For Quick Alerts
  ALLOW NOTIFICATIONS  
  For Daily Alerts

  ಕೋಬ್ರಾ, ಕಾರ್ತಿಕೇಯ 2 ಒಟಿಟಿ ಪ್ರಸಾರ ಯಾವಾಗ? ಇಲ್ಲಿದೆ ಮಾಹಿತಿ

  |

  ದಸರಾ ಹಬ್ಬ ಸಮೀಪಿಸುತ್ತಿದ್ದು, ಕೆಲ ಚಿತ್ರಗಳು ಚಿತ್ರಮಂದಿರದಲ್ಲಿ ಬಿಡುಗಡೆಯಾಗಲು ತಯಾರಾಗುತ್ತಿದ್ದರೆ, ಈಗಾಗಲೇ ಚಿತ್ರಮಂದಿರದ ಅಂಗಳಕ್ಕೆ ಬಂದು ತಮ್ಮ ಓಟವನ್ನು ಸಂಪೂರ್ಣವಾಗಿ ಮುಕ್ತಾಯಗೊಳಿಸಿರುವ ಚಿತ್ರಗಳು ಒಟಿಟಿಗೆ ಲಗ್ಗೆ ಇಡಲು ರೆಡಿಯಾಗಿವೆ.

  ವಿಕ್ರಮ್ ಅಭಿನಯದ ಬಹುನಿರೀಕ್ಷಿತ ಚಿತ್ರ ಕೋಬ್ರಾ, ನಿಖಿಲ್ ಅಭಿನಯದ ಬ್ಲಾಕ್ ಬಸ್ಟರ್ ಚಿತ್ರ ಕಾರ್ತಿಕೇಯ 2, ಕಲ್ಯಾಣ್ ರಾಮ್ ಅಭಿನಯದ ಬಿಂಬಿಸಾರ, ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಹಾಗೂ ತಮಿಳಿನ ಕ್ಯಾಪ್ಟನ್ ಚಿತ್ರಗಳು ಈ ವಾರ ಹಾಗೂ ಮುಂದಿನ ವಾರಗಳಲ್ಲಿ ಒಟಿಟಿ ಪರದೆಗೆ ಅಪ್ಪಳಿಸಲಿವೆ. ಈ ಪೈಕಿ ಯಾವ ಚಿತ್ರ ಯಾವ ದಿನಾಂಕದಂದು ಯಾವ ಓಟಿಟಿಯಲ್ಲಿ ತೆರೆಕಾಣಲಿದೆ ಎಂಬುದರ ಕುರಿತ ವಿವರ ಕೆಳಕಂಡಂತಿದೆ.

  • ಕೋಬ್ರಾ: ಚಿಯಾನ್ ವಿಕ್ರಂ ಹಾಗೂ ಕೆಜಿಎಫ್ ಬೆಡಗಿ ಶ್ರೀನಿಧಿ ಶೆಟ್ಟಿ ಅಭಿನಯದ ಕೋಬ್ರಾ ಚಿತ್ರ ಸೆಪ್ಟೆಂಬರ್ 28ಕ್ಕೆ ಸೋನಿ ಲೀವ್ ಅಪ್ಲಿಕೇಶನ್‌ನಲ್ಲಿ ಬಿಡುಗಡೆಯಾಗಲಿದೆ.

  • ಆರ್ಯ ಹಾಗೂ ಐಶ್ವರ್ಯ ರಾಜೇಶ್ ಅಭಿನಯದ ಕ್ಯಾಪ್ಟನ್ ಚಿತ್ರ ಸೆಪ್ಟೆಂಬರ್ 30ರಂದು ಜೀ 5 ಅಪ್ಲಿಕೇಶನ್‌ನಲ್ಲಿ ಬಿಡುಗಡೆಗೊಳ್ಳಲಿದೆ.

  • 777 ಚಾರ್ಲಿ ಸಿನಿಮಾದ ಕನ್ನಡ ವರ್ಷನ್ ವೂಟ್ ಅಪ್ಲಿಕೇಶನ್‌ನಲ್ಲಿ ಈಗಾಗಲೇ ಬಿಡುಗಡೆಯಾಗಿದ್ದು, ಚಿತ್ರದ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ವರ್ಷನ್ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸೆಪ್ಟೆಂಬರ್ 30ಕ್ಕೆ ಬಿಡುಗಡೆಯಾಗಲಿದೆ.

  • ತೆಲುಗಿನ ಬ್ಲಾಕ್ ಬಸ್ಟರ್ ಚಿತ್ರಗಳಾದ ಬಿಂಬಿಸಾರ ಹಾಗೂ ಕಾರ್ತಿಕೇಯ 2 ಅಕ್ಟೋಬರ್ 5 ಅಥವಾ 7ರಂದು ಜೀ 5 ಅಪ್ಲಿಕೇಶನ್‌ನಲ್ಲಿ ಬಿಡುಗಡೆಗೊಳ್ಳಲಿವೆ.

  English summary
  Cobra, Bimbisara and Karthikeya 2 movies OTT release date and platform details. Take a look.
  Monday, September 26, 2022, 22:46
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X