For Quick Alerts
  ALLOW NOTIFICATIONS  
  For Daily Alerts

  ಆಗಸ್ಟ್‌ನಿಂದ ಬಾಲಿವುಡ್ ಸಿನಿಮಾಗಳು ದಿಢೀರನೆ ಒಟಿಟಿಯಲ್ಲಿ ರಿಲೀಸ್ ಆಗಲ್ಲ: 8 ವಾರ ಕಾಯ್ಬೇಕು!

  |

  ಕೋವಿಡ್‌ಗೂ ಮುನ್ನ ಚಿತ್ರಮಂದಿರಗಳು ತುಂಬಿ ತುಳುಕುತ್ತಿದ್ದವು. ಬಾಲಿವುಡ್‌ ಸಿನಿಮಾಗಳಿಗೆ ಬಾಕ್ಸಾಫೀಸ್‌ನಲ್ಲಿ ಬೇಜಾನ್ ಸದ್ದು ಮಾಡುತ್ತಿದ್ದವು. ಆದರೆ, ಕೊರೊನಾ ಎಂಟ್ರಿ ಕೊಟ್ಟಿದ್ದೇ ಕೊಟ್ಟಿದ್ದು ಬಾಲಿವುಡ್ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಲು ಆರಂಭಿಸಿದ್ದವು. ಈ ವೇಳೆ ಆದ ನಷ್ಟದಿಂದ ಹೊರಬರಲು ಬಾಲಿವುಡ್ ಇಂದಿಗೂ ಶತಪ್ರಯತ್ನ ಮಾಡುತ್ತಲೇ ಇದೆ.

  ಕೋವಿಡ್ ನಿಯಂತ್ರಣಕ್ಕೆ ಬಂದ ಬಳಿಕ ಬಾಲಿವುಡ್ ದಿಢೀರನೇ ಚೇತರಿಸಿಕೊಳ್ಳುತ್ತಿದೆ. ಬಾಕ್ಸಾಫೀಸ್‌ನಲ್ಲಿ ಒಂದೊಂದೇ ಸಿನಿಮಾಗಳು ಗೆಲ್ಲಲು ಆರಂಭಿಸಿವೆ. ಹೀಗಾಗಿ ಹೊಸ ರೂಲ್ಸ್ ಅನ್ನು ತರಲು ಬಾಲಿವುಡ್ ನಿರ್ಧರಿಸಿದ್ದೆ. ಒಟಿಟಿಯಲ್ಲಿ ದಿಢೀರನೇ ಸಿನಿಮಾ ರಿಲೀಸ್ ಮಾಡಬಾರದು ಎಂಬ ನಿರ್ಧಾರಕ್ಕೆ ಬಂದಿದೆ.

  ಕೋವಿಡ್ ಸಮಯದಲ್ಲಿ ಒಟಿಟಿ ವೇದಿಕೆಗಳು ಸಿನಿಮಾ ನಿರ್ಮಾಪಕರ ಕೈ ಹಿಡಿದಿದ್ದವು. ಆದರೆ, ಇನ್ನೊಂದು ಕಡೆ ಥಿಯೇಟರ್ ಮಾಲೀಕರು ಹಾಗೂ ಕಾರ್ಮಿಕರು ನಷ್ಟ ಅನುಭವಿಸುವಂತಾಗಿತ್ತು. ಈ ಕಾರಣಕ್ಕೆ ಬಾಲಿವುಡ್ ಮಂದಿನೇ ಹೊಸ ರೂಲ್ಸ್ ತರಲು ಮುಂದಾಗಿದ್ದಾರೆ.

  ಒಟಿಟಿಯಲ್ಲಿ 8 ವಾರಗಳ ಬಳಿಕ ರಿಲೀಸ್

  ಒಟಿಟಿಯಲ್ಲಿ 8 ವಾರಗಳ ಬಳಿಕ ರಿಲೀಸ್

  ಕೋವಿಡ್ ಬಳಿಕ ಥಿಯೇಟರ್‌ಗಳಿಗೆ ಜನರು ಬರುತ್ತಿದ್ದಾರೆ. ಶೇ.100ರಷ್ಟು ಪ್ರದರ್ಶನ ಕಾಣುತ್ತಿದೆ. ಈ ಕಾರಣಕ್ಕಾಗಿ ಹೆಚ್ಚೆಚ್ಚು ಸಿನಿಮಾಗಳು ಬಿಡುಗಡೆಯಾಗುತ್ತಿದೆ. ಆದರೆ, ಸಿನಿಮಾ ಬಿಡುಗಡೆಯಾದ ಕೆಲವೇ ದಿನಗಳಲ್ಲಿಯೇ ಒಟಿಟಿಗೆ ಲಗ್ಗೆ ಇಡುತ್ತಿದೆ. ಇದರಿಂದ ಥಿಯೇಟರ್ ಮಾಲೀಕರಿಗೆ ನಷ್ಟ ಆಗುತ್ತಿದೆ. ಕೊರೊನಾ ಸಮಯದಲ್ಲಿ ಜನರು ಥಿಯೇಟರ್‌ಗಳಿಗೆ ಬಾರದೇ ಇದ್ದಿದ್ದರಿಂದ ನಾಲ್ಕು ವಾರಗಳಿಗೆ ಒಟಿಟಿಯಲ್ಲಿ ಸಿನಿಮಾ ರಿಲೀಸ್ ಮಾಡುತ್ತಿದ್ದರು. ಆದ್ರೀಗ 8 ವಾರಗಳಾದ್ಮೇಲೆ ರಿಲೀಸ್ ಆಗ್ಬೇಕು ಎಂಬ ರೂಲ್ಸ್ ತರಲು ಮುಂದಾಗಿದ್ದಾರೆ.

