For Quick Alerts
  ALLOW NOTIFICATIONS  
  For Daily Alerts

  'RRR' ಅತ್ಯದ್ಭುತ ಎಂದ ಹಾಲಿವುಡ್ ಸಿನಿಮಾಕರ್ಮಿ, 'ಕೆಜಿಎಫ್ 2' ನೋಡಿ ಎಂದ ನೆಟ್ಟಿಗರು

  |

  ಚಿತ್ರಮಂದಿರಗಳಲ್ಲಿ ದೊಡ್ಡ ಮಟ್ಟದಲ್ಲಿ ಹಣ ದೋಚಿದ ರಾಜಮೌಳಿ ನಿರ್ದೇಶನದ 'RRR' ಸಿನಿಮಾ ಒಟಿಟಿಯಲ್ಲಿಯೂ ದಾಖಲೆಗಳನ್ನು ಬರೆಯುತ್ತಿದೆ. ಕೇವಲ ದಾಖಲೆಗಳು ಮಾತ್ರವಲ್ಲ, ವಿಶ್ವ ಮಟ್ಟದ ಸಿನಿಮಾಕರ್ಮಿಗಳಿಗೆ ಅಚ್ಚರಿ ಮೂಡಿಸುತ್ತಿದೆ ಈ ಸಿನಿಮಾ.

  ನೆಟ್‌ಫ್ಲಿಕ್ಸ್ ಮೂಲಕ ವಿಶ್ವ ಸಿನಿಮಾ ಪ್ರೇಮಿಗಳನ್ನು ತಲುಪಿರುವ 'RRR' ಅನ್ನು ವಿದೇಶದಲ್ಲಿ ನೆಲೆಸಿರುವ ಭಾರತೀಯರು ಮಾತ್ರವಲ್ಲ, ಹಲವು ವಿದೇಶಿ ಸಿನಿಮಾ ದಿಗ್ಗಜರು ಸಹ ವೀಕ್ಷಿಸಿದ್ದು, ರಾಜಮೌಳಿಯ ಸಿನಿಮಾ ಕಟ್ಟುವಿಕೆಗೆ ಮಾರು ಹೋಗಿದ್ದಾರೆ.

  'ವಿಕ್ರಂ' ಮುಂದೆ 'ಕೆಜಿಎಫ್ 2' ಬಚ್ಚಾ: ಮತ್ತೆ ಖ್ಯಾತೆ ತೆಗೆದ ಕಮಾಲ್! 'ವಿಕ್ರಂ' ಮುಂದೆ 'ಕೆಜಿಎಫ್ 2' ಬಚ್ಚಾ: ಮತ್ತೆ ಖ್ಯಾತೆ ತೆಗೆದ ಕಮಾಲ್!

  ಕೆಲವು ದಿನಗಳ ಹಿಂದೆಯಷ್ಟೆ ಹಾಲಿವುಡ್‌ನ ಜನಪ್ರಿಯ ನಟ ಪ್ಯಾಟನ್ ಓಸ್ವಾಲ್ಟ್ 'RRR' ಸಿನಿಮಾ ನೋಡಿ ದಂಗಾಗಿದ್ದರು. 'RRR' ಒಂದು 'ಕ್ರೇಜಿಯೆಸ್ಟ್' ಸಿನಿಮಾ ಎಂದು ಬಹುವಾಗಿ ಹೊಗಳಿದ್ದರು. ಈಗ ಹಾಲಿವುಡ್‌ನ ಕ್ರೇಜಿಯೆಸ್ಟ್‌ ಸಿನಿಮಾಗಳ ಆಗರ ಮಾರ್ವೆಲ್‌ನ ಜನಪ್ರಿಯ ಸಿನಿಮಾ ಬರಹಗಾರರೊಬ್ಬರು 'RRR' ಸಿನಿಮಾವನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ.

