For Quick Alerts
  ALLOW NOTIFICATIONS  
  For Daily Alerts

  'ಡೈಪರ್ ಹಾಕ್ಕೋ, ನಾನು ಹೆದರಲ್ಲ..' ರಾಕೇಶ್ ಗೆ ಶಮಿತಾ ಶೆಟ್ಟಿ ಖಡಕ್ ವಾರ್ನಿಂಗ್

  |

  ಬಾಲಿವುಡ್ ಖ್ಯಾತ ನಿರ್ಮಾಪಕ, ನಿರ್ದೇಶಕ ಕರಣ್ ​ಜೋಹರ್​ ನಡೆಸಿಕೊಡುತ್ತಿರುವ ಹಿಂದಿ ಬಿಗ್​ಬಾಸ್​ ಒಟಿಟಿ ರಿಯಾಲಿಟಿ ಶೋ ಹೆಚ್ಚು ಗಮನ ಸೆಳೆಯುತ್ತಿದೆ. ಈ ಶೋನಲ್ಲಿ ನಟಿ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ ಹೆಚ್ಚು ಹೈಲೈಟ್​ಆಗುತ್ತಿದ್ದಾರೆ. ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರ ಜೈಲು ಸೇರಿದ ಬಳಿಕ ಶಮಿತಾ ಶೆಟ್ಟಿ ಬಿಗ್ ಬಾಸ್ ಗೆ ಎಂಟ್ರಿ ಕೊಡ್ತಾರೆ ಎನ್ನುವ ಸುದ್ದಿ ಕೇಳುತ್ತಿದ್ದಂತೆ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಾಗಿತ್ತು. ಇದೀಗ ಶಮಿತಾ ಬಿಗ್ ಬಾಸ್ ಮನೆಯೊಳಗೂ ಸಹ ಹೆಚ್ಚು ಆಕರ್ಷಣೆಯಾಗಿದ್ದಾರೆ. ಸಹ ಸ್ಪರ್ಧಿಗಳು ಶಮಿತಾ ವಿರುದ್ಧ ಸದಾ ಒಂದಲ್ಲೊಂದು ತಗಾದೆ ತೆಗೆದು ಜಗಳವಾಡುತ್ತಿದ್ದಾರೆ.

  ಟಾಸ್ಕ್ ಗಳ ವಿಚಾರಗಳಲ್ಲೂ ಶಮಿತಾ ಶೆಟ್ಟಿ ಪ್ರಬಲ ಸ್ಪರ್ಧಿಯಾಗಿದ್ದಾರೆ. ವೈಯಕ್ತಿಕ ಮತ್ತು ಗುಂಪು ಟಾಸ್ಕ್ ಗಳನ್ನು ಗಂಭೀರವಾಗಿ ಪರಿಗಣಿಸಿ ಆಡುತ್ತಿರುವ ಶಮಿತಾ ಹೆಚ್ಚು ಗಮನಸೆಳೆಯುತ್ತಿದ್ದಾರೆ. ಕಟ್ಟುನಿಟ್ಟಿನ ಸ್ಪರ್ಧಿಯಾಗಿರುವ ಶಮಿತಾ, ಸಹ ಸ್ಪರ್ಧಿ ರಾಕೇಶ್ ಬಾಪಟ್ ಅವರನ್ನು ಮೂತ್ರ ವಿಸರ್ಜನೆಗೆ ಹೋಗದಂತೆ ತಡೆದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಸದ್ಯ ಮನೆಯ ಕ್ಯಾಪ್ಟನ್ ಗಾಗಿ ಬಾಸ್ ಮ್ಯಾನ್ ಅಥವಾ ಬಾಸ್ ಲೇಡಿ ಟಾಸ್ಕ್ ನಡೆಯುತ್ತಿದೆ.

  ಈ ಟಾಸ್ಕ್ ನಲ್ಲಿ ಶಮಿತಾ ಶೆಟ್ಟಿ ಮತ್ತು ರಾಕೇಶ್ ಬಾಪಟ್ ಇಬ್ಬರು ಸಂಚಾಲಕರಾಗಿದ್ದಾರೆ. ರಾಕೇಶ್ ತನ್ನ ಕೆಲಸ ಬಿಟ್ಟು ಮಧ್ಯದಲ್ಲೇ ವಾಶ್ ರೂಮ್ ಗೆ ಹೋಗಿದ್ದರು. ಈ ಸಮಯದಲ್ಲಿ ಶಮಿತಾ ಟಾಸ್ಕ್ ನಡುವೆ ವಾಶ್ ರೂಮ್ ಗೆ ಹೋಗದಂತೆ ಗದರಿಸಿದ್ದಾರೆ. ಈ ಸಮಯದಲ್ಲಿ ಶಮಿತಾ ಸಹ ಸ್ಪರ್ಧಿ ರಾಕೇಶ್ ಗೆ "ಮೂತ್ರ ವಿಸರ್ಜನೆಗೆ ಹೋಗುವ ಹಾಗಿಲ್ಲ. ಇಲ್ಲ ಅಂದರೆ ಡೈಪರ್ ಹಾಕ್ಕೋ. ನಾನು ಇದಕ್ಕೆಲ್ಲ ಹೆದರಲ್ಲ" ಎಂದು ಖಡಕ್ ವಾರ್ನಿಂಗ್ ಮಾಡಿದ್ದಾರೆ.