  ಒಟಿಟಿ ರಿಲೀಸ್ 8 ವಾರಗಳ ಬಳಿಕ ಯಾಕೆ?

  ಒಟಿಟಿ ರಿಲೀಸ್ 8 ವಾರಗಳ ಬಳಿಕ ಯಾಕೆ?

  'ಕೆಜಿಎಫ್ 2' ಹಾಗೂ RRR ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ 1000 ಕೋಟಿ ಲೂಟಿ ಮಾಡಿವೆ. ಈ ಎರಡು ಸಿನಿಮಾಗಳನ್ನು ನೋಡಿಕೊಂಡು ಬಾಲಿವುಡ್‌ ನಿರ್ಮಾಪಕರು ಈ ನಿರ್ಧಾರಕ್ಕೆ ಬಂದಿದ್ದಾರೆ. ಅಲ್ಲದೆ 'ದಿ ಕಾಶ್ಮೀರ್ ಫೈಲ್ಸ್', 'ಭೂಲ್ ಭುಲಯ್ಯ 2' ಅಂತಹ ಸಿನಿಮಾಗಳೂ ಥಿಯೇಟರ್‌ನಿಂದ ಒಳ್ಳೆಯ ಕಲೆಕ್ಷನ್ ಮಾಡಿದೆ. ಈ ಕಾರಣಕ್ಕೆ ನಿರ್ಮಾಪಕರೆಲ್ಲಾ ಸೇರಿಕೊಂಡು ಒಟಿಟಿಗೆ 8 ವಾರಗಳ ಬಳಿಕ ಸಿನಿಮಾ ರಿಲೀಸ್ ಮಾಡ್ಬೇಕು ಎಂದು ನಿರ್ಧಾರ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ.

  ಆಗಸ್ಸ್ ತಿಂಗಳಿಂದಲೇ ಹೊಸ ರೂಲ್ಸ್

  ಆಗಸ್ಸ್ ತಿಂಗಳಿಂದಲೇ ಹೊಸ ರೂಲ್ಸ್

  ಆಗಸ್ಟ್ ತಿಂಗಳಿಂದಲೇ 8 ವಾರಗಳ ಬಳಿಕ ಒಟಿಟಿಯಲ್ಲಿ ಸಿನಿಮಾ ಬಿಡುಗಡೆ ಮಾಡುವ ನಿರ್ಧಾರ ಮಾಡಲಾಗಿದೆ. ಅಕ್ಷಯ್ ಕುಮಾರ್ ಅಭಿನಯದ 'ರಕ್ಷಾ ಬಂಧನ್', 'ಲಾಲ್ ಸಿಂಗ್ ಚಡ್ಡಾ', 'ಲೈಗರ್', 'ಬ್ರಹ್ಮಾಸ್ತ್ರ', ಸೇರಿದಂತೆ ಹಲವು ಬಿಗ್ ಸಿನಿಮಾಗಳು ಬಿಡುಗಡೆ ಸಜ್ಜಾಗಿವೆ. ಈ ಎಲ್ಲಾ ಸಿನಿಮಾಗಳು 8 ವಾರಗಳ ಬಳಿಕವೇ ಒಟಿಟಿಗೆ ಲಗ್ಗೆ ಇಡಲಿವೆ. ನಿರ್ಮಾಪಕರು ಹಾಗೂ ಪ್ರದರ್ಶಕರ ನಡುವಿನ ಈ ಒಪ್ಪಂದ ಹೇಗಿರುತ್ತೆ ಎಂದು ನೋಡಬೇಕಿದೆ.

  50 ದಿನಗಳ ಬಳಿಕ ರಿಲೀಸ್

  50 ದಿನಗಳ ಬಳಿಕ ರಿಲೀಸ್

  ಟಾಲಿವುಡ್‌ನಲ್ಲೂ ಸಿನಿಮಾ ಥಿಯೇಟರ್‌ನಲ್ಲಿ ಬಿಡುಗಡೆಗೊಂಡ 50 ದಿನಗಳ ಬಳಿಕ ಒಟಿಟಿಗೆ ರಿಲೀಸ್ ಆಗಬೇಕು ಎಂಬ ರೂಲ್ಸ್ ತಂದಿದ್ದರು. ಆ ಬಳಿಕ ಈಗ ಬಾಲಿವುಡ್‌ ಕೂಡ ಅದೇ ನಿರ್ಧಾರಕ್ಕೆ ಬಂದಿದೆ. ಟಾಲಿವುಡ್ ಹಾಗೂ ಬಾಲಿವುಡ್ ನೋಡಿ ಉಳಿದ ಚಿತ್ರರಂಗ ಕೂಡ ಇದೇ ನಿರ್ಧಾರ ಕೈಗೊಳ್ಳುತ್ತಾ? ಒಟಿಟಿ ವೇದಿಕೆಗಳ ನಿರ್ಧಾರವೇನು? ಅನ್ನುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

  English summary
  Bollywood Movies Will Release On OTT only after completing 8 weeks in Theatres From August, Know More.
  Saturday, July 9, 2022, 9:35
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X