ಶಮಿತಾ ಬಿಗ್ ಬಾಸ್ ಮನೆಯೊಳಗೆ ಬಂದ ಬಳಿಕ ಹೆಚ್ಚು ಆಕರ್ಷಣೆಯಾಗಿದ್ದಾರೆ. ಸಹ ಸ್ಪರ್ಧಿಗಳು ಸದಾ ಶಮಿತಾ ವಿರುದ್ಧ ಕಿತ್ತಾಡುತ್ತಿರುತ್ತಾರೆ.

  ಅನೇಕ ಕಾರಣಗಳಿಗೆ ಶಮಿತಾರನ್ನು ಬಿಗ್​ ಬಾಸ್​ ಸ್ಪರ್ಧಿಗಳು ಟಾರ್ಗೆಟ್​ ಮಾಡುತ್ತಿದ್ದಾರೆ. ಅದರಲ್ಲೂ ಅವರ ವಯಸ್ಸಿನ ವಿಚಾರ ಬಿಗ್ ಮನೆಯಲ್ಲಿ ಆಗಾಗ ಚರ್ಚೆ ಆಗುತ್ತಲೇ ಇದೆ. ಶಮಿತಾಗಿಂತಲೂ ಚಿಕ್ಕ ವಯಸ್ಸಿನ ಹಲವು ಸ್ಪರ್ಧಿಗಳು ಬಿಗ್​ ಬಾಸ್​ ಮನೆಯಲ್ಲಿ ಇದ್ದಾರೆ. ಆದರೆ ಎಲ್ಲರಿಗಿಂತ ಹೆಚ್ಚಾಗಿ ನಟಿ ಅಕ್ಷರಾ ಸಿಂಗ್​ ಅವರು ಶಮಿತಾ ಮೇಲೆ ಮಾತಿನ ದಾಳಿ ನಡೆಸಿರುವುದು ಜಾಸ್ತಿಯಾಗಿದೆ. ಪದೇಪದೇ ಅವರು ಶಮಿತಾ ವಯಸ್ಸಿನ ಬಗ್ಗೆ ಕಮೆಂಟ್​ ಮಾಡುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ಶಮಿತಾಗೆ ಆಂಟಿ ಎಂದಿದ್ದ ಅವರು ಈಗ 'ಅಮ್ಮನ ವಯಸ್ಸಿನವಳು' ಎಂದು ಕಿಡಿ ಕಾರಿದ್ದಾರೆ.

  ಬಿಗ್‌ಬಾಸ್‌ ಮನೆಯೊಳಗಿನ ಪ್ರಮುಖ ಸೆಲೆಬ್ರಿಟಿ ಆಗಿರುವ ಶಮಿತಾ ಶೆಟ್ಟಿ ಸಾಕಷ್ಟು ಕಠಿಣ ಸ್ಪರ್ಧೆಯನ್ನೇ ಮನೆಯ ಒಳಗೆ ಅನುಭವಿಸುತ್ತಿದ್ದಾರೆ. ಕೆಲವು ಸ್ಪರ್ಧಿಗಳೊಟ್ಟಿಗೆ ಈಗಾಗಲೇ ಶಮಿತಾ ಶೆಟ್ಟಿ ಜಗಳ ಮಾಡಿಕೊಂಡಿದ್ದಾರೆ. ಇನ್ನು ಕೆಲವು ಸ್ಪರ್ಧಿಗಳ ಮೇಲಂತೂ ಆಗಾಗ್ಗೆ ಜಗಳ ಮಾಡಿಕೊಳ್ಳುತ್ತಲೇ ಇದ್ದಾರೆ. ಅದರಲ್ಲಿಯೂ ಆಕಾಂಕ್ಷಾ ಸಿಂಗ್‌ ಜೊತೆ ಸತತ ಜಗಳಗಳು ನಡೆಯುತ್ತಲೇ ಇವೆ.

