For Quick Alerts
  ALLOW NOTIFICATIONS  
  For Daily Alerts

  ಭಾರತದ ಭ್ರಷ್ಟ ಕೋಟ್ಯಧಿಪತಿಗಳ ಕುರಿತಾದ 'ತನಿಖಾ ಡಾಕ್ಯುಮೆಂಟರಿ'ಗೆ ಕೋರ್ಟ್ ತಡೆ!

  |

  ವಿಜಯ್ ಮಲ್ಯ, ನೀರವ್ ಮೋದಿ, ಸುಬ್ರತೋ ರಾಯ್ ಇವರೆಲ್ಲ ಭಾರತದ ಕೋಟ್ಯಧಿಪತಿಗಳಲ್ಲಿ ಒಬ್ಬರಾಗಿದ್ದವರು. ಆದರೆ ಈಗ ಆರ್ಥಿಕ ಅಪರಾಧಿಗಳು.

  ತಮ್ಮ ಚಾಕಚಕ್ಯತೆ, ಬುದ್ಧಿಶಕ್ತಿಯಿಂದ ಉದ್ಯಮದಲ್ಲಿ ಜಯಿಸಿ ದೊಡ್ಡ ಸಾಮ್ರಾಜ್ಯವನ್ನೇ ಕಟ್ಟಿಕೊಂಡಿದ್ದ ಮಲ್ಯ, ನೀರವ್ ಮೋದಿ ಅವರುಗಳು ಇಂದು ಬಂಧನ ಭೀತಿಯಿಂದ ನಡುಗುತ್ತಿದ್ದಾರೆ.

  ಸಾಯಿ ಪಲ್ಲವಿ ಸಿನಿಮಾ ಖರೀದಿಗೆ ಮುಗಿಬಿದ್ದ ಒಟಿಟಿಸಾಯಿ ಪಲ್ಲವಿ ಸಿನಿಮಾ ಖರೀದಿಗೆ ಮುಗಿಬಿದ್ದ ಒಟಿಟಿ

  ಅರಸರಂತೆ ಬಾಳಿದ್ದ ವಿಜಯ್ ಮಲ್ಯ, ನೀರವ್ ಮೋದಿ ದೇಶದಿಂದಲೇ ಪರಾರಿಯಾಗಿ, ಅಜ್ಞಾತವಾಗಿ ಎಲ್ಲಿಯೋ ವಾಸಿಸುತ್ತಿದ್ದಾರೆ. ಇವರ ಈ ಸ್ಥಿತಿಗೆ ಕಾರಣವೇನು? ಅಷ್ಟು ದೊಡ್ಡ ಸಾಮ್ರಾಜ್ಯ ಒಮ್ಮೆಲೆ ಕುಸಿದಿದ್ದು ಹೇಗೆ? ಹೀಗೆ ಹಲವು ವಿಷಯಗಳನ್ನು ಒಳಗೊಂಡ ಡಾಕ್ಯುಮೆಂಟರಿ ಒಂದು ಬಿಡುಗಡೆ ಆಗಿದೆ.

  The Social Dilemma: ಸ್ಮಾರ್ಟ್‌ಫೋನ್ ಉಳ್ಳವರು ನೋಡಲೇಬೇಕಾದ ಡಾಕ್ಯುಮೆಂಟರಿThe Social Dilemma: ಸ್ಮಾರ್ಟ್‌ಫೋನ್ ಉಳ್ಳವರು ನೋಡಲೇಬೇಕಾದ ಡಾಕ್ಯುಮೆಂಟರಿ

  ಬ್ಯಾಡ್‌ಬಾಯ್ಸ್‌ ಬಿಲಿಯನೇರ್; ಇಂಡಿಯಾ ಬಿಡುಗಡೆ

  ಬ್ಯಾಡ್‌ಬಾಯ್ಸ್‌ ಬಿಲಿಯನೇರ್; ಇಂಡಿಯಾ ಬಿಡುಗಡೆ

  ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ 'ಬ್ಯಾಡ್‌ಬಾಯ್ ಬಿಲಿಯನೇರ್; ಇಂಡಿಯಾ' ಎಂಬ ಡಾಕ್ಯುಮೆಂಟರಿ ಬಿಡುಗಡೆ ಆಗಿದೆ. ಈ ಡಾಕ್ಯುಮೆಂಟರಿ ಬಿಡುಗಡೆಗೆ ತಡೆ ನೀಡಬೇಕೆಂದು ಮೆಹುಲ್ ಚೋಕ್ಸಿ, ಬಿ ರಾಮಲಿಂಗ ರಾಜು, ಸುಬ್ರತೊ ರಾಯ್ ಅವರುಗಳು ನ್ಯಾಯಾಲಯದ ಮೆಟ್ಟಿಲೇರಿದ್ದರು.

