For Quick Alerts
  ALLOW NOTIFICATIONS  
  For Daily Alerts

  'ಈಗಲೇ ನನಗೊಂದು ಕಿಸ್ ಕೊಡು': ಶಮಿತಾ ಶೆಟ್ಟಿ ಮತ್ತು ರಾಕೇಶ್ ಮುತ್ತಿನ ಕಥೆ

  By ಫಿಲ್ಮಿಬೀಟ್ ಡೆಸ್ಕ್
  |

  ಬಿಗ್ ಬಾಸ್ ಒಟಿಟಿ ರಿಯಾಲಿಟಿ ಶೋ ದಿನದಿಂದ ದಿನಕ್ಕೆ ರೋಚಕತೆ ಪಡೆದುಕೊಳ್ಳುತ್ತಿದೆ. ಒಂದೆಡೆ ಕಿತ್ತಾಟ, ಗಲಾಟೆ, ಹೊಡೆದಾಟ ಜೋರಾಗಿದ್ದರೆ ಮತ್ತೊಂದೆಡೆ ಪ್ರೀತಿ, ಪ್ರೇಮಕ್ಕೇನು ಕಡಿಮೆ ಇಲ್ಲ. ಬಿಗ್ ಬಾಸ್ ಮನೆಯಲ್ಲಿ ಪ್ರಾರಂಭದಲ್ಲಿ ರೆಬಲ್ ಆಗಿ ಕಾಣಿಸಿಕೊಂಡಿದ್ದ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ ಇದೀಗ ಕೊಂಚ ಸೈಲೆಂಟ್ ಆಗಿದ್ದಾರೆ. ಅಷ್ಟೆಯಲ್ಲ ಪ್ರೀತಿಯಲ್ಲಿ ಬಿದ್ದಿದ್ದಾರೆ. ದನಕ್ಕೊಂದು ಮುತ್ತಿನ ಕಥೆ ಬಹಿರಂಗವಾಗುತ್ತಿದೆ.

  ಸದಾ ಗುರ್..ಎನ್ನುತ್ತಿದ್ದ ಶಮಿತಾ ಇದೀಗ ಪ್ರೇಮಿಯ ಅವತಾರ ತಾಳಿದ್ದು ಅಚ್ಚರಿ ಮೂಡಿಸಿದೆ. ಬಿಗ್ ಮನೆಯ ಸಹ ಸ್ಪರ್ಧಿ ರಾಕೇಶ್ ಜೊತೆ ಪ್ರೀತಿಯಲ್ಲಿ ಬಿದ್ದಿರುವುದು ಬಹುತೇಕ ಖಚಿತವಾಗಿದೆ. ಅಂದಹಾಗೆ ಬಿಗ್ ಬಾಸ್ ಮನೆಯಲ್ಲಿ ಪ್ರೀತಿ-ಪ್ರೇಮದ ವಿಚಾರಗಳು ಕಾಮನ್. ಪ್ರತಿಯೊಂದು ಬಿಗ್ ಬಾಸ್ ನಲ್ಲೂ ಹೆಚ್ಚು ಸದ್ದು ಮಾಡುವ ವಿಚಾರ ಎಂದರೇ ಪ್ರೀತಿ. ಇದೀಗ ಬಿಗ್ ಬಾಸ್ ಒಟಿಟಿಯಲ್ಲೂ ಹೊಸ ಪ್ರೀತಿ ಪ್ರಾರಂಭವಾಗಿರುವ ಲಕ್ಷಣ ಕಾಣುತ್ತಿದೆ.

  ಬಿಗ್ ಬಾಸ್ ಒಟಿಟಿ: ಕೈಕೈ ಮಿಲಾಯಿಸಿದ ಸ್ಪರ್ಧಿಗಳು; ಮನೆಯಿಂದ ಜೀಶನ್ ಔಟ್ಬಿಗ್ ಬಾಸ್ ಒಟಿಟಿ: ಕೈಕೈ ಮಿಲಾಯಿಸಿದ ಸ್ಪರ್ಧಿಗಳು; ಮನೆಯಿಂದ ಜೀಶನ್ ಔಟ್

  ಶಮಿತಾ ಮತ್ತು ರಾಕೇಶ್ ಇಬ್ಬರು ನಡೆದುಕೊಳ್ಳುತ್ತಿರುವ ರೀತಿ ನೋಡಿ ಇಬ್ಬರ ನಡುವೆ ಪ್ರೀತಿ ಪ್ರಾರಂಭವಾಗಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಊಟ ಮಾಡುತ್ತಾ ಕುಳಿತಿದ್ದ ಶಮಿತಾ ಶೆಟ್ಟಿ, ರಾಕೇಶ್ ನನ್ನ ಕರೆದು ಮಾತನಾಡಿಸುತ್ತಾರೆ. ಅಷ್ಟೆಯಲ್ಲ ಈಗಲೇ ಇಲ್ಲಿ ಬಂದು ಕಿಸ್ ಕೊಡು ಎಂದು ಬೇಡಿಕೆ ಇಟ್ಟರು. ಶಮಿತಾ ಮಾತಿನಂತೆ ರಾಕೇಶ್ ತಕ್ಷಣ ಶಮಿತಾ ಬಳಿ ಹೋಗಿ ಕೆನ್ನೆಗೆ ಮುತ್ತಿಟ್ಟಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