  ಇತ್ತೀಚಿಗಷ್ಟೆ ಉಪ್ಪಿನ ಡಬ್ಬಿಯ ವಿಚಾರವಾಗಿ ಶಮಿತಾ ಶೆಟ್ಟಿ ಹಾಗೂ ಅಕ್ಷರಾ ಸಿಂಗ್ ನಡುವೆ ಜೋರಾದ ಜಗಳವಾಗಿತ್ತು. ಅಕ್ಷರಾ ಸಿಂಗ್ ಶಮಿತಾ ಶೆಟ್ಟಿ ವಿರುದ್ಧ ಬಹಳ ಏರು ಧ್ವನಿಯಲ್ಲಿ ಕಿರುಚಾಡಿದ್ರು. ಶಮಿತಾ ಶೆಟ್ಟಿಗೆ ಕೆಟ್ಟದಾಗಿ ಬೈದಿದ್ದರು. ಅಕ್ಷರಾ ಸಿಂಗ್, ಶಮಿತಾರನ್ನು ಉಪ್ಪಿನ ಡಬ್ಬಿ ಎಲ್ಲಿದೆ ಎಂದು ಕೇಳಿದ್ದರು, ಇದಕ್ಕೆ ಇಂಗ್ಲೀಷ್‌ನಲ್ಲಿ 'ಇರಿಟೇಟಿಂಗ್' ಎಂದು ಶಮಿತಾ ಬೈದುಕೊಂಡಿದ್ದರು. ಇದು ಅಕ್ಷರಾ ಅನ್ನು ಕೆರಳಿಸಿತ್ತು. 'ಉಪ್ಪಿನ ಡಬ್ಬಿ ಎಲ್ಲಿದೆ ಎಂದು ಕೇಳಿದರೆ ಅದಕ್ಕೆ ಇಷ್ಟೊಂದು ಉರಿದುಕೊಳ್ಳುವುದು ಏಕೆ. ನಿನಗೆ ಒಳ್ಳೆಯ ಇಂಗ್ಲೀಷ್ ಬರುವುದಿದ್ದರೆ ಅದನ್ನು ನಿನ್ನ ಬಳಿ ಇಟ್ಟುಕೊ, ನನ್ನ ಮೇಲೆ ಪ್ರಯೋಗ ಮಾಡಲು ಬರಬೇಡ'' ಎಂದು ಅಕ್ಷರಾ ಆವಾಜ್ ಹೊಡೆದಿದ್ದರು.

  ಇದೀಗ ವಯಸ್ಸಿನ ವಿಚಾರ ಇಟ್ಟುಕೊಂಡು ಶಮಿತಾಗೆ ಚುಚ್ಚು ಮಾತುಗಳನ್ನು ಆಡುತ್ತಿದ್ದಾರೆ. ಅಕ್ಷರಾ ಸಿಂಗ್, ಶಮಿತಾಗೆ ತಾಯಿಯ ವಯಸ್ಸಾಗಿದೆ ಎಂದು ಆಡಿಕೊಳ್ಳುತ್ತಾ ನಗುತ್ತಿದ್ದಾರೆ. ತಾಯಿಯ ವಯಸ್ಸಾಗಿದೆ ಎಂದು ನಗುತ್ತಾ ಇರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿಡಿಯೋಗೆ ಅನೇಕರು ಕಾಮೆಂಟ್ ಮಾಡಿ, ಅಕ್ಷರಾ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.

  ಮಾಜಿ ಬಿಗ್ ಬಾಸ್ ಸ್ಪರ್ಧಿ ಕಶ್ಮೇರಾ ಈ ಬಗ್ಗೆ ಪ್ಕತಿಕ್ರಿಯೆ ನೀಡಿ, ಅಕ್ಷರಾ ಹೇಳಿಕೆ ಬಗ್ಗೆ ಬೇಸರ ಹೊರಹಾಕಿದ್ದಾರೆ. " ಅಕ್ಷರಾ ಅವರೇ, ಶಮಿತಾ ಶೆಟ್ಟಿ ನಿಮ್ಮ ತಾಯಿಯ ವಸ್ಸಾಗಿದ್ದಾರೆ ನೀವು ನಿಮ್ಮ ಮನೆಯಲ್ಲಿಯೂ ನಿಮ್ಮ ತಾಯಿ ಜೊತೆ ಈ ರೀತಿ ಕಟ್ಟದಾಗಿ ಮಾತನಾಡುತ್ತೀರಾ ಎಂದು ನಾನು ತಿಳಿದುಕೊಳ್ಳಲು ಬಯಸುತ್ತೇನೆ. ಈಗ ನಿಮ್ಮ ನಡವಳಿಕೆ ಎಲ್ಲಿದೆ" ಎಂದು ಪ್ರಶ್ನೆ ಮಾಡಿದ್ದಾರೆ.

