twitter
    For Quick Alerts
    ALLOW NOTIFICATIONS  
    For Daily Alerts

    ಒಟಿಟಿ ಕಂಟೆಂಟ್ ಮೇಲೆ ಸೆನ್ಸಾರ್: ಹೈಕೋರ್ಟ್ ಆದೇಶ ಎತ್ತಿಹಿಡಿದ ಸುಪ್ರೀಂ

    |

    ಕೆಲವೇ ವರ್ಷಗಳಲ್ಲಿ ಬೃಹತ್ ಆಗಿ ಬೆಳೆದು, ಚಿತ್ರಮಂದಿರಗಳಿಗೆ ಪ್ರಬಲ ಪೈಪೋಟಿ ನೀಡುತ್ತಿರುವ ಒಟಿಟಿಗಳ ಕುರಿತಂತೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪೊಂದನ್ನು ನೀಡಿದೆ.

    ಕೋವಿಡ್ ಸಮಯದಲ್ಲಿ ಒಟಿಟಿ ಪ್ರವರ್ಧಮಾನಕ್ಕೆ ಬರುತ್ತಲೇ, ಒಟಿಟಿಯಲ್ಲಿ ಪ್ರಸಾರವಾಗುವ ಕಂಟೆಂಟ್‌ಗಳ ಮೇಲೆ ನಿಯಂತ್ರಣ ಹೇರಬೇಕು, ಸಿನಿಮಾಗಳಿಗೆ ಇದ್ದಂತೆ ಅದಕ್ಕೂ ಸೆನ್ಸಾರ್ ಇರಬೇಕು ಎಂಬ ವಾದ ಕೇಳಿಬಂದಿತ್ತು.

    ಆ ನಂತರ ಒಟಿಟಿಗಳ ವೆಬ್ ಸರಣಿ, ಸಿನಿಮಾಗಳಲ್ಲಿ ಅಶ್ಲೀಲತೆ, ಧಾರ್ಮಿಕ ವಿಷಯಗಳ ಚರ್ಚೆ ಇನ್ನಿತರೆಗಳು ಹೆಚ್ಚಾದಾಗ ಈ ಕೂಗು ಹೆಚ್ಚಾಗಿ. ಸರ್ಕಾರವೂ ಸಹ ಈ ಬಗ್ಗೆ ನಿಯಮವೊಂದನ್ನು ರೂಪಿಸಿತ್ತು. ಬಳಿಕ ಒಟಿಟಿ ಯಲ್ಲಿ ಪ್ರಸಾರವಾಗುವ ಕಂಟೆಂಟ್‌ಗೆ ಸೆನ್ಸಾರ್ ಶಿಪ್‌ ಇರಬೇಕೆಂದು, ಒಟಿಟಿಯಲ್ಲಿ ಯಾವುದೇ ಸಿನಿಮಾ, ವೆಬ್ ಸರಣಿಗಳು ಬಿಡುಗಡೆ ಆಗುವ ಮುನ್ನ ಕಮಿಟಿಯೊಂದಕ್ಕೆ ತೋರಿಸಬೇಕು ಎಂದು ಮಿರ್ಜಾಪುರದ ಸುಜೀತ್ ಕುಮಾರ್ ಸಿಂಗ್ ಎಂಬುವರು ಹೈಕೋರ್ಟ್ ಮೆಟ್ಟಿಲೇರಿದ್ದರು.

    Censorship On OTT Content: Supreme Court Dismiss The Petition

    ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಒಟಿಟಿಯಲ್ಲಿ ಬಿಡುಗಡೆ ಆಗುವ ಕಂಟೆಂಟ್ ಅನ್ನು ಮೊದಲಿಗೆ ಕಮಿಟಿಗೆ ತೋರಿಸುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟಿತ್ತು. ಹಾಗೂ ಅರ್ಜಿದಾರರು ಮನವಿ ಮಾಡಿದಂತೆ 'ಮಿರ್ಜಾಪುರ 2' ವೆಬ್ ಸರಣಿಯನ್ನು ಬ್ಯಾನ್ ಮಾಡುವುದಕ್ಕೂ ಒಪ್ಪಿಗೆ ನೀಡಿರಲಿಲ್ಲ. ಹೈಕೋರ್ಟ್‌ನ ಈ ತೀರ್ಪಿನ ವಿರುದ್ಧ ಸುಜೀತ್ ಕುಮಾರ್ ಸಿಂಗ್ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

    ಮೇಲ್ಮನವಿ ಅರ್ಜಿಯನ್ನು ತಳ್ಳಿ ಹಾಕಿರುವ ಸುಪ್ರೀಂಕೋರ್ಟ್, ಪ್ರಕರಣದಲ್ಲಿ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಎತ್ತಿ ಹಿಡಿದಿದೆ.

    ಸಿನಿಮಾಗಳಿಗೆ ಇರುವಂತೆ ಒಟಿಟಿಯಲ್ಲಿ ಪ್ರಸಾರವಾಗುವ ಯಾವುದೇ ವೆಬ್ ಸರಣಿ, ಸಿನಿಮಾಗಳಿಗೆ ಸೆನ್ಸಾರ್ ಇರುವುದಿಲ್ಲ. ಇದನ್ನೇ ಇಟ್ಟುಕೊಂಡು ಮ್ಯಾಕ್ಸ್ ಪ್ಲೇಯರ್, ಟಕಾ-ಟಕ್ ಇನ್ನಿತರೆ ಒಟಿಟಿಗಳು ವೈಯಸ್ಕರ ಸಿನಿಮಾ, ವೆಬ್ ಸರಣಿಗಳನ್ನು ಪ್ರಸಾರ ಮಾಡುತ್ತಿವೆ. ಇನ್ನು ಕೆಲವು ವೆಬ್ ಸರಣಿಗಳಲ್ಲಿ ಧರ್ಮದ ಸೂಕ್ಷ್ಮ ವಿಚಾರಗಳ ಬಗ್ಗೆ ತೋರಿಸಲಾಗುತ್ತಿದೆ.

    English summary
    Censorship on OTT content: Supreme Court dismiss the petition. Previous Apex court said OTT content can not be censored.
    Friday, October 14, 2022, 22:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X