  ರಾಕೇಶ್, ಶಮಿತಾಗೆ ಕಿಸ್ ಮಾಡುತ್ತಿರುವುದು ಇದೇ ಮೊದಲಲ್ಲ. ಈ ಮೊದಲು ಸಹ ಕಿಸ್ ಮಾಡಿ ಸುದ್ದಿಯಾಗಿದ್ದರು. ಶಮಿತಾ ಶೆಟ್ಟಿ ಮಲಗಿದ್ದಾಗ ಆಕೆಯನ್ನು ಎಬ್ಬಿಸಲು ಹೋದ ರಾಕೇಶ್, ಶಮಿತಾಗೆ ಮುತ್ತು ಕೊಟ್ಟು ಎಬ್ಬಿಸಿದ್ದರು. ಶಮಿತಾ ಸಹ ಮುಗುಳ್ನಗುತ್ತಾ ರಾಕೇಶ್ ನ ಸಿಹಿಮುತ್ತನ್ನು ಸ್ವೀಕರಿಸಿ, ಆ ನಂತರ ಹೊರಗೆ ಬಂದು ಇಬ್ಬರೂ ಒಟ್ಟಿಗೆ ಹಾಡಿಗೆ ಸಣ್ಣದಾಗಿ ಹೆಜ್ಜೆ ಸಹ ಹಾಕಿದ್ದರು.

  ಪ್ರಾರಂಭದಲ್ಲಿ ರಾಕೇಶ್ ಮತ್ತು ಶಮಿತಾ ಶೆಟ್ಟಿ ನಡುವೆ ಹೊಂದಾಣಿಕೆಯಾಗುತ್ತಿರಲಿಲ್ಲ. ಆದರೀಗ ಇಬ್ಬರು ಸಖತ್ ಕ್ಲೋಸ್ ಆಗಿದ್ದಾರೆ. ಟಾಸ್ಕ್ ಗಳ ವಿಚಾರದಲ್ಲೂ ಇಬ್ಬರೇ ಜೋಡಿಯಾಗಿ ಆಡುತ್ತಾರೆ. ಇತ್ತಾಚಿಗೆ ಪಾರ್ಟನರ್ ಆಯ್ಕೆ ವಿಚಾರದಲ್ಲೂ ಶಮಿತಾ, ರಾಕೇಶ್ ನನ್ನೇ ಆಯ್ಕೆ ಮಾಡಿಕೊಳ್ಳುವ ಮೂಲಕ ಗಮನ ಸೆಳೆದಿದ್ದರು. ಇಬ್ಬರು ಈಗ ಬಿಗ್ ಮನೆಯ ಹೈಲೆಟ್ಸ್ ಆಗಿದ್ದಾರೆ. ಇಬ್ಬರ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಶಮಿತಾ ಮತ್ತು ರಾಕೇಶ್ ಅಭಿಮಾನಿಗಳು ವಿಡಿಯೋ ಶೇರ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  ಅಷ್ಟೆಯಲ್ಲ ಮತ್ತೊಂದು ವಿಡಿಯೋದಲ್ಲಿ ರಾಕೇಶ್, ಶಮಿತಾಗೆ ಮೇಕಪ್ ಮಾಡುವ ವಿಡಿಯೋ ಕೂಡ ವೈರಲ್ ಆಗಿದೆ. ಶಮಿತಾ ಮಲಗಿದ್ದಾಗ ಮುಖದ ಮೇಲೆ ಚಿತ್ರ ಬಿಡಿಸುತ್ತಿರುವುದು ಸಹ ಗಮನ ಸೆಳೆಯುತ್ತಿದೆ. ರಾಕೇಶ್ ತನ್ನ ವಿಚಾರಗಳನ್ನು ಶಮಿತಾ ಬಳಿ ಹೆಚ್ಚು ಚರ್ಚೆ ಮಾಡುತ್ತಿರುತ್ತಾರೆ. ಇತ್ತೀಚಿಗಷ್ಟೆ ರಾಕೇಶ್ ತನ್ನ ಪತ್ನಿ ರಿಧಿ ಡೋಗ್ರಾ ಅವರಿಗೆ ವಿಚ್ಛೇದನ ನೀಡಿದ ಬಗ್ಗೆ ಮಾತನಾಡಿದ್ದರು. ಅಲ್ಲದೆ ಖಿನ್ನತೆಯಿಂದ ಬಳಲುತ್ತಿದ್ದ ವಿಚಾರವನ್ನು ಶೇರ್ ಮಾಡಿದ್ದರು. ತಂದೆಯನ್ನು ಕಳೆದುಕೊಂಡ ಬಳಿಕ ರಾಕೇಶ್ ಮೇಲಾದ ಕೆಟ್ಟ ಪರಿಣಾಮದ ಬಗ್ಗೆ ಶಮಿತಾ ಜೊತೆ ಬಹಿರಂಗ ಪಡಿಸಿದ್ದರು.

  ಇಬ್ಬರ ಕ್ಯೂಟ್ ಬಾಂಡಿಂಗ್ ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್, ಕಿತ್ತಾಟ, ಹೊಡೆದಾಟಗಳ ನಡುವೆಯೂ ಹೆಚ್ಚು ಗಮನ ಸೆಳೆಯುತ್ತಿದೆ. ಶಮಿತಾ ಶೆಟ್ಟಿ ರಾಕೇಶ್ ಪ್ರೀತಿಯಲ್ಲಿ ಬಿದ್ದಿದ್ದಾರಾ ಎನ್ನುವ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ ನೆಟ್ಟಿಗರು.

  English summary
  'Come here and give me a kiss right now', Shamita Shetty asks for a kiss from Raqesh Bapat.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X