For Quick Alerts
  ALLOW NOTIFICATIONS  
  For Daily Alerts

  ಬಾಕ್ಸಾಫೀಸ್‌ನಲ್ಲಿ 'ಗಾಡ್‌ಫಾದರ್' ಕಥೆ ಏನಾಯ್ತು? ಓಟಿಟಿ ರಿಲೀಸ್ ಡೇಟ್ ಫಿಕ್ಸ್: ಎಲ್ಲಿ, ಯಾವಾಗ?

  |

  ಮೆಗಾಸ್ಟಾರ್ ಚಿರಂಜೀವಿ ಹಾಗೂ ಸಲ್ಮಾನ್ ಖಾನ್ ನಟನೆಯ 'ಗಾಡ್‌ಫಾದರ್' ಸಿನಿಮಾ ದಸರಾ ಸಂಭ್ರಮದಲ್ಲಿ ತೆರೆಗೆ ಬಂದಿತ್ತು. ಮಿಶ್ರಪ್ರತಿಕ್ರಿಯೆ ಪಡೆದುಕೊಂಡಿದ್ದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆಲ್ತಾ ಇಲ್ಲ ನಷ್ಟ ಅನುಭವಿಸಿತ್ತಾ ಎನ್ನುವುದರ ಮಾಹಿತಿ ಸಿಗಲಿಲ್ಲ. ಆದರೆ ಈಗ ಸಿನಿಮಾ ಓಟಿಟಿ ರಿಲೀಸ್ ಡೇಟ್ ಕನ್ಫರ್ಮ್ ಆಗಿದೆ.

  ಮೋಹನ್ ರಾಜಾ ನಿರ್ದೇಶನದ ಪೊಲಿಟಿಕಲ್ ಆಕ್ಷನ್ ಥ್ರಿಲ್ಲರ್ ಸಿನಿಮಾ 'ಗಾಡ್‌ಫಾದರ್'. ಮಲಯಾಳಂನ 'ಲೂಸಿಫರ್' ಕಥೆ ಆಧರಿಸಿ ಸಾಕಷ್ಟು ಬದಲಾವಣೆ ಮಾಡಿಕೊಂಡು ಚಿತ್ರವನ್ನು ತೆಲುಗು ಪ್ರೇಕ್ಷಕರ ಮುಂದೆ ತರಲಾಗಿತ್ತು. ಎಸ್‌. ತಮನ್ ಮ್ಯೂಸಿಕ್ ಚಿತ್ರದ ಮತ್ತೊಂದು ಹೈಲೆಟ್ ಆಗಿತ್ತು. ಸಲ್ಮಾನ್ ಖಾನ್ ಕೂಡ ಚಿರು ಜೊತೆ ಕೈ ಜೋಡಿಸಿದ್ದು, ಸಹಜವಾಗಿಯೇ ಸಿನಿಮಾ ಬಗ್ಗೆ ಹೈಪ್ ಕ್ರಿಯೇಟ್ ಆಗುವಂತೆ ಮಾಡಿತ್ತು. ಸೂಪರ್ ಗುಡ್ ಫಿಲ್ಮ್ಸ್ ಜೊತೆ ಸೇರಿ ರಾಮ್‌ ಚರಣ್ ಈ ಸಿನಿಮಾ ನಿರ್ಮಾಣ ಮಾಡಿದ್ದರು.

  'ವಾಲ್ತೇರು ವೀರಯ್ಯ' ಕ್ರೇಜ್: 6000 ವಿದ್ಯಾರ್ಥಿಗಳಿಂದ ಚಿರಂಜೀವಿಗೆ ಮೆಗಾ ಟ್ರಿಬ್ಯೂಟ್!'ವಾಲ್ತೇರು ವೀರಯ್ಯ' ಕ್ರೇಜ್: 6000 ವಿದ್ಯಾರ್ಥಿಗಳಿಂದ ಚಿರಂಜೀವಿಗೆ ಮೆಗಾ ಟ್ರಿಬ್ಯೂಟ್!

  ನೆಟ್‌ಫ್ಲಿಕ್ಸ್ ಸಂಸ್ಥೆ ಭಾರೀ ಮೊತ್ತಕ್ಕೆ 'ಗಾಡ್‌ಫಾದರ್' ಡಿಜಿಟಲ್ ರೈಟ್ಸ್ ಕೊಂಡುಕೊಂಡಿತ್ತು. ಸಲ್ಮಾನ್ ಖಾನ್ ಕೂಡ ಚಿತ್ರದಲ್ಲಿ ನಟಿಸಿರೋದ್ರಿಂದ ಹಿಂದಿಗೂ ಡಬ್ ಆಗಿ ಸಿನಿಮಾ ಪ್ರೇಕ್ಷಕರ ಮುಂದೆ ಬಂದಿತ್ತು. 2 ಭಾಷೆಯ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ.

