For Quick Alerts
  ALLOW NOTIFICATIONS  
  For Daily Alerts

  "ಶಿವ ಶಿವ ಅಂತ ಕಿರುಚಿ ಆಲಿಯಾ ಸುಸ್ತಾದ್ಲು.. 'ಬ್ರಹ್ಮಾಸ್ತ್ರ'ವೇ ನಮಗೆ ಜೀವನ ಅಲ್ಲ": ಪ್ರಚಾರಕ್ಕೆ ರಣ್‌ಬೀರ್ ಹಿಂದೇಟು!

  |

  ಅಯಾನ್ ಮುಖರ್ಜಿ ನಿರ್ದೇಶನದ 'ಬ್ರಹ್ಮಾಸ್ತ್ರ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ್ದು ಗೊತ್ತೇಯಿದೆ. ಇದೀಗ ಸಿನಿಮಾ ಓಟಿಟಿಗೆ ಬರೋಕೆ ಮುಹೂರ್ತ ಫಿಕ್ಸ್ ಆಗಿದೆ. ಆದರೆ ಪ್ರಮೋಷನ್‌ ಮಾಡೋದಕ್ಕೆ ಮಾತ್ರ ರಣ್‌ಬೀರ್ ಕಪೂರ್ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ.

  ಈ ವರ್ಷ ಬಾಲಿವುಡ್‌ನಲ್ಲಿ ಒಂದು ರೇಂಜಿಗೆ ಸದ್ದು ಮಾಡಿದ ಸಿನಿಮಾ ಅಂದರೆ ಅದು 'ಬ್ರಹ್ಮಾಸ್ತ್ರ'. ಸತತ ಸೋಲುಗಳಿಂದ ಕಂಗೆಟ್ಟಿದ್ದ ಚಿತ್ರಕ್ಕೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತವಾಗಿತ್ತು. 8000ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿದ್ದ ಸಿನಿಮಾ 400 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. ನಿರ್ದೇಶಕ ಎಸ್.ಎಸ್ ರಾಜಮೌಳಿ ಕೂಡ ಚಿತ್ರಕ್ಕೆ ಬೆಂಬಲವಾಗಿ ನಿಂತಿದ್ದರು. ಪರಿಣಾಮ ದಕ್ಷಿಣ ಭಾರತದಲ್ಲೂ ಸಿನಿಮಾ ಒಂದು ರೇಂಜಿಗೆ ಸದ್ದು ಮಾಡಿತ್ತು. ರಣ್‌ಬೀರ್ ಕಪೂರ್ ಜೊತೆಗೆ ಆಲಿಯಾ ಭಟ್, ಅಮಿತಾಬ್ ಬಚ್ಚನ್, ನಾಗಾರ್ಜುನ, ಮೌನಿ ರಾಯ್ ಚಿತ್ರದಲ್ಲಿ ತಾರಾಗಣದಲ್ಲಿ ಇದ್ದಾರೆ.

  ಬಾಲಿವುಡ್‌ನಲ್ಲಿ ಈ ವರ್ಷ ಭಾರೀ ಸದ್ದು ಮಾಡಿದ 'ಬ್ರಹ್ಮಾಸ್ತ್ರ' ಓಟಿಟಿ ರಿಲೀಸ್ ಡೇಟ್ ಫಿಕ್ಸ್!ಬಾಲಿವುಡ್‌ನಲ್ಲಿ ಈ ವರ್ಷ ಭಾರೀ ಸದ್ದು ಮಾಡಿದ 'ಬ್ರಹ್ಮಾಸ್ತ್ರ' ಓಟಿಟಿ ರಿಲೀಸ್ ಡೇಟ್ ಫಿಕ್ಸ್!

  ಸೆಪ್ಟೆಂಬರ್ 9ರಂದು ತೆರೆಗೆ ಬಂದಿದ್ದ 'ಬ್ರಹ್ಮಾಸ್ತ್ರ' ಸಿನಿಮಾ ಮಿಶ್ರ ಪ್ರತಿಕ್ರಿಯೆ ನಡುವೆಯೂ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿತ್ತು. ಚಿತ್ರದ ಮೊದಲ ಭಾಗ ಸಕ್ಸಸ ನಂತರ ಸೆಕೆಂಡ್ ಪಾರ್ಟ್ ಯಾವಾಗ ಬರುತ್ತೆ ಎನ್ನುವ ಕುತೂಹಲ ಮೂಡಿದೆ. ಅದಕ್ಕೂ ಮುನ್ನ ಸಿನಿಮಾ ಸ್ಮಾಲ್ ಸ್ಕ್ರೀನ್‌ಗೆ ಎಂಟ್ರಿ ಕೊಡುತ್ತಿದೆ.

