For Quick Alerts
  ALLOW NOTIFICATIONS  
  For Daily Alerts

  ತಿಂಗಳಿಗೂ ಮೊದಲೇ ಓಟಿಟಿಗೆ 'ನಾನೇ ವರುವೇನ್' ಎನ್ನುತ್ತಿರುವ ಧನುಷ್!: ಎಲ್ಲಿಗೆ.. ಯಾವಾಗ?

  |

  ದೊಡ್ಡ ದೊಡ್ಡ ಸಿನಿಮಾಗಳಲ್ಲಿ ಬಿಡುಗಡೆಯಾಗಿದ್ದ ಧನುಷ್ ನಟನೆಯ 'ನಾನೇ ವರುವೇನ್' ಸಿನಿಮಾ ಓಟಿಟಿ ರಿಲೀಸ್‌ಗೆ ಕೌಂಡ್‌ಡೌನ್ ಶುರುವಾಗಿದೆ. ಸೆಲ್ವ ರಾಘವನ್ ನಿರ್ದೇಶನದ ಈ ಸೈಕಲಾಜಿಕಲ್ ಹಾರರ್ ಥ್ರಿಲ್ಲರ್ ಚಿತ್ರದಲ್ಲಿ ಧನುಷ್ ಡಬಲ್ ರೋಲ್‌ನಲ್ಲಿ ನಟಿಸಿದ್ದಾರೆ. ಸೆಪ್ಟೆಂಬರ್ 29ಕ್ಕೆ ತೆರೆಗಪ್ಪಳಿಸಿದ್ದ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೀಗ ತಿಂಗಳಿಗೂ ಮೊದಲೇ ಸಿನಿಮಾ ಸ್ಮಾಲ್‌ಸ್ಕ್ರೀನ್‌ಗೆ ಎಂಟ್ರಿ ಕೊಡುವ ಸುಳಿವು ಸಿಗುತ್ತಿದೆ.

  ಮಣಿರತ್ನಂ ನಿರ್ದೇಶನದ 'ಪೊನ್ನಿಯಿನ್ ಸೆಲ್ವನ್', ಬಾಲಿವುಡ್‌ನ 'ವಿಕ್ರಂವೇದ', ಕನ್ನಡ 'ಕಾಂತಾರ' ಸಿನಿಮಾ ಜೊತೆಗೆ 'ನಾನೇ ವರುವೇನ್' ಸಿನಿಮಾ ರಿಲೀಸ್ ಆಗಿತ್ತು. ನಂತರ ಚಿರಂಜೀವಿ ನಟನೆಯ 'ಗಾಡ್‌ಫಾದರ್', ನಾಗಾರ್ಜುನ ನಟನೆಯ 'ದಿ ಘೋಸ್ಟ್' ಸಿನಿಮಾಗಳು ಕೂಡ ಪ್ರೇಕ್ಷಕರ ಮುಂದೆ ಬಂದಿತ್ತು. ದೊಡ್ಡ ದೊಡ್ಡ ಸಿನಿಮಾಗಳ ನಡುವೆ ಧನುಷ್ ನಟನೆಯ 'ನಾನೇ ವರುವೇನ್' ಬಂದಿದ್ದೇ ಗೊತ್ತಾಗಲಿಲ್ಲ. ಸದ್ಯ ಸಿನಿಮಾ 25 ದಿನ ಪೂರೈಸಿದೆ. ಆದರೆ ಸಿನಿಮಾ ಪ್ರೇಕ್ಷಕರ ಅಭಾವ ಎದುರಿಸುತ್ತಿದೆ. ಇದೆಲ್ಲದರ ಮಧ್ಯೆ ಓಟಿಟಿ ಸ್ಟ್ರೀಮಿಂಗ್ ಬಗ್ಗೆ ಚರ್ಚೆ ಶುರುವಾಗಿದೆ.

  ವಿಚ್ಛೇದನದಿಂದ ಹಿಂದೆ ಸರಿದ ಧನುಶ್-ಐಶ್ವರ್ಯಾ!ವಿಚ್ಛೇದನದಿಂದ ಹಿಂದೆ ಸರಿದ ಧನುಶ್-ಐಶ್ವರ್ಯಾ!

  ಬಹಳ ವರ್ಷಗಳ ನಂತರ ಸಹೋದರ ಸೆಲ್ವ ರಾಘವನ್ ಜೊತೆ ಧನುಷ್ ಕೆಲಸ ಮಾಡಿದ್ದಾರೆ. ಕಥೆ ವಿಚಾರದಲ್ಲಿ ಪ್ರಯೋಗ ಮಾಡುವ ನಟ ಇಲ್ಲೂ ಅದೇ ಪ್ರಯತ್ನ ಮಾಡಿದ್ದಾರೆ. ಸೆಲ್ವ ರಾಘವನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವುದರ ಜೊತೆಗೆ ಒಂದು ಪಾತ್ರದಲ್ಲಿ ನಟಿಸಿದ್ದಾರೆ. ಇನ್ನು ಚಿತ್ರದಲ್ಲಿ ಪ್ರಭು ಹಾಗೂ ಕದಿರ್ ಎನ್ನುವ ಅವಳಿ ಸಹೋದರರ ಪಾತ್ರಗಳಲ್ಲಿ ಮಿಂಚಿದ್ದಾರೆ. ಧನುಷ್ ತಾವೇ ಹೀರೊ ತಾವೇ ವಿಲನ್ ಆಗಿ ಅಬ್ಬರಿಸಿದ್ದಾರೆ. ಮುಗ್ಧ ಪ್ರಭು ಹಾಗೂ ಸೈಕೋ ಕದಿರ್ ಆಗಿ ಮೋಡಿ ಮಾಡಿದ್ದಾರೆ.