  ನ.19ಕ್ಕೆ ಓಟಿಟಿಗೆ 'ಗಾಡ್‌ಫಾದರ್'

  ನ.19ಕ್ಕೆ ಓಟಿಟಿಗೆ 'ಗಾಡ್‌ಫಾದರ್'

  ಇಷ್ಟು ದಿನ ಅಂತರಾಷ್ಟ್ರೀಯ ಕಂಟೆಂಟ್‌ನ ಮಾತ್ರ ಗಣನೆಗೆ ತೆಗೆದುಕೊಳ್ಳುತ್ತಿದ್ದ ನೆಟ್‌ಫ್ಲಿಕ್ಸ್ ನಿಧಾನವಾಗಿ ದಕ್ಷಿಣ ಭಾರತದ ಸಿನಿಮಾಗಳನ್ನು ಕೊಂಡುಕೊಳ್ಳುತ್ತಿದೆ. ನವೆಂಬರ್ 19ಕ್ಕೆ ಸ್ಮಾಲ್‌ಸ್ಕ್ರೀನ್‌ನಲ್ಲಿ 'ಗಾಡ್‌ಫಾದರ್' ಆರ್ಭಟ ಶುರುವಾಗಲಿದೆ. ಚಿರು ಜೊತೆಗಿನ ಸ್ನೇಹಕ್ಕಾಗಿ ಸಲ್ಮಾನ್ ಖಾನ್ ಮೊದಲ ಬಾರಿಗೆ ದಕ್ಷಿಣ ಭಾರತ ಚಿತ್ರದಲ್ಲಿ ನಟಿಸಿದ್ದರು. ಇವರಿಬ್ಬರ ಕಾಂಬಿನೇಷನ್ ಭಾರೀ ಕುತೂಹಲ ಕೆರಳಿಸಿತ್ತು. ಅದಕ್ಕೆ ತಕ್ಕಂತೆ ಓಪನಿಂಗ್ ಸಿಕ್ಕಿತ್ತು.

  'ವೀರಯ್ಯ' Vs 'ವೀರಸಿಂಹ': ಸಂಕ್ರಾಂತಿ ಸಂಭ್ರಮದಲ್ಲಿ 9ನೇ ಬಾರಿ ಚಿರು- ಬಾಲಯ್ಯ ಮಧ್ಯೆ ಫೈಟ್!'ವೀರಯ್ಯ' Vs 'ವೀರಸಿಂಹ': ಸಂಕ್ರಾಂತಿ ಸಂಭ್ರಮದಲ್ಲಿ 9ನೇ ಬಾರಿ ಚಿರು- ಬಾಲಯ್ಯ ಮಧ್ಯೆ ಫೈಟ್!

  ಮಾಲಿವುಡ್ 'ಲೂಸಿಫರ್' ರೀಮೆಕ್

  ಮಾಲಿವುಡ್ 'ಲೂಸಿಫರ್' ರೀಮೆಕ್

  3 ವರ್ಷಗಳ ಹಿಂದೆ ಮಲಯಾಳಂನಲ್ಲಿ 'ಲೂಸಿಫರ್' ಸಿನಿಮಾ ಸೂಪರ್ ಹಿಟ್ ಆಗಿತ್ತು. ಪೃಥ್ವಿರಾಜ್ ಸುಕುಮಾರನ್ ನಿರ್ದೇಶಿಸಿ ನಟಿಸಿದ್ದ ಚಿತ್ರದಲ್ಲಿ ಮೋಹನ್ ಲಾಲ್ ಲೀಡ್‌ ರೋಲ್‌ನಲ್ಲಿ ಮಿಂಚಿದ್ದರು. ಚಿತ್ರ ತೆಲುಗಿಗೂ ಡಬ್ ಆಗಿ ಬಂದಿತ್ತು. ಆದರೂ ಕೂಡ ಈ ಚಿತ್ರವನ್ನು ತೆಲುಗಿಗೆ ರೀಮೆಕ್ ಮಾಡುವ ಪ್ರಯತ್ನ ಮಾಡಿದ್ದರು ಚಿರಂಜೀವಿ. ಇದನ್ನು ನೋಡಿ ಕೆಲವರು ತಮಾಷೆ ಮಾಡಿದ್ದರು. ಇನ್ನು ಟೀಸರ್, ಪೋಸ್ಟರ್, ಟ್ರೈಲರ್ ಎಲ್ಲದನ್ನು ಮೂಲ ಸಿನಿಮಾ ಜೊತೆಗೆ ಹೋಲಿಸಿ ಗೇಲಿ ಮಾಡಿದ್ದರು. ಆದರೆ 'ಗಾಡ್‌ಫಾದರ್' ಸಿನಿಮಾ ನೋಡಿದ ಪ್ರೇಕ್ಷಕರು ಮೆಚ್ಚಿಕೊಂಡಿದ್ದರು.

