For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್ ಬಳಿಕ ಸಾಯುವ ನಿರ್ಧಾರ ಮಾಡಿದ್ದೆ ಎಂದ ನೇಹಾ

  |

  ಹಿಂದಿ ಬಿಗ್​ ಬಾಸ್​ ಒಟಿಟಿ ಕಾರ್ಯಕ್ರಮಕ್ಕೆ ಅದ್ದೂರಿಯಾಗಿ ತೆರೆಬಿದ್ದಿದೆ. ಮೊದಲ ಬಾರಿಗೆ ಒಟಿಟಿಯಲ್ಲಿ ಬಿಗ್ ಬಾಸ್ ಶೋ ಆಯೋಜನೆ ಮಾಡಿದ್ದು, ಕರಣ್ ಜೋಹರ್ ಹೋಸ್ಟ್ ಮಾಡಿದ್ದರು. ಮೊದಲ ಒಟಿಟಿ ಬಿಗ್ ಬಾಸ್ ಶೋಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಂದಹಾಗೆ ಬಿಗ್​ ಬಾಸ್​ ಒಟಿಟಿ ಮುಗಿದು ಎರಡು-ಮೂರು ದಿನಗಳಾಗಿದೆ. ಆದರೂ ಸಹ ಸ್ಪರ್ಧಿಗಳ ಬಗ್ಗೆ ರೋಚಕ ಸುದ್ದಿಗಳು ಇನ್ನೂ ನಿಂತಿಲ್ಲ.

  ಈ ಶೋನಲ್ಲಿ ಸಿಕ್ಕಾಪಟ್ಟೆ ಬೋಲ್ಡ್​ ಸ್ಪರ್ಧಿ ಎನಿಸಿಕೊಂಡಿದ್ದ ಗಾಯಕಿ ನೇಹಾ ಭಾಸಿನ್​ ಅವರು ಬಿಗ್ ಬಾಸ್ ಮುಗಿಸಿ ವಾಪಸ್ ಬಂದ ಬಳಿಕ ಸಾಯುವ ಆಲೋಚನೆ ಮಾಡಿದ್ದರು ಎನ್ನುವ ಮಾಹಿತಿ ಬಹಿರಂಗವಾಗಿದೆ. ಅಷ್ಟಕ್ಕೂ ಈ ನಿರ್ಧಾರಕ್ಕೆ ಕಾರಣವಾಗಿದ್ದು ಬಿಗ್​ ಬಾಸ್​ ಮನೆಯಲ್ಲಿ ನಡೆದುಕೊಂಡ ರೀತಿ ಎನ್ನಲಾಗುತ್ತಿದೆ. ಬಿಗ್ ಮನೆಯಲ್ಲಿ ಇದ್ದಾಗ ಪುರಪುರುಷನ ಜೊತೆ ನಡೆಸಿದ ಲವ್ವಿ-ಡವ್ವಿಯೇ ಇಷ್ಟಕ್ಕೆಲ್ಲ ಕಾರಣ ಆಗಿದೆ. ಅವರ ಇಡೀ ಕುಟುಂಬವೇ ಈಗ ಟ್ರೋಲ್​ಗೆ ಒಳಗಾಗುತ್ತಿದೆ.

  ಕರಣ್​ ಜೋಹರ್ ನಡೆಸಿಕೊಟ್ಟಿದ್ದ ಬಿಗ್​ ಬಾಸ್ ಒಟಿಟಿ ಕಾರ್ಯಕ್ರಮದಲ್ಲಿ ನೇಹಾ ಭಾಸಿನ್​ ಹಲವು ಬಗೆಯ ಆಟ ಆಡಿದರು. ಟಾಸ್ಕ್​ ನಡೆಯುವಾಗ ಮಹಿಳಾ ಸ್ಪರ್ಧಿಯ ತುಟಿಗೆ ಕಿಸ್​ ಮಾಡಿ ಅವರು ಪ್ರೇಕ್ಷಕರ ಗಮನ ಸೆಳೆದಿದ್ದರು. ಬಳಿಕ ಪ್ರತೀಕ್​ ಸೆಹಜ್ಪಾಲ್​ ಜೊತೆ ಸೇರಿಕೊಂಡು ತುಂಬ ಬೋಲ್ಡ್​ ಆಗಿ ನಡೆದುಕೊಂಡರು. ಇದು ಬಹುತೇಕ ವೀಕ್ಷಕರಿಗೆ ಇಷ್ಟವಾಗಿರಲಿಲ್ಲ.

  ಸಂಗೀತ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಸಮೀರ್​ ಉದ್ದೀನ್​ ಜೊತೆ ಮದುವೆ ಆಗಿರುವ ನೇಹಾ ಭಾಸಿನ್​ ಅವರು ಇನ್ನೊಬ್ಬ ಪುರುಷನ ಜೊತೆ ಮಿತಿ ಮೀರಿ ವರ್ತಿಸಿದ್ದು ಅನೇಕರ ಅಸಮಾಧಾನಕ್ಕೆ ಕಾರಣ ಆಗಿದೆ. ಶೋ ಮುಗಿದ ಬಳಿಕ ನೇಹಾ ಮತ್ತು ಪ್ರತೀಕ್​ ಅವರನ್ನು ನೆಟ್ಟಿಗರು ಹಿಗ್ಗಾಮುಗ್ಗಾ ಟ್ರೋಲ್​ ಮಾಡುತ್ತಿದ್ದಾರೆ.

  ನೇಹಾ ಭಾಸಿನ್​ ಅವರನ್ನು ಟ್ರೋಲ್​ ಮಾಡುತ್ತಿರುವುದಕ್ಕೆ ಅವರ ಬಿಗ್​ ಬಾಸ್​ ಗೆಳೆಯ ಪ್ರತೀಕ್​ ಸೆಹಜ್ಪಾಲ್​ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅವರು ಕೂಡ ಸಾಮಾಜಿಕ ಜಾಲತಾಣದಲ್ಲಿ ಬೇಸರ ಹೊರ ಹಾಕಿದ್ದಾರೆ. "ನಿಮ್ಮೆಲ್ಲರಲ್ಲೂ ನಾನೊಂದು ಮನವಿ ಮಾಡಿಕೊಳ್ಳುತ್ತೇನೆ. ನೇಹಾ ಬಗ್ಗೆ ಯಾರೂ ಕೆಟ್ಟದಾಗಿ ಮಾತನಾಡಬೇಡಿ. ಅವರನ್ನು ದೂಷಿಸಬೇಡಿ. ಯಾಕೆಂದರೆ ಎಲ್ಲದರಲ್ಲೂ ನನ್ನ ಪಾಲು ಕೂಡ ಇದೆ. ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆಕೆ ನನಗೆ ಪ್ರಮಾಣಿಕ ಸ್ನೇಹಿತೆ ಆಗಿದ್ದರು" ಎಂದು ಪ್ರತೀಕ್​ ಸೆಹಜ್ಪಾಲ್ ಹೇಳಿದ್ದಾರೆ. ​

  English summary
  Bigg Boss OTT: Neha Bhasin says After Bigg Boss I wanted to die.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X