  ಅಕ್ಟೋಬರ್ 28ಕ್ಕೆ 'ನಾನೇ ವರುವೇನ್' ಸಿನಿಮಾ ಅಮೇಜಾನ್ ಪ್ರೈಮ್‌ನಲ್ಲಿ ಸ್ಟ್ರೀಮಿಂಗ್ ಆಗುವ ಸಾಧ್ಯತೆಯಿದೆ. ರಿಲೀಸ್ ಆಗಿ ತಿಂಗಳಿಗೂ ಮೊದಲೇ ಸಿನಿಮಾ ಸ್ಮಾಲ್‌ಸ್ಕ್ರೀನ್‌ಗೆ ಎಂಟ್ರಿ ಕೊಡುವ ಸುಳಿವು ಸಿಗುತ್ತಿದೆ. ಧನುಷನ್ ಜೊತೆಗೆ ಚಿತ್ರದಲ್ಲಿ ಇಂಧುಜಾ ರವಿಚಂದ್ರನ್, ಎಲ್ಲಿ ಅವ್ರಮ್, ಪ್ರಭು, ಯೋಗಿಬಾಬು, ಶರವಣ ಸುಬ್ಬಯ್ಯ ಸೇರಿದಂತೆ ಸಾಕಷ್ಟು ಜನ ಕಲಾವಿದರು ನಟಿಸಿದ್ದಾರೆ. ಕಲೈಪುಲಿ ಎಸ್. ತನು ನಿರ್ಮಾಣದ ಈ ಚಿತ್ರಕ್ಕೆ ಯುವನ್ ಶಂಕರ್ ರಾಜಾ ಸಂಗೀತ ಸಂಯೋಜನೆ ಮಾಡಿದ್ದಾರೆ.

  ಹಾಸ್ಯನಟನ ಚಿಕಿತ್ಸೆಗೆ ಆರ್ಥಿಕ ಸಹಾಯ ಮಾಡಿದ ನಟ ಧನುಶ್-ವಿಜಯ್ ಸೇತುಪತಿಹಾಸ್ಯನಟನ ಚಿಕಿತ್ಸೆಗೆ ಆರ್ಥಿಕ ಸಹಾಯ ಮಾಡಿದ ನಟ ಧನುಶ್-ವಿಜಯ್ ಸೇತುಪತಿ

  Dhanush Starrer Naane Varuvean Movie OTT Release Date and Streaming Platform Confirmed

  'ನೇನೆ ವಸ್ತುನ್ನಾ' ಹೆಸರಿನಲ್ಲಿ ಈ ಸಿನಿಮಾ ತೆಲುಗಿಗೂ ಡಬ್ ಆಗಿ ಬಿಡುಗಡೆಯಾಗಿದೆ. ಇನ್ನು ಚಿತ್ರದ ಸ್ಯಾಟಲೈಟ್ ರೈಟ್ಸ್ ಸನ್ ಟಿವಿ ಪಾಲಾಗಿದೆ. ಸದ್ಯ ಧನುಷ್ 'ವಾಥಿ', 'ಸರ್' ಹಾಗೂ 'ಕ್ಯಾಪ್ಟನ್ ಮಿಲ್ಲರ್' ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. 11 ವರ್ಷಗಳ ನಂತರ ಸೆಲ್ವ ರಾಘವನ್ ಹಾಗೂ ಧನುಷ್ ಒಟ್ಟಿಗೆ ಸಿನಿಮಾ ಮಾಡಿದ್ದರು. ಆದರೆ ಯಾಕೋ ಸಿನಿಮಾ ಪ್ರೇಕ್ಷಕರಿಗೆ ಅಷ್ಟಾಗಿ ಇಷ್ಟವಾಗಲಿಲ್ಲ. ಮಲ್ಟಿಸ್ಟಾರರ್‌ 'ಪೊನ್ನಿಯಿನ್ ಸೆಲ್ವನ್' ಎದುರು ಧನುಷ್ ಸಿನಿಮಾ ಮಂಕಾಗಿತ್ತು.

  English summary
  Dhanush Starrer Naane Varuvean Movie OTT Release Date and Streaming Platform Confirmed. Naane Varuvean is a Thriller written by Selvaraghavan And Starring Dhanush That Released in Theaters on September 29. know More.
  Thursday, October 20, 2022, 10:29
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X