  ಪ್ರಚಾರಕ್ಕೆ ರಣ್‌ಬೀರ್ ಹಿಂದೇಟು!

  ಪ್ರಚಾರಕ್ಕೆ ರಣ್‌ಬೀರ್ ಹಿಂದೇಟು!

  'ಬ್ರಹ್ಮಾಸ್ತ್ರ' ಚಿತ್ರಕ್ಕಾಗಿ ದೊಡ್ಡಮಟ್ಟದಲ್ಲಿ ಪ್ರಚಾರ ಮಾಡಲಾಗಿತ್ತು. ರಣ್‌ಬೀರ್, ಆಲಿಯಾ ಭಟ್, ರಾಜಮೌಳಿ ನಾನಾ ನಗರಗಳಿಗೆ ಭೇಟಿ ನೀಡಿ ಸಿನಿಮಾ ಪ್ರಚಾರ ಮಾಡಿದ್ದರು. ಇದೀಗ ಸಿನಿಮಾ ಓಟಿಟಿಗೆ ಬರ್ತಿದೆ ಎಂದು ಮತ್ತೆ ಪ್ರಚಾರ ಕಷ್ಟ ಎಂದಿದ್ದಾರೆ ರಣ್‌ಬೀರ್ ಕಪೂರ್. ಯಾರೋ ಫೋನ್ ಮಾಡಿ ಪ್ರಚಾರಕ್ಕೆ ಬರುವಂತೆ ರಣ್‌ಬೀರ್‌ ಕೇಳ್ತಾರೆ. ಇದಕ್ಕೆ ಗರಂ ಆದ ನಟ "ಮತ್ತೆ ಪ್ರಚಾರನಾ..? ನನ್ನಿಂದ ಸಾಧ್ಯವಿಲ್ಲ. ಇದರಿಂದ ನಾನು ಈಗಾಗಲೇ ಸುಸ್ತಾಗಿದ್ದೀನಿ. ಶಿವ ಶಿವ ಎಂದು ಕಿರುಚಿ ಆಲಿಯಾ ಗಂಟಲು ಹೋಯ್ತು. ಲೈಟ್ ಬರುತ್ತೆ.. ಲೈಟ್ ಬರುತ್ತೆ ಎಂದು ತಿರುಗಾಡಿದ್ವಿ. ಈಗ ಬ್ರಹ್ಮಾಸ್ತ್ರ ಹಾಟ್‌ಸ್ಟಾರ್‌ನಲ್ಲಿ ಬರುತ್ತೆ ಎಂದು ಹೇಳಬೇಕಾ?" ಎಂದಿದ್ದಾರೆ.

  ನನಗೆ 'ಬ್ರಹ್ಮಾಸ್ತ್ರ'ವೇ ಜೀವನನಾ?

  ನನಗೆ 'ಬ್ರಹ್ಮಾಸ್ತ್ರ'ವೇ ಜೀವನನಾ?

  "ನನಗೆ ಬ್ರಹ್ಮಾಸ್ತ್ರನೇ ಜೀವನನಾ? ನಮಗೆ ಹಬ್ಬಗಳು ಇರುವುದಿಲ್ಲವಾ? ನಾನಂತೂ ಪ್ರಚಾರಕ್ಕೆ ಬರುವುದಿಲ್ಲ. ಆ ಅಯಾನ್ ನಮ್ಮನ್ನು ಹಬ್ಬ ಮಾಡಿಕೊಳ್ಳುವುದಕ್ಕೂ ಬಿಡುವುದಿಲ್ಲವಾ? ಎಂದು ರಣ್‌ಬೀರ್ ಕಪೂರ್ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ಆದರೆ ಇದೆಲ್ಲಾ ಸಿನಿಮಾ ಪ್ರಚಾರಕ್ಕೆ ಮಾಡಿರುವ ಗಿಮಿಕ್ ಎನ್ನುವುದು ಗೊತ್ತಾಗ್ತಿದೆ. ಫನ್ನಿಯಾಗಿ ಇಂತಾದೊಂದು ವಿಡಿಯೋ ಮಾಡಿ ಟೀಂ ವೀಕ್ಷಕರನ್ನು ಸೆಳೆಯುವ ಪ್ರಯತ್ನ ಮಾಡಿದೆ.