  ನಾಲ್ಕನೇ ಎಪಿಸೋಡ್‌ನಲ್ಲಿ ರಾಮಲಿಂಗ ರಾಜು ಕುರಿತ ಮಾಹಿತಿ

  ನಾಲ್ಕನೇ ಎಪಿಸೋಡ್‌ನಲ್ಲಿ ರಾಮಲಿಂಗ ರಾಜು ಕುರಿತ ಮಾಹಿತಿ

  ಹಲವು ಎಪಿಸೋಡ್‌ಗಳನ್ನು ಈ ಡಾಕ್ಯುಮೆಂಟರಿ ಹೊಂದಿದ್ದು, ಒಂದೊಂದು ಎಪಿಸೋಡ್‌ನಲ್ಲಿ ಒಬ್ಬೊಬ್ಬ ಕೋಟ್ಯಧಿಪತಿ ಬಗ್ಗೆ ಮಾಹಿತಿ ನೀಡಲಾಗುತ್ತದೆ. ನಾಲ್ಕನೇ ಎಪಿಸೋಡ್‌ನಲ್ಲಿ ಸತ್ಯಂ ಕಂಪ್ಯೂಟರ್‌ನ ರಾಮಲಿಂಗ ರಾಜು ಕುರಿತ ಮಾಹಿತಿ ಇದೆ.

  ನ್ಯಾಯಾಲಯದಿಂದ ತಡೆ ತಂದ ರಾಮಲಿಂಗ ರಾಜು

  ನ್ಯಾಯಾಲಯದಿಂದ ತಡೆ ತಂದ ರಾಮಲಿಂಗ ರಾಜು

  ರಾಮಲಿಂಗಾ ರೆಡ್ಡಿ ಮತ್ತು ಇತರ ಕೆಲವರು ನ್ಯಾಯಾಲಯದ ಮೆಟ್ಟಿಲೇರಿರುವ ಕಾರಣ ನಾಲ್ಕನೇ ಎಪಿಸೋಡ್ ಅನ್ನು ಬಿಡುಗಡೆ ಮಾಡದಂತೆ ಹೈದರಾಬಾದ್‌ನ ನ್ಯಾಯಾಲಯವು ತಡೆ ನೀಡಿದೆ. ಆದರೆ ನ್ಯಾಯಾಲಯದ ಆದೇಶದ ವಿರುದ್ಧ ನೆಟ್‌ಫ್ಲಿಕ್ಸ್‌ ಸಹ ನ್ಯಾಯಾಲಯಕ್ಕೆ ಹೋಗಲಿದೆ.

  KGF ರಿಲೀಸ್ ಗೂ ಮುಂಚೆ Sanjay Dutt ಗೆ ಬಂತು ಈ ಪರಿಸ್ಥಿತಿ | Filmibeat Kannada
  ಮೂರು ಎಪಿಸೋಡ್‌ಗಳು ಮಾತ್ರವೇ ಬಿಡುಗಡೆ

  ಮೂರು ಎಪಿಸೋಡ್‌ಗಳು ಮಾತ್ರವೇ ಬಿಡುಗಡೆ

  ಪ್ರಸ್ತುತ ಮೂರು ಎಪಿಸೋಡ್‌ಗಳಷ್ಟೆ ಬಿಡುಗಡೆ ಆಗಿದ್ದು, ಮೊದಲನೇಯ ಎಪಿಸೋಡ್‌ನಲ್ಲಿ ವಿಜಯ್ ಮಲ್ಯ ಹಾಗೂ ಆತನ ಏಳು-ಬೀಳು. ಎರಡನೇ ಎಪಿಸೋಡ್‌ನಲ್ಲಿ ನೀರವ್ ಮೋದಿಯ ಏಳು-ಬೀಳು. ಮೂರನೇ ಎಪಿಸೋಡ್‌ನಲ್ಲಿ ಸುಬ್ರತೋ ರಾಯ್ ಕುರಿತು ಮಾಹಿತಿ ನೀಡಲಾಗಿದೆ.

  English summary
  Hyderabad court give stay to air Bad Boy Billionaires India documentary's fourth episode which is about Sathyam's Ramalinga Raju.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X