  ಅದ್ಭುತ ಕತಾಕಲ್ಪನೆಯ 'ಡಾಕ್ಟರ್ ಸ್ಟ್ರೇಂಜ್' ಸಿನಿಮಾದ ಸಹ ಬರಹಗಾರ ಸಿ ರಾಬರ್ಟ್‌ ಕಾರ್ಗೆಲ್, RRR ಸಿನಿಮಾ ವೀಕ್ಷಿಸಿದ್ದು, ಸಿನಿಮಾವನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ರಾಬರ್ಟ್, ''ರಾತ್ರಿ ಗೆಳೆಯರು ಮನೆಗೆ ಬಂದಿದ್ದರು. ನನ್ನನ್ನು 'RRR' ಜಗತ್ತಿಗೆ ಸೇರಿಸಿದರು. ಈಗ ನಾನು ಪೂರ್ಣವಾಗಿ, ಪ್ರಮಾಣಿಕವಾಗಿ, ಆಳವಾಗಿ RRR ಜಗತ್ತಿನ ಸದಸ್ಯನಾಗಿಬಿಟ್ಟಿದ್ದೇನೆ. ಈ ಸಿನಿಮಾವು ಅತ್ಯಂತ ಪ್ರಾಮಾಣಿಕ, ಕ್ರೇಜಿಯೆಸ್ಟ್, ಭಿನ್ನವಾದ ಬ್ಲಾಕ್ ಬಸ್ಟರ್ ಸಿನಿಮಾ. ನಾನು ಮತ್ತು ಜೆಸ್ ಈ ವಾರಾಂತ್ಯಕ್ಕೆ ಮತ್ತೆ ಈ ಸಿನಿಮಾವನ್ನು ಖಂಡಿತ ನೋಡಲಿದ್ದೇವೆ'' ಎಂದು ಬರೆದುಕೊಂಡಿದ್ದಾರೆ.

  ವಿಶೇಷವೆಂದರೆ ರಾಬರ್ಟ್‌, RRR ಸಿನಿಮಾವನ್ನು ತೆಲುಗು ಭಾಷೆಯಲ್ಲಿ ನೋಡಿದ್ದಾರೆ. ''ನೀವು ಈ ಸಿನಿಮಾ ನೋಡಲು ಬಹಳ ತಡ ಮಾಡಿಬಿಟ್ಟಿರಿ'' ಎಂದು ನೆಟ್ಟಿಗನ ಕಮೆಂಟ್‌ಗೆ ಪ್ರತಿಕ್ರಿಯೆ ನೀಡಿರುವ ರಾಬರ್ಟ್, ''ನಾನು ಸಿನಿಮಾವನ್ನು ಮೂಲ ಭಾಷೆಯಲ್ಲಿ ನೋಡಲು ಕಾಯುತ್ತಿದ್ದೆ'' ಎಂದಿದ್ದಾರೆ.

  ರಾಬರ್ಟ್‌ ಟ್ವೀಟ್‌ ಕಮೆಂಟ್ ಮಾಡಿರುವ ಇನ್ನು ಕೆಲವರು 'ಕೆಜಿಎಫ್' ಮತ್ತು 'ಕೆಜಿಎಫ್ 2' ಸಿನಿಮಾವನ್ನು ಸಹ ನೋಡಿ. ಅದೂ ಸಹ ದಕ್ಷಿಣ ಭಾರತದ ಅತ್ಯದ್ಭುತ ಸಿನಿಮಾ. ಭಾರತದ ಅತಿ ದೊಡ್ಡ ಬ್ಲಾಕ್‌ಬಾಸ್ಟರ್ 'ಕೆಜಿಎಫ್ 2' ಎಂದು ಹೇಳಿದ್ದಾರೆ.

  English summary
  Doctor Strange movie co writer Robert Cargill praised RRR movie. He said this is craziest Sincere Weirdest blockbuster.
  Wednesday, June 8, 2022, 10:22
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X