  ನವೆಂಬರ್ 4ಕ್ಕೆ ಓಟಿಟಿಗೆ 'ಬ್ರಹ್ಮಾಸ್ತ್ರ'

  ನವೆಂಬರ್ 4ಕ್ಕೆ ಓಟಿಟಿಗೆ 'ಬ್ರಹ್ಮಾಸ್ತ್ರ'

  ಫನ್ನಿ ವಿಡಿಯೋ ಮುಂದುವರೆದಂತೆ ನಿರ್ದೇಶಕ ಅಯಾನ್ ಮುಖರ್ಜಿ ಫೋನ್ ಮಾಡುತ್ತಾರೆ. ಕೂಡಲೇ ರಣ್‌ಬೀರ್, ಪ್ರಮೋಷನ್ನಾ "ಓಕೆ ಮಾಡೋಣ ಎಂದು ಇಂದು ದಿಂಬಿನಿಂದ ತಲೆ ಚಚ್ಚಿಕೊಳ್ಳುವಂತೆ ಫನ್ನಿ ವಿಡಿಯೋ ಮಾಡಿ ತೇಲಿ ಬಿಟ್ಟಿದ್ಧಾರೆ. ಚಿತ್ರಕ್ಕಾಗಿ ಸಾಕಷ್ಟು ಪ್ರಚಾರ ಮಾಡಲಾಗಿತ್ತು. ಮತ್ತೆ ಪ್ರಚಾರ ಎಂದರೆ ಚಿತ್ರತಂಡಕ್ಕೂ ಕಸಿವಿಸಿ. ನೋಡುವವರಿಗೂ ಕಸಿವಿಸಿ. ಅದನ್ನೇ ಫನ್ನಿಯಾಗಿ ಈ ರೀತಿ ವಿಡಿಯೋ ಮಾಡಿ ರಣ್‌ಬೀರ್ ಹೇಳಿದ್ದಾರೆ.

  ಬಾಕ್ಸಾಫೀಸ್‌ನಲ್ಲಿ 'ಬ್ರಹ್ಮಾಸ್ತ್ರ' ಆರ್ಭಟ

  ಬಾಕ್ಸಾಫೀಸ್‌ನಲ್ಲಿ 'ಬ್ರಹ್ಮಾಸ್ತ್ರ' ಆರ್ಭಟ

  400 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿ 'ಬ್ರಹ್ಮಾಸ್ತ್ರ' ಚಿತ್ರದ ಮೊದಲ ಭಾಗ ಸದ್ದು ಮಾಡಿದೆ. ಫಸ್ಟ್‌ ಡೇ 75 ಕೋಟಿ ರೂ.ಗೂ ಹೆಚ್ಚು ಗ್ರಾಸ್ ಕಲೆಕ್ಷನ್ ಮಾಡಿ ಸಿನಿಮಾ ಭರ್ಜರಿ ಓಪನಿಂಗ್ ಪಡೆದುಕೊಂಡಿತ್ತು. ಇನ್ನು 2 ದಿನಕ್ಕೆ ಗಳಿಕೆ 160 ಕೋಟಿ ರೂ. ಆಗಿತ್ತು. ಇತ್ತೀಚೆಗೆ 25 ದಿನಕ್ಕೆ 425 ಕೋಟಿ ರೂ. ಕಲೆಕ್ಷನ್ ಮಾಡಿರುವುದಾಗಿ ಘೋಷಿಸಿತ್ತು. 3D ಹಾಗೂ ಐಮ್ಯಾಕ್ಸ್ 3D ವರ್ಷನ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ರಿಲೀಸ್‌ಗೂ ಮೊದಲು ಬಾಯ್‌ಕಾಟ್ ಬಿಸಿ ಚಿತ್ರಕ್ಕೆ ತಟ್ಟಿತ್ತು. ಆದರೆ ಕೊನೆ ಹಂತದಲ್ಲಿ ಪ್ರೇಕ್ಷಕರು ಸಿನಿಮಾ ನೋಡಲು ಒಲವು ತೋರಿಸಿದ್ದರು.

  English summary
  Brahmastra OTT release date Ranbir Kapoor is irritated with more promotions. actor complains about Brahmastra promotions in hilarious video Goes Viral. Know More.
  Thursday, October 27, 2022, 13:06
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X