  ಇದಕ್ಕೆ ಪ್ರತಿಯಾಗಿ ಸ್ಪರ್ಧಿ ರಾಕೇಶ್ ಆಯ್ಕೆ ಇದ್ದಿದ್ದರೇ ಖಂಡಿತ ಡೈಪರ್ ಹಾಕುತ್ತಿದ್ದೆ ಎಂದು ಶಮಿತಾಗೆ ಉತ್ತರಿಸಿದ್ದಾರೆ. ಈ ವಿಡಿಯೋ ಈ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅಂದಹಾಗೆ ಬಿಗ್ ಬಾಸ್ ಮನೆಯಲ್ಲಿ ಶಮಿತಾ ಶೆಟ್ಟಿ ಡೋಮಿನೇಟ್ ಮಾಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಪ್ರಬಲ ಸ್ಪರ್ಧಿಯಾಗಿರುವ ಶಮಿತಾ ವಿರುದ್ಧ ಅನೇಕ ಸ್ಪರ್ಧಿಗಳು ಕಿಡಿ ಕಾರುತ್ತಿದ್ದಾರೆ. ಶಮಿತಾ ಜೊತೆ ಜಗಳವಾಡುತ್ತಲೇ ಇರುತ್ತಾರೆ.

  ಇತ್ತೀಚಿಗ ವಯಸ್ಸಿನ ವಿಚಾರ ಇಟ್ಟುಕೊಂಡು ಶಮಿತಾಗೆ ಚುಚ್ಚು ಮಾತುಗಳನ್ನು ಆಡುತ್ತಿದ್ದರು. ಸ್ಪರ್ಧಿ ಅಕ್ಷರಾ ಸಿಂಗ್, ಶಮಿತಾಗೆ ತಾಯಿಯ ವಯಸ್ಸಾಗಿದೆ ಎಂದು ಆಡಿಕೊಳ್ಳುತ್ತಾ ನಕ್ಕಿದ್ದರು. ತಾಯಿಯ ವಯಸ್ಸಾಗಿದೆ ಎಂದು ನಗುತ್ತಾ ಇರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಡಿಯೋಗೆ ಅನೇಕರು ಕಾಮೆಂಟ್ ಮಾಡಿ, ಅಕ್ಷರಾ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದರು.

  ಈ ಬಗ್ಗೆ ಮಾಜಿ ಬಿಗ್ ಬಾಸ್ ಸ್ಪರ್ಧಿ ಕಶ್ಮೇರಾ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಅಕ್ಷರಾ ಹೇಳಿಕೆ ಬಗ್ಗೆ ಬೇಸರ ಹೊರಹಾಕಿದ್ದರು. "ಅಕ್ಷರಾ ಅವರೇ, ಶಮಿತಾ ಶೆಟ್ಟಿ ನಿಮ್ಮ ತಾಯಿಯ ವಸ್ಸಾಗಿದ್ದಾರೆ ನೀವು ನಿಮ್ಮ ಮನೆಯಲ್ಲಿಯೂ ನಿಮ್ಮ ತಾಯಿ ಜೊತೆ ಈ ರೀತಿ ಕಟ್ಟದಾಗಿ ಮಾತನಾಡುತ್ತೀರಾ ಎಂದು ನಾನು ತಿಳಿದುಕೊಳ್ಳಲು ಬಯಸುತ್ತೇನೆ. ಈಗ ನಿಮ್ಮ ನಡವಳಿಕೆ ಎಲ್ಲಿದೆ" ಎಂದು ಪ್ರಶ್ನೆ ಮಾಡಿದ್ದರು.

  ಕೆಲವು ದಿನಗಳ ಹಿಂದಷ್ಟೆ ಶಮಿತಾ ಶೆಟ್ಟಿ ಬಿಗ್‌ಬಾಸ್ ಮನೆಯಲ್ಲಿ ಕಣ್ಣೀರು ಹಾಕಿದ್ದರು. 20 ವರ್ಷಗಳಿಂದ ಸಿನಿಮಾ ರಂಗದಲ್ಲಿದ್ದೀನಿ ಆದರೆ ನನ್ನ ಸಿನಿ ಪಯಣ ಬಹಳ ಕಠಿಣವಾಗಿತ್ತು. ಅದರಲ್ಲೂ ಅಕ್ಕನ ನೆರಳಿನಲ್ಲಿರುವುದು ಸುಲಭವಲ್ಲ. ಎಲ್ಲರೂ ಅಕ್ಕನೊಂದಿಗೆ ಹೋಲಿಸಿಯೇ ನನ್ನ ನೋಡುತ್ತಾರೆ. ಆದರೆ ನಾನು ನನ್ನ ಪ್ರತ್ಯೇಕ ಗುರುತನ್ನು ಸಂಪಾದಿಸಿಕೊಂಡಿದ್ದೇನೆ. ಅಂಥಹಾ ಅಕ್ಕನನ್ನು ಪಡೆಯಲು ನಾನು ಅದೃಷ್ಟ ಮಾಡಿದ್ದೇನೆ ಎಂದು ಹೇಳುತ್ತಾ ಕಣ್ಣೀರು ಹಾಕಿದ್ದರು. ಶಮಿತಾರನ್ನು ಸಮಾಧಾನ ಮಾಡಿದ ಕರಣ್ ಜೋಹರ್, ಈ ಬಿಗ್‌ಬಾಸ್ ಶೋ ಮೂಲಕ ಜನರು ನಿನ್ನನ್ನು ಇನ್ನೂ ಹೆಚ್ಚು ಅರಿತುಕೊಳ್ಳುತ್ತಾರೆ ಎಂದಿದ್ದರು.

  English summary
  Bigg Boss OTT: Shamita Shetty says to rakesh bapat wear a diaper, I do not care.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X