  ಅಂದಹಾಗೆ ಶಮಿತಾ ಶೆಟ್ಟಿಗೆ ಸದ್ಯ 42 ವರ್ಷ. ಅಕ್ಕನ ಹಾಗೆ ಶಮಿತಾ ಕೂಡ ಯೋಗ, ವರ್ಕೌಟ್ ಅಂತ ಸದಾ ಫಿಟ್ನೆಸ್ ಕಡೆ ಹೆಚ್ಚು ಗಮನ ಕೊಡುತ್ತಾರೆ. ಹಾಗಾಗಿ ಶಮಿತಾ ನೋಡಿದ್ರೆ ನಿಜಕ್ಕೂ 42 ವರ್ಷ ವಯಸ್ಸಾಗಿದೆ ಅಂತ ಹೇಳಲು ಸಾಧ್ಯವಿಲ್ಲ. ಬಿಗ್ ಬಾಸ್ ಒಟಿಟಿಯಲ್ಲಿ ಶಮಿತಾ ಶೆಟ್ಟಿಯೇ ಹೆಚ್ಚು ಹೈಲೆಟ್ ಆಗುತ್ತಿದ್ದಾರೆ.

  ಕೆಲವು ದಿನಗಳ ಹಿಂದಷ್ಟೆ ಶಮಿತಾ ಶೆಟ್ಟಿ ಬಿಗ್‌ಬಾಸ್ ಮನೆಯಲ್ಲಿ ಕಣ್ಣೀರು ಹಾಕಿದ್ದರು. 20 ವರ್ಷಗಳಿಂದ ಸಿನಿಮಾ ರಂಗದಲ್ಲಿದ್ದೀನಿ ಆದರೆ ನನ್ನ ಸಿನಿ ಪಯಣ ಬಹಳ ಕಠಿಣವಾಗಿತ್ತು. ಅದರಲ್ಲೂ ಅಕ್ಕನ ನೆರಳಿನಲ್ಲಿರುವುದು ಸುಲಭವಲ್ಲ. ಎಲ್ಲರೂ ಅಕ್ಕನೊಂದಿಗೆ ಹೋಲಿಸಿಯೇ ನನ್ನ ನೋಡುತ್ತಾರೆ. ಆದರೆ ನಾನು ನನ್ನ ಪ್ರತ್ಯೇಕ ಗುರುತನ್ನು ಸಂಪಾದಿಸಿಕೊಂಡಿದ್ದೇನೆ. ಅಂಥಹಾ ಅಕ್ಕನನ್ನು ಪಡೆಯಲು ನಾನು ಅದೃಷ್ಟ ಮಾಡಿದ್ದೇನೆ ಎಂದು ಹೇಳುತ್ತಾ ಕಣ್ಣೀರು ಹಾಕಿದ್ದರು. ಶಮಿತಾರನ್ನು ಸಮಾಧಾನ ಮಾಡಿದ ಕರಣ್ ಜೋಹರ್, ಈ ಬಿಗ್‌ಬಾಸ್ ಶೋ ಮೂಲಕ ಜನರು ನಿನ್ನನ್ನು ಇನ್ನೂ ಹೆಚ್ಚು ಅರಿತುಕೊಳ್ಳುತ್ತಾರೆ ಎಂದಿದ್ದರು.

  English summary
  Bigg Boss OTT: Kashmera Shah slams Akshara Singh for age shaming of Shamita Shetty.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X