  ಬಾಕ್ಸಾಫೀಸ್‌ ರಿಸಲ್ಟ್ ಏನಾಯ್ತು?

  ಬಾಕ್ಸಾಫೀಸ್‌ ರಿಸಲ್ಟ್ ಏನಾಯ್ತು?

  ಅಕ್ಟೋಬರ್ 5ರಂದು 'ಗಾಡ್‌ಫಾದರ್' ಸಿನಿಮಾ ರಿಲೀಸ್ ಆಗಿತ್ತು. ಅದೇ ದಿನ ನಾಗಾರ್ಜುನ ನಟನೆಯ 'ದಿ ಘೋಸ್ಟ್' ಸಿನಿಮಾ ಕೂಡ ಪ್ರೇಕ್ಷಕರ ಮುಂದೆ ಬಂದಿತ್ತು. ಮೆಗಾಸ್ಟಾರ್ ಆರ್ಭಟದ ಎದುರು ಕಿಂಗ್ ನಾಗಾರ್ಜುನ ಹವಾ ನಡೆಯಲೇ ಇಲ್ಲ. ಆದರೆ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. ಸದ್ಯ ಸಿನಿಮಾ ಇವತ್ತಿಗೂ ಕೆಲವೆಡೆ ಪ್ರದರ್ಶನ ಕಾಣುತ್ತಿದೆ. ಚಿತ್ರತಂಡ ಸಕ್ಸಸ್ ಮೀಟ್ ಕೂಡ ಮಾಡಿ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿತ್ತು. ಆದರೆ ಕಲೆಕ್ಷನ್ ಬಗ್ಗೆ ಸರಿಯಾದ ಮಾಹಿತಿ ಸಿಗಲೇಯಿಲ್ಲ. ಕೆಲವರು ಸಿನಿಮಾ ಸೂಪರ್ ಹಿಟ್ ಅಂದರೆ ಮತ್ತೆ ಕೆಲವರು ಫ್ಲಾಪ್ ಎನ್ನುತ್ತಿದ್ದಾರೆ.

  ಹೊಸ ಅವತಾರದಲ್ಲಿ ಚಿರು ಅಬ್ಬರ

  ಹೊಸ ಅವತಾರದಲ್ಲಿ ಚಿರು ಅಬ್ಬರ

  ಬಹುಕೋಟಿ ವೆಚ್ಚದ ಅದ್ಧೂರಿ ಸಿನಿಮಾ 'ಗಾಡ್‌ಫಾದರ್'. ಚಿರಂಜೀವಿ, ಸಲ್ಮಾನ್ ಖಾನ್ ಜೊತೆಗೆ ನಯನತಾರಾ, ಸತ್ಯದೇವ್, ಸಮುದ್ರ ಖನಿ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. 'ಆಚಾರ್ಯ' ಸೋಲಿನ ಕಹಿ ಉಂಡಿದ್ದ ಚಿರಂಜೀವಿ ಒಂದು ರೇಂಜಿಗೆ ಪ್ರೇಕ್ಷಕರನ್ನು ರಂಜಿಸುವಲ್ಲಿ ಸಕ್ಸಸ್ ಕಂಡಿದ್ದರು. ಮೋಹನ್‌ಲಾಲ್‌ ಲುಕ್‌ನ ಯಥಾವತ್ ಕಾಪಿ ಮಾಡದೇ ಬಹಳ ವಿಭಿನ್ನವಾಗಿ ಪ್ರೇಕ್ಷಕರ ಮುಂದೆ ಬಂದಿದ್ದರು. ಅಭಿಮಾನಿಗಳಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು.

  English summary
  Chiranjeevi And salman khan Starrer Godfather To premiere on OTT on this date. God Father the official remake of Lucifer has received a very good response from the audience. know more
  Wednesday, November 2, 2022, 19:19
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X